Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪ್ರತಿ ದಿನ ಸಾರು, ಗೊಜ್ಜು, ಚಟ್ನಿ ತಿಂದು ಬೋರ್ ಆಗಿದ್ದರೆ ಈ ಹೊಸ ರೆಸಿಪಿ ಟ್ರೈ ಮಾಡಿ ನೋಡಿ ಕೇವಲ 5 ನಿಮಿಷ ಸಾಕು, ಎಲ್ಲರೂ ಇಷ್ಟಪಡುತ್ತಾರೆ.

New Sambar Recipe: ಎಲ್ಲರಿಗೂ ಸಹ ಸಾಮಾನ್ಯವಾಗಿ ಸಾಂಬಾರು, ಗೊಜ್ಜು, ಚಟ್ನಿಗಳನ್ನು ತಿಂದು ತಿಂದು ಬೋರಾಗಿರುತ್ತದೆ. ಅಂತಹವರು ಈ ರೀತಿಯ ಚಟ್ನಿ ಅನ್ನೂ ಮಾಡಿ ತಿಂದು ನೋಡಿ ಒಮ್ಮೆ, ಅತ್ಯದ್ಭುತವಾಗಿರುತ್ತದೆ. ಅಷ್ಟೇ ಅಲ್ಲದೆ ಹುಷಾರಿಲ್ಲದಿದ್ದಾಗ ಹಾಗು ನಾಲಿಗೆಯಾ ರುಚಿ ಕಡಿಮೆ ಆಗಿದ್ದರೆ ಈ ಚಟ್ನಿ ಮಾಡಿಕೊಟ್ಟರೆ ಸಾಕು  ಸ್ವಲ್ಪ ಬಾಯಿಗೆ ಕಾರ ಕಾರವಾಗಿ ಸಿಗುತ್ತದೆ. ಹಾಗಾದರೆ ಇದನ್ನು ಹೇಗೆ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಹೊಸ ರೀತಿಯ ಚಟ್ನಿ ಮಾಡುವ ವಿಧಾನ:-

ಮೊದಲಿಗೆ ಒಂದು ಬಾಣಲೆಯನ್ನು  ಗ್ಯಾಸ್ ಮೇಲೆ ಇಟ್ಟು ಅದರೊಳಗೆ ಮೂರರಿಂದ ನಾಲ್ಕು ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿ, ಒಂದು ಟೀ ಸ್ಪೂನ್ ಜೀರಿಗೆ, ಒಂದು ದೊಡ್ಡ ಈರುಳ್ಳಿಯನ್ನು ದೊಡ್ಡದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಬೇಕು. ನಂತರ ಅದರೊಳಗೆ 2 ರಿಂದ 3 ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ ಸೇರಿಸಿಕೊಳ್ಳಿ ಮತ್ತು ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳನ್ನು ಹಾಕಿಕೊಂಡು ಮೂರರಿಂದ ನಾಲ್ಕು ನಿಮಿಷಗಳ ಕಾಲ ಉರಿದುಕೊಳ್ಳಬೇಕು.

ಆಗೆಯೇ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಇಲ್ಲದಿದ್ದರೆ ಈರುಳ್ಳಿ ಬೇಗನೆ ಕಪ್ಪಾಗಿ ಬಿಡುತ್ತದೆ. ಈರುಳ್ಳಿ ಸ್ವಲ್ಪ ಬೆಂದ ನಂತರ ಅದರೊಳಗೆ ಸುಮಾರು ಮೂರರಿಂದ ನಾಲ್ಕು ಸಣ್ಣದಾಜಿ ಕತ್ತರಿಸಿಕೊಂಡ ಟೊಮೆಟೊಗಳನ್ನು ಹಾಕಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು. ಅದನ್ನು ಸಣ್ಣ ಹುರಿಯಲ್ಲಿ(low flame) ನಲ್ಲಿ ಸುಮಾರು ಐದರಿಂದ ಆರು ನಿಮಿಷಗಳ ಕಾಲ ಬೆಂದ ನಂತರ ಅದರೊಳಗೆ ಒಂದು ಟೀ ಸ್ಪೂನ್ ನಷ್ಟು ಅಚ್ಚಕಾರದ ಪುಡಿ ಒಂದು ಚಿಕ್ಕ ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು ಹಾಕಿಕೊಳ್ಳಬೇಕು ಸೂಚನೆ – ಇಲ್ಲಿ ಹುಣಸೆ ಹಣ್ಣಿನ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ.

ಏಕೆಂದರೆ ಹುಳಿ ಮೊದಲೇ ಟೊಮೆಟೊದಲ್ಲಿ ಇರುತ್ತದೆ. ಹಾಗೂ ಅದಕ್ಕೆ ಒಂದು ಚಿಕ್ಕ ಉಂಡೆ ಅಷ್ಟು ಬೆಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಇದಾದ ನಂತರ ಒಂದು ಮಿಕ್ಸಿ ಜಾರಿಗೆ ತಣ್ಣಗಾದ ನಂತರ ಆ ಮಿಶ್ರಣವನ್ನು ತೆಗೆದು ಹಾಕಿಕೊಂಡು ಮೆತ್ತಗೆ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ನಂತರ ಒಗ್ಗರಣೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಈ ಚಟ್ನಿ ಒಳಗೆ ಒಗ್ಗರಣೆ ಹಾಕಿದರೆ ನಂತರ ಚಟ್ನಿ ರೆಡಿಯಾಗುತ್ತದೆ.

ಚಟ್ನಿ ಹಾಕಿಕೊಂಡು ತಿನ್ನುತಿದ್ದರೆ ಅಬ್ಬಬ್ಬಾ ಎಂತಹ ರುಚಿ ಸಿಗುತ್ತದೆ ಗೊತ್ತಾ! ಅಷ್ಟೇ ಅಲ್ಲದೆ ಈ ಚಟ್ನಿಯನ್ನು ದೋಸೆ ಚಪಾತಿ ಪೂರಿ ಅಥವಾ ಯಾವುದೇ ರೀತಿಯ ರೊಟ್ಟಿಗಳೊಂದಿಗೆ ಇದು ಸೂಪರ್ ಕಾಂಬಿನೇಷನ್ ಆಗಿರುತ್ತದೆ, ಹೊಸ ರೀತಿಯ ಚಟ್ನಿ ಮಾಡುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. If you are bored of eating sambar, gravy, chutney every day, try this new recipe, it only takes 5 minutes.

If you are bored of eating sambar, gravy, chutney every day, try this new recipe, it only takes 5 minutes.

ಇದನ್ನು ಓದಿ :-

ಪ್ರೆಷರ್ ಕುಕ್ಕರ್ ಹಾಳಾಗದಂತೆ ಉಪಯೋಗಿಸುವ ಸರಿಯಾದ ವಿಧಾನ.

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!

Cockroach Tips: ಮನೆಯಲ್ಲಿ ಜಿರಳೆ ಕಾಟ ಇದಿಯಾ, ಚಿಂತೆ ಬಿಡಿ ಈ ಒಂದು ಉಪಾಯ ಮಾಡಿ ಸಾಕು ಮನೆಯಲ್ಲಿ ಒಂದು ಜಿರಳೆಯೂ ಉಳಿಯುವುದಿಲ್ಲ 2 ನಿಮಿಷ ಸಾಕು.

Hair Care Tips: ಸ್ನಾನ ಮಾಡಿದ ಬಳಿಕ ನಿಮಗೆ ಈ ಅಭ್ಯಾಸವಿದ್ದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ತಲೆಯಲ್ಲಿ ಕೂದುಲು ಉದುರುವ ಸಮಸ್ಯೆ ಹೆಚ್ಚಾಗಬಹುದು.

 

Leave a comment