Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಳೆಗಾಲದಲ್ಲಿ ಬೇಗ ಬೇಗ ಬಟ್ಟೆ ಒಣಗಲು ಮತ್ತು ಒದ್ದೆಯ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಇಷ್ಟು ಮಾಡಿ ಸಾಕು.

Cloth tips: ಮಳೆಗಾಲ ಬಂತೆಂದರೆ ಮಕ್ಕಳಿಗೆ ಖುಷಿಯೋ ಖುಷಿ. ಆದರೆ ಮನೆಯ ಹೆಂಗಸರಿಗೆ ಒಂದು ತೊಂದರೆ ಇದೆ. ಅದು ಏನೆಂದರೆ ಒಗೆದು ಹಾಕಿದ ಬಟ್ಟೆ ಒಣಗುವುದೇ ಇಲ್ಲ. ಆದರೆ ಇಲ್ಲಿ ಹೇಳಿರುವ ಹಾಗೆ ಮಾಡಿದರೆ ಬಟ್ಟೆಗಳು ಒಣಗುವುದು ಅಷ್ಟೇ ಅಲ್ಲದೆ, ಒಣಗದೆ ಇದ್ದಂತಹ ಬಟ್ಟೆಗಳಿಂದ ಬರುವಂತಹ ದುರ್ವಾಸನೆಯನ್ನು ಸಹ ಹೋಗಲಾಡಿಸಬಹುದು ಅದು ಹೇಗೆ ಎಂದು ಯೋಚಿಸುತಿದ್ದೀರಾ ಬನ್ನಿ ತಡ ಮಾಡದೆ ತಿಳಿಯೋಣ.

ಮೊದಲಿಗೆ ವಾಸನೆ ಬಂದಂತಹ ಬಟ್ಟೆಗಳನ್ನು ಡಿಟರ್ಜೆಂಟ್ ಜೊತೆಗೆ ವಿನಿಗರ್ ನಲ್ಲಿ ಸುಮಾರು ಒಂದರಿಂದ ಎರಡು ಗಂಟೆ ನೆನೆಸಿ ನಂತರ ಅವುಗಳನ್ನು ಒಗೆದು ಒಣಗಾಕಬೇಕು. ಆಗ ಇದರಲ್ಲಿ ಯಾವುದೇ ರೀತಿಯ ಅಂತಹ ವಾಸನೆ ಇರುವುದಿಲ್ಲ. ಅಷ್ಟೇ ಅಲ್ಲದೆ ಒದ್ದೆ ಇರುವಂತಹ ಬಟ್ಟೆಗಳನ್ನು ಧರಿಸುವುದರಿಂದ ಅದರಲ್ಲಿ ಹಲವಾರು ಬ್ಯಾಕ್ಟೀರಿಯಾಗಳು ಕುಳಿತಿರುತ್ತವೆ. ಇದರಿಂದ ಆರೋಗ್ಯಕ್ಕೂ ಮತ್ತು ಚರ್ಮಕ್ಕೂ ಕೂಡ ತುಂಬಾ ಅಪಾಯಕಾರಿವಾಗಿದೆ.

ಎರಡನೆಯದಾಗಿ ಅಡುಗೆ ಸೋಡಾ ಮತ್ತು ಡಿಟರ್ಜೆಂಟನ್ನು ಹಾಕಿ 15 ರಿಂದ 20 ನಿಮಿಷಗಳ ಕಾಲ ನೆನೆಸಿ ಅದನ್ನು ಒಣಗಾಕಿದರೆ ಬಟ್ಟೆಯ ವಾಸನೆಯನ್ನು ತಡೆಯಬಹುದು. ಅಷ್ಟೇ ಅಲ್ಲದೆ ನಿಂಬೆರಸ ಮತ್ತು ನೀರು ನಲ್ಲಿ ನೆನೆಸಿ ಒಳಗೆ ಹಾಕುವುದರಿಂದ ನಿಂಬೆ ಹಣ್ಣಿನ ರಸದಲ್ಲಿ ನೈಸರ್ಗಿಕವಾದ ಆಮ್ಲ ಇರುವುದರಿಂದ ಬಟ್ಟೆಯು ಸುವಾಸನೆ ಭರಿತವಾಗಿರುತ್ತದೆ.

ಮಡಚಿಟ್ಟ ಬಟ್ಟೆಯೊಳಗೆ ಕರ್ಪೂರವನ್ನು ಇಡುವುದರಿಂದಲೂ ಸಹ ಬಟ್ಟೆಗಳು ಸುವಾಸನೆಯನ್ನು ಬೀರುತ್ತವೆ. ಅಷ್ಟೇ ಅಲ್ಲದೆ ಕರ್ಪೂರದಲ್ಲಿ ಆಂಟಿ ಫಂಗಲ್ ಇರುವುದರಿಂದ ಬ್ಯಾಕ್ಟೀರಿಯಾ ಗಳನ್ನು ಇದು ತಡೆಯಲು ಸಹಾಯಮಾಡುತ್ತದೆ. ನಂತರ ಮಳೆಗಾಲದಲ್ಲಿ ಬಟ್ಟೆಗಳನ್ನು ಆದಷ್ಟು ಬಿಡಿಬಿಡಿಯಾಗಿ ಇಡುವುದು ಒಳ್ಳೆಯದು ಏಕೆಂದರೆ ಮಡಚಿಟ್ಟಷ್ಟು ಬಟ್ಟೆಗಳಲ್ಲಿ ಒಂದು ಬಟ್ಟೆ ಒದ್ದೆಯಾಗಿದ್ದರೂ ಸಹ ಅಷ್ಟು ಬಟ್ಟೆಗಳು ವಾಸನೆ ಬರುವ ಸಾಧ್ಯತೆಗಳು ಇವೆ.

ಮಳೆಗಾಲ ಬಂತೆಂದರೆ ಸಾಕು ಬಟ್ಟೆಗಳು ಒಣಗುವುದೇ ಇಲ್ಲ. ಆದರೆ ಈ ರೀತಿ ಮಾಡಿದರೆ ಆದಷ್ಟು ಬೇಗ ಬಟ್ಟೆಗಳು ಒಣಗುತ್ತವೆ. ಹಾಗಾದರೆ ಏನು ಮಾಡಬೇಕೆಂಬುದನ್ನು ನೋಡುವುದಾದರೆ.

ಮೊದಲಿಗೆ ಬಟ್ಟೆಗಳನ್ನು ಹ್ಯಾಂಗರ್ ಗೆ ತಗುಲಿಸಿ ಬಟ್ಟೆಗಳನ್ನು ಒಣ ಹಾಕುವುದರಿಂದ ಅವು ತಂಗಾಳಿಯ ಜೊತೆಗೆ ಬೆರೆತು ಬೇಗನೆ ಬಟ್ಟೆಗಳು ಒಣಗುತ್ತವೆ.

ಒಂದು ರೂಮ್ನಲ್ಲಿ ಬಟ್ಟೆಗಳನ್ನು ಒಣಗಿಸಿ ಅದೇ ರೂಮ್ನಲ್ಲಿ ಕಲ್ಲು ಉಪ್ಪಿನ ಚೀಲ ಇಟ್ಟರೆ ಸಹ ಬಟ್ಟೆಗಳು ಬೇಗ ಒಣಗುವ ಎಲ್ಲ ಸಾಧ್ಯತೆಗಳು ಇವೆ. ಅಷ್ಟೇ ಅಲ್ಲದೆ ಬಟ್ಟೆಗಳು ಒಣಗಿಸಿದಂತಹ ಜಾಗದಿಂದ ಸ್ವಲ್ಪ ದೂರದಲ್ಲಿ ದೂಪವನ್ನು ಹಚ್ಚಿ ಇಡುವುದರಿಂದ ಬಟ್ಟೆಗಳು ಅತಿ ವೇಗವಾಗಿ ಒಣಗುವುದೇ ಅಲ್ಲದೆ ಬಟ್ಟೆಗಳು ಸಹ ಸುಗಂಧ ಬರುತ್ತದೆ.

ವಾಷಿಂಗ್ ಮಿಷಿನ್ ನಲ್ಲಿ ಒಗೆಯುವಂತಹ ಬಟ್ಟೆಗಳು ಆದಷ್ಟು ವಾಷಿಂಗ್ ಮೆಷಿನ್ ನಲ್ಲಿ ಡ್ರೈ ಮಾಡಲು ಬಿಡಿ. ಗಾಳಿ ಬೀಸುವ ಜಾಗದಲ್ಲಿ ಆ ಬಟ್ಟೆಗಳನ್ನು ಒಣಗಾಕಿ ನಂತರ ಐರನ್ ಮಾಡಿ ಧರಿಸಿ ಇಲ್ಲದಿದ್ದರೆ ಈ ರೀತಿ ಮಾಡುವುದರಿಂದ ಬಟ್ಟೆಗಳನ್ನು ಬೇಗ ಒಣಗಿಸಿಕೊಳ್ಳಬಹುದು ಹಾಗೂ ವಾಸನೆ ಬಂದಂತಹ ಬಟ್ಟೆಗಳನ್ನು ನಿರ್ಮೂಲನೆ ಮಾಡಿಕೊಳ್ಳಬಹುದು.

Leave a comment