ಕಪ್ಪಾದ ಬಾಳೆಹಣ್ಣಿನಿಂದ 3 ಸಾಮಗ್ರಿಗಳನ್ನು ಬಳಸಿ ಕೇವಲ 5 ನಿಮಿಷದಲ್ಲಿ ರುಚಿಯಾದ ಲಾಡು ಮಾಡುವ ವಿಧಾನ, ಮನೆಯವರೆಲ್ಲ ಇಷ್ಟ ಪಟ್ಟು ತಿಂತಾರೆ.
Banana Laadu Recipe: ಎಷ್ಟೋ ಮನೆಗಳಲ್ಲಿ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಬಾಳೆಹಣ್ಣನ್ನು ತಿನ್ನುವುದೇ ಇಲ್ಲ. ಬಾಳೆ ಹಣ್ಣು ಅವರ ಮುಂದೆ ಒಣಗುತ್ತಿದ್ದರೂ ಸಹ ಅದರ ಕಡೆ ಕೈ ಕೂಡ ಹಾಕುವುದಿಲ್ಲ. ಆದರೆ ಈ ರೀತಿಯ ಒಂದು ರೆಸಿಪಿಯನ್ನು ಮಾಡಿದರೆ, ಕ್ಷಣಮಾತ್ರದಲ್ಲಿಯೇ ಅವೆಲ್ಲವೂ ಸಹ ಖಾಲಿಯಾಗುತ್ತದೆ. ಹಾಗಾದರೆ ಈ ಒಂದು ರೀತಿಯ ಬಾಳೆಹಣ್ಣಿನ ಲಾಡನ್ನು ಹೇಗೆ ತಯಾರಿಸಬೇಕು ಮತ್ತು ಅದಕ್ಕೆ ಏನೆಲ್ಲ ಬಳಸಬೇಕು ಎಂಬುದನ್ನು ನೋಡೋಣ ಬನ್ನಿ.
ಬಾಳೆ ಹಣ್ಣಿನ ಲಾಡು ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು.
ಇದಕ್ಕೆ ಅತಿ ಹೆಚ್ಚಿನ ಸಾಮಗ್ರಿಗಳು ಸಹ ಬೇಕಾಗಿಲ್ಲ ಬೇಕಾಗಿರುವುದು ಬರೀ ಮೂರೇ ಮೂರು. ಅವು ಯಾವುವು ಎಂದರೆ ಮೊದಲಿಗೆ ಬಾಳೆಹಣ್ಣು ಮತ್ತು ಯಾವುದೇ ರೀತಿಯಾದಂತಹ ಬಿಸ್ಕೆಟ್ ಮತ್ತು ಕೋಟಿಂಗ್ಗಾಗಿ ತೆಂಗಿನ ಕಾಯಿಯ ಪುಡಿ ಈ ಮೂರು ಇದ್ದರೆ ರುಚಿಕರವಾದಂತಹ ಒಂದು ಲಡ್ಡು ರೆಸಿಪಿ ರೆಡಿಯಾಗುತ್ತದೆ. ಇದು ಮಕ್ಕಳಿಗಂತೂ ಮಾಡಿಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ತಡ ಮಾಡದೆ ಅದು ಹೇಗೆ ಮಾಡಬೇಕೆಂದು ತಿಳಿಯೋಣ.
ಬಾಳೆ ಹಣ್ಣಿನ ಲಾಡು ಮಾಡುವ ವಿಧಾನ.
ಮೊದಲಿಗೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಬಾಳೆಹಣ್ಣನ್ನು ತೆಗೆದುಕೊಳ್ಳಬೇಕು. ಅದರ ಸಿಪ್ಪೆಯನ್ನು ತೆಗೆದು ಒಂದು ಸ್ನ್ಯಾಷ್ ನಲ್ಲಿ ಚೆನ್ನಾಗಿ ಉಂಡೆಗಳು ಇಲ್ಲದ ರೀತಿಯಲ್ಲಿ ಅವುಗಳನ್ನು ಸ್ಮ್ಯಾಶ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ಮಿಕ್ಸಿ ಜಾರ್ ನಲ್ಲಿ ಕೂಡ ಬಾಳೆಹಣ್ಣನ್ನು ಹಾಕಿ ರುಬ್ಬಿಕೊಳ್ಳಬಹುದು.
ನಂತರ ಅದರೊಳಗೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಪಾರ್ಲೆಜಿ ಮಾರಿಗೋಲ್ಡ್ ಅಥವಾ ಕ್ರೀಮ್ ಬಿಸ್ಕೆಟ್ಸ್ ಕುಕ್ಕೀಸ್ ಯಾವುದೇ ಬಿಸ್ಕೆಟ್ ಗಳನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಂಡು ಆ ಬಾಳೆಹಣ್ಣಿನ ಸ್ಮ್ಯಾಶ್ ಒಳಗೆ ಲಾಡು ಉಂಡೆಯ ಕನ್ಸಿಸ್ಟೆನ್ಸಿ ಬರುವವರೆಗೂ ಚೆನ್ನಾಗಿ ಕಲಸಬೇಕು.
ಇಲ್ಲಿ ಸಕ್ಕರೆಯ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಬಿಸ್ಕೆಟ್ಸ್ ನಲ್ಲಿ ಮೊದಲೇ ಸಕ್ಕರೆಯ ಅಂಶವಿರುತ್ತದೆ ಅಷ್ಟೇ ಅಲ್ಲದೆ ಬಾಳೆಹಣ್ಣು ಸಹ ಸಿಹಿಯಿಂದ ಕೂಡಿರುತ್ತದೆ. ಅದಾದ ನಂತರ ಅದನ್ನು ಹದವಾಗಿ ಕಲಸಿ ಉಂಡೆ ಕಟ್ಟಿಕೊಳ್ಳಬೇಕು. ನಂತರ ಅದರೊಳಗೆ ಒಣಗಿದ ತೆಂಗಿನ ಪುಡಿಯಿಂದ ಮೇಲೆ ಕೋಟ್ ಮಾಡಿಕೊಂಡರೆ ಸಾಕು ಹೆಲ್ತಿ ಲಾಡು ರೆಡಿಯಾಗುತ್ತದೆ.
ಅಷ್ಟೇ ಅಲ್ಲದೆ ಬಾಳೆ ಹಣ್ಣಿನಲ್ಲಿ ಪೊಟ್ಯಾಶಿಯಂ ವಿಟಮಿನ್ಸ್ ಫೈಬರ್ ಇರುವುದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ನಿಮ್ಮ ಮನೆಯಲ್ಲಿ ಬಾಳೆಹಣ್ಣನ್ನು ಯಾರು ಮುಟ್ಟದಿದ್ದರೆ ಈ ರೀತಿ ಮಾಡಿಕೊಡಿ. ಎಲ್ಲರೂ ಸಹ ತುಂಬಾ ಇಷ್ಟವಾಗಿ ತಿನ್ನುತ್ತಾರೆ. ಮಕ್ಕಳು ಆಗಿರಬಹುದು ಅಥವಾ ಹಿರಿಯರು ಆಗಿರಬಹುದು ಈ ರೀತಿಯ ಒಂದು ಲಾಡನ್ನು ತುಂಬಾನೇ ಇಷ್ಟಪಡುತ್ತಾರೆ. ಬಾಳೆ ಹಣ್ಣಿನ ಲಾಡು ಮಾಡುವ ವಿಧಾನ ಇಲ್ಲಿದೆ ನೋಡಿ. ಬಾಳೆ ಹಣ್ಣು ಲಾಡು ಮಾಡುವ ವಿಡಿಯೋ
ಇದನ್ನು ಓದಿ –
ಟೊಮೊಟೊ ಸಕ್ಕತ್ ದುಬಾರಿ! ಅದರ ಬದಲು 5 ಪದಾರ್ಥಗಳನ್ನು ಬಳಸಿ ಟೊಮೇಟೊ ಇಲ್ಲದೆ ಸಕ್ಕತ್ ಅಡುಗೆ ಮಾಡಬಹುದು.
ಉತ್ತಮ ಆರೋಗ್ಯ ಪಡೆಯಲು ಅಡುಗೆಗೆ ಯಾವ ಎಣ್ಣೆ ಬಳಸಿದರೆ ಉತ್ತಮ, ಈ 3 ಎಣ್ಣೆಗಳು ಮಾತ್ರ ಬಹಳ ಶ್ರೇಷ್ಠ.
2 ಟೊಮೇಟೊ ಉಪಯೋಗಿಸಿ ಕೇವಲ 10 ನಿಮಿಷಗಳಲ್ಲಿ ಮಾಡಿ ಮುಗಿಸಿ ರಸಂ, ಪೌಡರ್ ಬೇಡ, ಬೇಳೆ ಬೇಡ, ಹುಣಸೆ ಬೇಡ ಸರಳ ವಿಧಾನ.
ಮಳೆಗಾಲದಲ್ಲಿ ಬೇಗ ಬೇಗ ಬಟ್ಟೆ ಒಣಗಲು ಮತ್ತು ಒದ್ದೆಯ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಇಷ್ಟು ಮಾಡಿ ಸಾಕು.