ತೆಂಗಿನಕಾಯಿ ಚಟ್ನಿ ತಿಂದು ಬೇಜಾರ್ ಆಗಿದ್ರೆ, ಉಡುಪಿ ಬ್ರಾಹ್ಮಣರ ಶೈಲಿಯಲ್ಲಿ ಸುವರ್ಣಗಡ್ಡೆ ಚಟ್ನಿ ಈ ರೀತಿ ಮಾಡಿ ನೋಡಿ, ಫುಲ್ ಪ್ಲೇಟ್ ಖಾಲಿ ಮಾಡ್ತೀರಾ.
Elephant Foot Yam Chutney: ಸಾಧಾರಣವಾಗಿ ನಮ್ಮ ನಿಮ್ಮೆಲ್ಲರ ಮನೆಯಲ್ಲಿ ಮಾಡುವ ಚಟ್ನಿಗಳಿಗೆ ಹೋಲಿಸಿಕೊಂಡರೆ ಬ್ರಾಹ್ಮಣರ ಮನೆಯಲ್ಲಿ ಅಥವಾ ಬ್ರಾಹ್ಮಣರ ಹೋಟೆಲ್ ನಲ್ಲಿ ಮಾಡುವ ಚಟ್ನಿ ಒಂದು ರೀತಿಯಲ್ಲಿ ತುಂಬಾ ರುಚಿಯಾಗಿ ಇರುತ್ತದೆ. ಎಷ್ಟು ಜನರಿಗೆ ಇದು ಮಾಡುವ ವಿಧಾನ ತಿಳಿದಿರುವುದಿಲ್ಲ. ಹಾಗಾದರೆ ಅವರು ಯಾವ ರೀತಿ ತಯಾರಿಸುತ್ತಾರೆ ಎಂಬುದನ್ನು ತಿಳಿದು ನಾವು ಕೂಡ ಟ್ರೈ ಮಾಡೋಣ ಬನ್ನಿ.
ಸುವರ್ಣ ಗೆಡ್ಡೆ ಚಟ್ನಿ ಮಾಡುವ ವಿಧಾನ :-
ಮೊದಲಿಗೆ ಒಂದು ಕಾಲ್ ಕೆಜಿ ಎಷ್ಟು ಸುವರ್ಣ ಗೆಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಬಿಡಿಸಿ ಸಣ್ಣ ಹೋಳುಗಳಾಗಿ ಕತ್ತರಿಸಿಕೊಂಡು ಒಂದು ಬಟ್ಟಲಿಗೆ ನೀರನ್ನು ತೆಗೆದುಕೊಂಡು ಅವುಗಳನ್ನು ಶುಚಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಮೂರು ಚಮಚದಷ್ಟು ತೆಂಗಿನ ಎಣ್ಣೆ ಹಾಕಿ ನಂತರ ಮೂರು ಟೀ ಸ್ಪೂನ್ ನಷ್ಟು ಉದ್ದಿನ ಬೇಳೆ ಹಾಗೂ ಒಂದು ಟೀ ಸ್ಪೂನ್ ನಷ್ಟು ಸಾಸಿವೆ ಎರಡು ಒಣಮೆಣಸಿನಕಾಯಿ ಹಾಕಿ ಉದ್ದಿನಬೇಳೆ ಗೋಲ್ಡನ್ ಕಲರ್ ಬರುವವರೆಗೂ ಹುರಿದುಕೊಳ್ಳಬೇಕು.
ನಂತರ ಅದನ್ನು ಒಂದು ಪ್ಲೇಟ್ ಒಳಗೆ ಹಾಕಿಕೊಂಡು ಅದೇ ಬಾಣಲೆಯಲ್ಲಿ ಎರಡರಿಂದ ಮೂರು ಸ್ಪೂನ್ ಮತ್ತೆ ತೆಂಗಿನ ಎಣ್ಣೆಯನ್ನು ಹಾಕಿಕೊಂಡು ಸುವರ್ಣಗಡ್ಡೆ ಎನ್ನು ಹಾಕಿ ಉರಿದುಕೊಳ್ಳಬೇಕು. ನಂತರ ಅದರೊಳಗೆ ಒಂದು ಚಿಕ್ಕ ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು ಅನ್ನು ಹಾಕಿಕೊಳ್ಳಬೇಕು. ಸುವರ್ಣ ಗೆಡ್ಡೆ ಕಲರ್ ಚೇಂಜ್ ಆಗುವವರೆಗೂ ಬೇಯಿಸಿಕೊಂಡು ನಂತರ ಮೊದಲು ಹುರಿದಿಟ್ಟುಕೊಂಡಂತಹ ಉದ್ದಿನ ಬೆಳೆ ಮಿಶ್ರಣ ಹಾಗೂ ಸುವರ್ಣ ಗೆಡ್ಡೆಯನ್ನು ಹಾಕಿ ರುಬ್ಬಿಕೊಳ್ಳಬೇಕು.
ನಂತರ ಅದೇ ಮಿಕ್ಸಿ ಜಾರಿನೊಳಗೆ ಆ ಮಿಶ್ರಣದೊಳಗೆಯೇ ರುಚಿಗೆ ತಕ್ಕಷ್ಟು ಉಪ್ಪು ಅನ್ನು ಹಾಕಿ ರುಬ್ಬಿಕೊಳ್ಳಬೇಕು ನಂತರ ಅದಕ್ಕೆ ಒಗ್ಗರಣೆ ಹಾಕಿದರೆ ಬಿಸಿ ಬಿಸಿಯಾಗಿ ಸುವರ್ಣ ಗೆಡ್ಡೆ ಚಟ್ನಿ ರೆಡಿಯಾಗುತ್ತದೆ. ಇದು ಅನ್ನಕ್ಕೆ ರೊಟ್ಟಿಗಳಿಗೆ ದೋಸೆ ಚಪಾತಿಗಳಿಗೆ ಸೂಪರ್ ಕಾಂಬಿನೇಷನ್ ಆಗಿ ಇರುತ್ತದೆ. ನಿಮ್ಮ ಮನೆಯಲ್ಲಿ ಸಹ ಇದೇ ರೀತಿಯ ಚಟ್ನಿ ತಿನ್ನಬೇಕೆಂದರೆ ಖಂಡಿತವಾಗಿ ಈ ರೀತಿಯಾದಂತಹ ಚಟ್ನಿಯನ್ನು ಟ್ರೈ ಮಾಡಿ ನೋಡಿ ಇದು ಪಕ್ಕಾ ಬ್ರಾಹ್ಮಣರ ಸ್ಟೈಲ್ ಆಗಿ ಇರುತ್ತದೆ.ಸುವರ್ಣ ಗೆಡ್ಡೆ ಚಟ್ನಿ ಮಾಡುವ ವಿಡಿಯೋ ಇಲ್ಲಿದೆ ನೋಡಿ. How to prepare elephant foot yam chutney recipe.
ಇದನ್ನು ಓದಿ:-
Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!