Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ವತಂತ್ರ ದಿನಾಚರಣೆಗೆ ಹೊಸದೊಂದು ರೆಸಿಪಿ! ಟ್ರೈ ಕಲರ್ ಅಂದರೆ ಮೂರು ಬಣ್ಣದ ನೀರ್ ದೋಸೆ ಈ ರೀತಿ ಮಾಡಿ ನೋಡಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.

77th Independence day special tri color dosa:- ಇನ್ನೇನು 77ನೇ ಸ್ವತಂತ್ರ ದಿನಾಚರಣೆ ಮತ್ತೆ ನಾಳೆ ಬರುತ್ತಿದೆ. ಆದರೆ ಈ ಸ್ವತಂತ್ರ ದಿನಾಚರಣೆಯನ್ನು ಮತ್ತಷ್ಟು ಕ್ರಿಯೇಟಿವ್ ಆಗಿ ಸೆಲೆಬ್ರೇಟ್ ಮಾಡೋಣ. ಹಾಗಾಗಿ ಈ ಒಂದು ರೆಸಿಪಿ ಟ್ರೈ ಮಾಡಿ ಮನೆಯಲ್ಲಿರುವಂತಹ ಮಕ್ಕಳಿಗೂ ಹಿರಿಯರಿಗೂ ಸಹ ಎಲ್ಲರಿಗೂ ಇಷ್ಟವಾಗುವಂತಹ ಒಂದು ರೆಸಿಪಿ ಆಗಿದೆ. ಹಾಗಾದರೆ ಹೇಗೆ ಮಾಡಬೇಕು ಎಂಬುದನ್ನು ನೋಡೋಣ.

ಮೂರ ಬಣ್ಣದ ದೋಸೆ ಮಾಡುವ ವಿಧಾನ:-

ಮೊದಲಿಗೆ ಮೂರು ಲೋಟ ಅಕ್ಕಿಯನ್ನು ತೆಗೆದುಕೊಂಡು ಸುಮಾರು ಐದರಿಂದ ಆರು ಗಂಟೆಗಳ ಕಾಲ ನೆನೆಸಬೇಕು. ನೆನೆಸಿಟ್ಟಂತಹ ಮೂರು ಲೋಟದ ಅಕ್ಕಿಯನ್ನು  ಬೇರೆ ಬೇರೆಯಾಗಿ ರುಬ್ಬಿಕೊಳ್ಳಬೇಕು. ಮೊದಲು ನೆನಸಿಟ್ಟ ಒಂದು ಲೋಟದ ಅಕ್ಕಿಯನ್ನು ಮಿಕ್ಸಿ ಜಾರ್ ನಲ್ಲಿ  ಉಪ್ಪನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನೀರ್ ದೋಸೆಗೆ ಯಾವ ಪ್ರಮಾಣ ಬೇಕು ಅದೇ ಪ್ರಮಾಣದಲ್ಲಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡಂತಹ ಈ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು.

ಮತ್ತೊಮ್ಮೆ ಅದೇ ಮಿಕ್ಸಿ ಜಾರ್ ನಲ್ಲಿ ಎರಡು ಬ್ಯಾಡಗಿ ಮೆಣಸಿನಕಾಯಿ, ಒಂದು ಸ್ಪೂನ್ ಧನಿಯಾ, ಒಂದು ಸ್ಪೂನ್ ಜೀರಿಗೆ, ಸ್ವಲ್ಪವೇ ಸ್ವಲ್ಪ ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ ಹಾಕಿ ನೀರನ್ನು ಸೇರಿಸಿ ಮತ್ತು ಒಂದು ಕಪ್ ಅಕ್ಕಿ ಸೇರಿಸಿ ರುಬ್ಬಿಕೊಳ್ಳಬೇಕು. ಈ ಹಿಟ್ಟಿನ ಕನ್ಸಿಸ್ಟೆನ್ಸಿ ಕೂಡ ದೋಸೆ ಹಿಟ್ಟಿನ ಹದದಲ್ಲಿ ನೀರನ್ನು ಸೇರಿಸಿಕೊಂಡು ಇಡಬೇಕು.

ನಂತರ ಅದೇ ಮಿಕ್ಸಿ ಜಾರ್ ನಲ್ಲಿ ಸ್ವಲ್ಪ ಕೊತ್ತಂಬರಿ ಪುದೀನಾ, ಕರಿಬೇವು, ಸ್ವಲ್ಪ ಶುಂಠಿ, ಉಪ್ಪು ಮತ್ತು ಒಂದು ಕಪ್ ಅಕ್ಕಿಯನ್ನು ಹಾಕಿ ರುಬ್ಬಿ ಅದು ಸಹ ನೀರ್ ದೋಸೆಯ ಕನ್ಸಿಸ್ಟೆನ್ಸಿಯಲ್ಲಿ ರುಬ್ಬಿ ಇಟ್ಟುಕೊಳ್ಳಬೇಕು.

ನಂತರ ಬಿಸಿಯಾಗಿ ಕಾದಂತಹ ಎಂಚಿನ ಮೇಲೆ ಮೊದಲನೇ ಕಾಲು ಭಾಗ ಕೆಂಪು ಬಿಳಿ ಹಸಿರು ಈ ರೀತಿಯಲ್ಲಿ ನೀರ್ ದೋಸೆಯ ಹಿಟ್ಟನ್ನು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಂಡರೆ ಬಿಸಿಬಿಸಿಯಾದಂತಹ ಟ್ರೈ ಕಲರ್ ದೋಸೆ ರೆಡಿಯಾಗುತ್ತದೆ.

ಇದರಲ್ಲಿ ಯಾವುದೇ ರೀತಿಯಾದಂತಹ ಫುಡ್ ಕಲರ್ಸ್ ಕೂಡ ಬಳಸದೆ ಇರುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದಾಗಿರುತ್ತದೆ. ಅಷ್ಟೇ ಅಲ್ಲದೆ ಈ ರೀತಿ ಕಲರ್ಫುಲ್ ಆಗಿರುವುದರಿಂದ ಮಕ್ಕಳು ಕೂಡ ತುಂಬಾ ಇಷ್ಟಪಟ್ಟು ಇದನ್ನು ತಿನ್ನುತ್ತಾರೆ.

Try new type of Tri color dosa recipe for Independence Day, absolutely everyone likes it.
Try new type of Tri color dosa recipe for Independence Day, absolutely everyone likes it.

 

ಇದನ್ನು ಓದಿ :-

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!

Gas Tips : ಈ ಸೀಕ್ರೆಟ್ ಗೊತ್ತಾದರೆ ಗ್ಯಾಸ್ ಬೇಗ ಕಾಲಿನೇ ಆಗೋದಿಲ್ಲ, ಒಂದೇ ತಿಂಗಳು ಬರುವ ಗ್ಯಾಸ್ 3 ತಿಂಗಳು ಬರುತ್ತೆ !!.

Cockroach Tips: ಮನೆಯಲ್ಲಿ ಜಿರಳೆ ಕಾಟ ಇದಿಯಾ, ಚಿಂತೆ ಬಿಡಿ ಈ ಒಂದು ಉಪಾಯ ಮಾಡಿ ಸಾಕು ಮನೆಯಲ್ಲಿ ಒಂದು ಜಿರಳೆಯೂ ಉಳಿಯುವುದಿಲ್ಲ 2 ನಿಮಿಷ ಸಾಕು.

Leave a comment