Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

2 ಟೊಮೇಟೊ ಉಪಯೋಗಿಸಿ ಕೇವಲ 10 ನಿಮಿಷಗಳಲ್ಲಿ ಮಾಡಿ ಮುಗಿಸಿ ರಸಂ, ಪೌಡರ್ ಬೇಡ, ಬೇಳೆ ಬೇಡ, ಹುಣಸೆ ಬೇಡ ಸರಳ ವಿಧಾನ.

Tomato Rasam: ಇತ್ತೀಚಿನ ದಿನಗಳಲ್ಲಿ ಅಂತೂ ಟೊಮೊಟೊ ರೇಟು ಸರಿ ಸಮಾನವಾಗಿ ಎಲ್ಲಾ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದೆ. ಹಾಗಾಗಿ ನಿಮ್ಮ ಮನೆಯಲ್ಲಿ ಒಪ್ಪತ್ತು ಊಟ ಮಾಡಬೇಕೆಂದಿದ್ದರೆ ಅಥವಾ ನಿಮಗೆ ಹುಷಾರಿರದಿದ್ದಾಗ ನಿಮ್ಮ ಬಾಯಿ ಯಾವುದೇ ರೀತಿಯಾದಂತಹ ಟೇಸ್ಟ್ ಸಿಗದಿದ್ದರೆ ಕೇವಲ ಎರಡೇ ಎರಡು ಟೊಮೇಟೊಗಳಲ್ಲಿ ಈ ರೀತಿಯಾದಂತಹ ರಸಂ ಅನ್ನು ಮಾಡಿ ನೋಡಿ ಅಬ್ಬಾ ರುಚಿಯೇ ಬೇರೆ ಆಗಿರುತ್ತದೆ.

ಮೊದಲಿಗೆ ಒಂದು ಟೊಮೇಟೊ ಮತ್ತು ಒಂದು ಈರುಳ್ಳಿಯನ್ನು ಸ್ವಲ್ಪ ದಪ್ಪವಾಗಿ ಕತ್ತರಿಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ ಅದರೊಳಗೆ ಕತ್ತರಿಸಿದಂತಹ ಟೊಮೊಟೊ ಹಣ್ಣು ಮತ್ತು ಈರುಳ್ಳಿಯನ್ನು ಹಾಕಿ ಅದರೊಳಗೆ ಒಂದು ಗಡ್ಡೆ ಬೆಳ್ಳುಳ್ಳಿ ಎರಡು ಮೂರು ಒಣಮೆಣಸಿನಕಾಯಿ ಒಂದು ಟೀ ಸ್ಪೂನ್ ಜೀರಿಗೆಯನ್ನು ಹಾಕಿ ಟೊಮೊಟೊ ಮೆತ್ತಗಾಗುವವರೆಗೂ ಅದನ್ನು ಎಣ್ಣೆಯಲ್ಲಿ ಕಲಸಿಕೊಳ್ಳಬೇಕು.

ನಂತರ ಗ್ಯಾಸ್ ಅನ್ನು ಆಫ್ ಮಾಡಿಕೊಂಡು ಅದರೊಳಗೆ ಎರಡು ಚಮಚದಷ್ಟು ತುರಿದಂತಹ ತೆಂಗಿನಕಾಯಿಯನ್ನು ಹಾಕಿಕೊಳ್ಳಬೇಕು. ಬಾಣಲೆ ಹೇಗೂ ಬಿಸಿ ಇರುವುದರಿಂದ ಅದರಲ್ಲಿಯೇ ತೆಂಗಿನಕಾಯಿ ಕೂಡ ಬೇಯುತ್ತದೆ. ನಂತರ ಈ ಮಿಶ್ರಣವೆಲ್ಲ ತಣ್ಣಗಾದ ಮೇಲೆ ಮಿಕ್ಸಿ ಒಳಗೆ ಹಾಕಿ ಚೆನ್ನಾಗಿ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು.

ಅದಾದ ನಂತರ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆಯನ್ನು ಹಾಕಿ ಇನ್ನೊಂದು ಟೊಮೆಟೊವನ್ನು ಸಣ್ಣಗೆ ಕತ್ತರಿಸಿಕೊಂಡು ಅದರೊಳಗೆ ಹಾಕಿ ನಂತರ ಈ ಮಿಶ್ರಣವನ್ನು ಹಾಕಬೇಕು. ಅದರೊಳಗೆ ಅರ್ಧ ಟೀ ಸ್ಪೂನ್ ಅರಶಿನ ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ ಹಾಕಿ ನಿಮಗೆ ಎಷ್ಟು ಬೇಕೋ ಅಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು.

ಇದು ಮೊದಲೇ ರಸಂ ಆಗಿರುವುದರಿಂದ ಸ್ವಲ್ಪ ಹೆಚ್ಚಾಗಿನ ಪ್ರಮಾಣದಲ್ಲಿ ನೀರನ್ನು ಬಳಸಿದರೆ ಚೆನ್ನಾಗಿರುತ್ತದೆ. ಒಂದು ಕುದಿ ಬರುವವರೆಗೂ ಇದ್ದು ಬೇರೊಂದು ಒಗ್ಗರಣೆ ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಸಾಸಿವೆ ಅದನ್ನು ರಸಂ ಒಳಗೆ ಹಾಕಿದರೆ ಹಬ್ಬ ಇಂತಹ ರುಚಿ ಸಿಗುತ್ತದೆ ಗೊತ್ತಾ ಒಂದು ವೇಳೆ ನಿಮಗೆ ಹುಷಾರಿಲ್ಲದಿದ್ದಾಗ ಈ ರೀತಿಯಾದಂತಹ ಒಂದು ರಸಂ ಅನ್ನು ಮಾಡಿ ತಿನ್ನಿ. ಅಷ್ಟೇ ಅಲ್ಲದೆ ಎರಡೇ ಎರಡು ಟೊಮೇಟೊದಿಂದ ಮನೆ ಮಂದಿ ಎಲ್ಲ ತಿನ್ನುವಷ್ಟು ರಸಂ ಅನ್ನು ಮಾಡಿಕೊಳ್ಳಬಹುದು. ಟೊಮೇಟೊ ರಸಂ ಮಾಡುವ ವಿಧಾನ ವಿಡಿಯೋ ದಲ್ಲಿ ನೋಡಬೇಕೆಂದರೆ ಇಲ್ಲಿದೆ ನೋಡಿ ಟೊಮೇಟೊ ರಸಂ ಮಾಡುವ ವಿಡಿಯೋ

ಟೊಮೊಟೊ ಸಕ್ಕತ್ ದುಬಾರಿ! ಅದರ ಬದಲು 5  ಪದಾರ್ಥಗಳನ್ನು ಬಳಸಿ ಟೊಮೇಟೊ ಇಲ್ಲದೆ ಸಕ್ಕತ್ ಅಡುಗೆ ಮಾಡಬಹುದು.

ಉತ್ತಮ ಆರೋಗ್ಯ ಪಡೆಯಲು ಅಡುಗೆಗೆ ಯಾವ ಎಣ್ಣೆ ಬಳಸಿದರೆ ಉತ್ತಮ, ಈ 3 ಎಣ್ಣೆಗಳು ಮಾತ್ರ ಬಹಳ ಶ್ರೇಷ್ಠ.

ಕಾಗೆಗಳಿಗೆ ದಿನ ಆಹಾರ ಕೊಟ್ಟರೆ ಏನಾಗುತ್ತೆ ನೋಡಿದ್ರೆ ಮಾಡಿರುವ ಅಡುಗೆಯನ್ನು ಕಾಗೆಗಳಿಗೆ ಕೊಟ್ಟು ಬಿಡ್ತೀರಾ..!!

ಹೆಚ್ಚೇನೂ ಇಲ್ಲ ಕೇವಲ ಈ ಮೂರೂ ವಸ್ತುಗಳು ಇದ್ದರೆ ಸಾಕು, ಬರಿ 5 ನಿಮಿಷದಲ್ಲಿ ಮನೆಯಲ್ಲಿಯೇ ಕುಂಕುಮ ತಯಾರಿಸಬಹುದು.

ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬೆಳ್ಳುಳ್ಳಿಯ ಎಸಳನ್ನು ತಿಂದು ನೋಡಿ! ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಒಮ್ಮೆಲೆ ದೂರ!

 

 

Leave a comment