Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಆಸ್ತಿಯನ್ನು ಖರೀದಿಸುವ ಮೊದಲು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ 5 ಮುಖ್ಯ ವಿಷಯಗಳು, ಇದರ ಬಗ್ಗೆ ತಿಳಿದಿದ್ದರೆ ತುಂಬಾ ಒಳ್ಳೆಯದು.

Property Buying Tips: ನೀವು ಒಂದು ಮನೆಯನ್ನು ತೆಗೆದುಕೊಳ್ಳಬೇಕು ಕಟ್ಟಿಸಬೇಕು ಅಥವಾ ಒಂದು ಪ್ರಾಪರ್ಟಿಯನ್ನು ತೆಗೆದುಕೊಳ್ಳಬೇಕು ಅಂದಾಗ ಖಂಡಿತವಾಗಿಯೂ ನೀವು ಇಲ್ಲಿ ತಿಳಿಸಲಾಗಿರುವ ಐದು ಟಿಪ್ಸ್ ಗಳನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನೀವು ಪ್ರಾಪರ್ಟಿ ತೆಗೆದುಕೊಳ್ಳುವುದಕ್ಕಿಂತ ಮೊದಲು ಯೋಚನೆ ಮಾಡಬೇಕಾಗಿರುವುದು ನಮ್ಮಲ್ಲಿ ಎಷ್ಟು ಸೇವಿಂಗ್ಸ್ ಇದೆ. ನಾವು ಒಂದು ಪ್ರಾಪರ್ಟಿ ತೆಗೆದುಕೊಳ್ಳಬೇಕಾದರೆ 40% ಹಣ ನಮ್ಮಲ್ಲಿ ಇರಬೇಕಾಗುತ್ತದೆ. ನಾವು ಬ್ಯಾಂಕಿನಲ್ಲಿ ಲೋನ್ ತೆಗೆದುಕೊಳ್ಳಲು ಹಣವನ್ನು ಕೇಳಿದಾಗ ನಾವು ಅಗ್ರಿಮೆಂಟ್ ಪೇಪರ್ ಗೆ ನಮ್ಮ ಬಳಿ ಇರುವ ಹಣವನ್ನು ಅಗ್ರಿಮೆಂಟ್ ಗೆ ಕಟ್ಟಬೇಕಾಗುತ್ತದೆ ಜೊತೆಗೆ ನಿಮ್ಮಲ್ಲಿರುವ ಹಣ ಎಷ್ಟು ಎಂದು ನೋಡಿ  ನೀವು ಪ್ರಾಪರ್ಟಿ ತೆಗೆದುಕೊಳ್ಳಬಹುದು.

ಎರಡನೆಯದಾಗಿ ನಿಮ್ಮ ಫೈನಾನ್ಸಿಯಲ್ ಕಂಡಿಶನ್ ತುಂಬಾ ಅಗತ್ಯವಾಗಿರುತ್ತದೆ ನಿಮ್ಮ ಫೈನಾನ್ಸಿಯಲ್ ಕಂಡೀಶನ್ ಸರಿಯಾಗಿ ಇಲ್ಲ ಎಂದರೆ ಅದನ್ನು ನೀವು ಮೊದಲು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತದೆ. ಏಕೆಂದರೆ ನೀವು ಮೊದಲೇ ಪ್ರಾಬ್ಲಮ್ ಗಳಲ್ಲಿ ಇದ್ದಾಗ ಫೈನಾನ್ಸಿಯಲ್ ನಲ್ಲಿ ಕೊರತೆ ಇದ್ದಾಗ ಬೇರೆ ಕಡೆ ನೀವು ಹಣ ಹೂಡಿಕೆ ಮಾಡಿ ಹಣ ಸಂಗ್ರಹಿಸಲು ಆಗದೆ ಹಾಳಾಗುವುದಕ್ಕಿಂತ ಮುಂಚೆ ನಮ್ಮ ಫೈನಾನ್ಸಿಯಲ್ ಕಂಡೀಶನ್ ಸರಿ ಮಾಡಿಕೊಂಡು ನಂತರ ಪ್ರಾಪರ್ಟಿ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

ನೀವೇನಾದರೂ ಕೆಲಸ ಮಾಡುತ್ತಿದ್ದರೆ ನೀವು ಕೆಲಸ ಮಾಡುತ್ತಿರುವ ಜಾಗ ಹೇಗಿದೆ ಮತ್ತು ನಿಮ್ಮ ಕೆಲಸಕ್ಕೆ ಯಾವುದೇ ರೀತಿಯಾದ ತೊಂದರೆ ಮುಂದಿನ ವರ್ಷಗಳಲ್ಲಿ ಬರುವುದಿಲ್ಲ ಎಂದು ನಿಮಗೆ ತಿಳಿದರೆ ಮಾತ್ರ ಪ್ರಾಪರ್ಟಿ ತೆಗೆದುಕೊಳ್ಳಿ ಏಕೆಂದರೆ ಆಗ ನಿಮಗೆ ಒಂದು ರೀತಿಯ ಸೆಕ್ಯೂರಿಟಿ ಇರುತ್ತದೆ. ಪ್ರೈವೇಟ್ ಕಂಪನಿ ಗಳಲ್ಲಿ ಕೆಲಸ ಮಾಡುವವರಿಗೆ ಯಾವಾಗ ಅವರ ಕೆಲಸ ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ ಯಾವಾಗ ಬೇಕಾದರೂ ಹೋಗಬಹುದು.

ಇನ್ನು ನೀವು ಸ್ವಂತ ಬಿಜಿನೆಸ್ ಮಾಡುತ್ತಿದ್ದಾರೆ ನಿಮ್ಮ ಬಿಸಿನೆಸ್ ಯಾವ ರೀತಿ ನಡೆಯುತ್ತಿದೆ ಲಾಭದಲ್ಲಿ ಇದಿಯೋ ಅಥವಾ ನಷ್ಟದಲ್ಲಿ ಇದಿಯೋ ಎಂದು ನೋಡಿಕೊಂಡು ಸಹ ನೀವು ಮುನ್ನಡೆಯಬೇಕಾಗುತ್ತದೆ. ಇಷ್ಟೇ ಅಲ್ಲದೆ ಮುಂದಿನ 10 ವರ್ಷಗಳಲ್ಲಿ ನಿಮ್ಮ ಸ್ವಂತ ಬಿಸ್ನೆಸ್ ಯಾವ ರೀತಿ ನಡೆಯಲಿದೆ ಮತ್ತು ನೀವು ಅದಕ್ಕೆ ಇಎಂಐ ಯಾವ ರೂಪದಲ್ಲಿ ಕಟ್ಟಬಹುದು ಎಂದು ಇಟ್ಟುಕೊಂಡು ತೆಗೆದುಕೊಳ್ಳಬೇಕು ಇಲ್ಲವಾದರೆ ಪ್ರಾಪರ್ಟಿ ತೆಗೆದುಕೊಂಡ ಒಂದೆರಡು ವರ್ಷಗಳಲ್ಲಿ ನೀವು ಅದನ್ನು ಮಾರಬೇಕಾದ ಪರಿಸ್ಥಿತಿ ಬರುತ್ತದೆ.

ಕೊನೆಯದಾಗಿ ನೀವು ಪ್ರಾಪರ್ಟಿಗಳನ್ನು ತೆಗೆದುಕೊಳ್ಳುವಾಗ ಮಾರ್ಕೆಟ್ ನಲ್ಲಿ ಹಣದ ಏರಿಳಿಕೆಯ ಕಂಡೀಶನ್ ಗಳನ್ನು ಸಹ ನೀವು ನೋಡಬೇಕಾಗುತ್ತದೆ. ಏಕೆಂದರೆ ನೀವು ಪ್ರಾಪರ್ಟಿ ತೆಗೆದುಕೊಳ್ಳುವ ಸಮಯದಲ್ಲಿ ಹಣದ ಏರಿಕೆ ಮತ್ತು ಇಳಿಕೆಗಳು ತುಂಬಾನೇ ಆಗುತ್ತಿರುತ್ತವೆ, ಅದಕ್ಕೆ ನೀವು ಅದರ ಬಗ್ಗೆ ಸ್ವಲ್ಪ ಗಮನವಹಿಸಿ ತೆಗೆದುಕೊಳ್ಳುವುದರಿಂದ ಸೂಕ್ತ ಎಂದು ಹೇಳಬಹುದು. Here are 5 main things you should keep in mind before buying a property.

Here are 5 main things you should keep in mind before buying a property
Images are credited to the original sources.

 

ಇದನ್ನು ಓದಿ :- 

Check Bounce: ಗಂಡ ಚೆಕ್ ಬೌನ್ಸ್ ಮಾಡಿದರೆ ಹೆಂಡತಿ ಮೇಲೆ ಪರಿಣಾಮ ಬೀರುತ್ತಾ, ಇದರ ಬಗ್ಗೆ ಕೋರ್ಟ್ ಏನ್ ಹೇಳುತ್ತೆ ಗೊತ್ತಾ.

Check Bounce: ಚೆಕ್ ಬೌನ್ಸ್ ಕೇಸ್ ನಲ್ಲಿ ಹಣ ಕಟ್ಟಲು ಆಗದಿದ್ದರೆ ಏನು ಮಾಡಬಹುದು.

Vaastu Tips: ನಿಮ್ಮ ಮನೆಯಲ್ಲಿ ಆಗಾಗ ಕಷ್ಟ ಬರ್ತಾ ಇದ್ದೀಯ, ಬಹುಸಃ ಮನೆಯ ವಾಸ್ತು ಪ್ರಕಾರ ಟಾಯ್ಲೆಟ್ ಸರಿಯಾದ ದಿಕ್ಕಿನಲ್ಲಿ ಇಲ್ಲದೆ ಇರಬಹುದು, ಈ ರೀತಿ ಇದಿಯ ನೋಡಿ ಒಮ್ಮೆ.

 

Leave a comment