Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಮೂಲಂಗಿ ವಡೆ ಮುಂದೆ ಬೇರೆ ಎಲ್ಲ ರೀತಿಯ ವಡೆಗಳು ವೇಸ್ಟ್, ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ಮಾಡ್ಕೊಂಡು ತಿಂತಾಯಿದ್ರೆ ಆದ್ರು ಕತೇನೇ ಬೇರೆ ಕಣ್ರೀ.

Radish Vada Recipe: ಮೂಲಂಗಿ ವಡೆ, ಕೇಳುವುದಕ್ಕೆ ಇದೊಂದು ರೀತಿ ಚೆನ್ನಾಗಿದೆ ಅಲ್ವಾ. ಇನ್ನು ಮೂಲಂಗಿಯ ವಡೆಯನ್ನು ಮಾಡಿಕೊಂಡು ತಿಂದರೆ ಇನ್ನು ತುಂಬಾ ಚೆನ್ನಾಗಿರತ್ತೆ. ಹಾಗಾದರೆ ಮೂಲಂಗಿ ವಡೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಮೂಲಂಗಿ ವಡೆ ಮಾಡುವ ವಿಧಾನ:-

ಮೊದಲಿಗೆ ದಪ್ಪವಾಗಿರುವಂತಹ ಮೂರು ಮೂಲಂಗಿಯನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ತೆಂಗಿನಕಾಯಿ ತುರಿಯುವಂತಹ ತುರೆಮಣೆಯಲ್ಲಿ ಮೂಲಂಗಿಯನ್ನು ತುರಿದು ಕೊಳ್ಳಬೇಕು. ನಂತರ ಅದನ್ನು ಒಂದು ಸ್ಮಾಶರ್ ನಿಂದ ಚೆನ್ನಾಗಿ ಸ್ಮ್ಯಾಶ್ ಮಾಡಬೇಕು. ಸ್ಮಾಶರ್  ಇಲ್ಲದಿದ್ದರೆ ಮಿಕ್ಸಿ ಜಾರ್ ನಲ್ಲಿ ರುಬ್ಬಿಕೊಳ್ಳಬಹುದು.

ನಂತರ ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಅದರೊಳಗೆ ಒಂದು ಬಟ್ಟಲು ಅನ್ನ ಹಾಕಿ ಎರಡರಿಂದ ಮೂರ ನಿಮಿಷ ಇನ್ನೂ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಬೇಕು ಅಂದರೆ ಚೆನ್ನಾಗಿ ಮಿದ್ದಿಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅದರೊಳಗೆ ಒಂದು ಕಪ್ ಅಕ್ಕಿ ಹಿಟ್ಟು ಒಂದು ದೊಡ್ಡ ಸೈಜ್ ನ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಅದನ್ನು ಹಾಕಿಕೊಳ್ಳಬೇಕು ನಂತರ ಎರಡರಿಂದ ಮೂರು ಹಸಿ ಮೆಣಸಿನ ಕಾಯಿ ಸ್ವಲ್ಪ ಕೊತ್ತಂಬರಿ ಸ್ವಲ್ಪ ಕರಿಬೇವನ್ನು ಸಣ್ಣಗೆ ಹೆಚ್ಚಿ ಆ ಮಿಶ್ರಣದೊಳಗೆ ಹಾಕಿಕೊಳ್ಳಬೇಕು.

ನಂತರ ಒಂದು ಟೀ ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು ನೀರು ಬಳಸದೆಯೇ ಈ ಮಿಶ್ರಣವನ್ನು ವಡೆಯ ಹದಕ್ಕೆ ಕಲಸಿಕೊಳ್ಳಬೇಕು. ಒಂದು  ಬಾಣಲೆಯನ್ನು ಇಟ್ಟು ಅದಕ್ಕೆ ವಡೆ ಮಾಡಲು ಬೇಕಾದಷ್ಟು ಎಣ್ಣೆ ಹಾಕಿಕೊಳ್ಳಬೇಕು. ನಂತರ ಪ್ಲಾಸ್ಟಿಕ್ ಕವರ್ ನ ಮೇಲೆ ಅಥವಾ ಬಟರ್ ಪೇಪರ್ ನ ಮೇಲೆ ಒಂದು ದೊಡ್ಡ ನಿಂಬೆಹಣ್ಣಿನ ಗಾತ್ರದಷ್ಟು ಹಿಟ್ಟನ್ನು ತೆಗೆದುಕೊಂಡು ವಡೆಯ ರೀತಿಯಲ್ಲಿ ಮಾಡಿಕೊಳ್ಳಬೇಕು.

ನಂತರ ಬಿಸಿಯಾಗಿ ಕಾದಂತಹ ಎಣ್ಣೆಯಲ್ಲಿ  ಒಡೆಯ ಆಕಾರದಲ್ಲಿ ಮಾಡಿದ ಮಿಶ್ರಣವನ್ನು ಹಾಕಬೇಕು. ಇದು ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಬೇಯಿಸಿಕೊಂಡು ತಿಂದರೆ ಚಳಿಗಾಲದಲ್ಲಂತೂ  ತುಂಬಾ ಚೆನ್ನಾಗಿ ಇರುತ್ತದೆ. ಇದು ಮನೆಯಲ್ಲಿರುವ ಹಿರಿಯರಿಗಷ್ಟೇ ಅಲ್ಲದೆ ಮಕ್ಕಳು ಕೂಡ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೂಲಂಗಿ ವಡೆ ಮಾಡುವ ವಿಧಾನದ ವಿಡಿಯೋ ಇಲ್ಲಿದೆ ನೋಡಿ.

Radish Vada Recipe, A simple method of making Radish Vada.
Images are credited to the original sources.

 

ಇದನ್ನು ಓದಿ:-

ಕಪ್ಪಾದ ಬಾಳೆಹಣ್ಣಿನಿಂದ 3 ಸಾಮಗ್ರಿಗಳನ್ನು ಬಳಸಿ ಕೇವಲ 5 ನಿಮಿಷದಲ್ಲಿ ರುಚಿಯಾದ ಲಾಡು ಮಾಡುವ ವಿಧಾನ, ಮನೆಯವರೆಲ್ಲ ಇಷ್ಟ ಪಟ್ಟು ತಿಂತಾರೆ.

ಹೀಗೆ ಮಾಡಿ ಸಾಕು ಎಷ್ಟೇ ಹಳೆಯ ಅಡುಗೆಮನೆ ಕಿಟಕಿ ಮತ್ತೆ ಹೊಸದಾಗಿ ಪಳಪಳ ಹೊಳೆಯುತ್ತೆ, ಹೆಚ್ಚೇನೂ ಇಲ್ಲ ಸರಳ ವಿಧಾನ.

ಟೊಮೊಟೊ ಸಕ್ಕತ್ ದುಬಾರಿ! ಅದರ ಬದಲು 5  ಪದಾರ್ಥಗಳನ್ನು ಬಳಸಿ ಟೊಮೇಟೊ ಇಲ್ಲದೆ ಸಕ್ಕತ್ ಅಡುಗೆ ಮಾಡಬಹುದು.

ಉತ್ತಮ ಆರೋಗ್ಯ ಪಡೆಯಲು ಅಡುಗೆಗೆ ಯಾವ ಎಣ್ಣೆ ಬಳಸಿದರೆ ಉತ್ತಮ, ಈ 3 ಎಣ್ಣೆಗಳು ಮಾತ್ರ ಬಹಳ ಶ್ರೇಷ್ಠ.

Leave a comment