Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BBK OTT 2: ಮತ್ತೆ ಬಿಗ್ ಬಾಸ್ ಕನ್ನಡ OTT 2 ಶುರು! ಮನರಂಜನೆ ನಾನ್ ಸ್ಟಾಪ್, ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ

ಹೌದು, ನಿಮಗೆಲ್ಲ ಮನರಂಜನೆ ಕೊಡೋಕೆ ಬಿಗ್ ಬಾಸ್ ಹೊಸ ಸೀಸನ್ ಬರ್ತಿರೋದು ಪಕ್ಕಾ. ಆದರೆ ಇದು ಟಿವಿ ಸೀಸನ್ ಅಲ್ಲ. ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 2 ಆಗಿರಲಿದೆ.

BBK OTT 2: ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋಗೆ ಆಧಾರ ಸ್ಥಂಭ ಇದ್ದ ಹಾಗೆ ಎಂದರೆ ತಪ್ಪಲ್ಲ. ಸಾಕಷ್ಟು ಜನ ಬಿಗ್ ಬಾಸ್ ನೋಡುವುದೇ ಸುದೀಪ್ ಅವರಿಗಾಗಿ ಎಂದು ಕೂಡ ಹೇಳಬಹುದು. ವೀಕೆಂಡ್ ನಲ್ಲಿ ಸುದೀಪ್ ಅವರ ಖಡಕ್ ಮಾತುಗಳು ಎಲ್ಲರಿಗೂ ಮೆಚ್ಚುಗೆ ಆಗುತ್ತದೆ. ಸುದೀಪ್ ಅವರು ಕಳೆದ 10 ಸೀಸನ್ ಗಳಿಂದ ಬಿಗ್ ಬಾಸ್ ಕನ್ನಡ ಶೋ ಹೋಸ್ಟ್ ಮಾಡಿದ್ದಾರೆ. ಈಗಷ್ಟೇ 10ನೇ ಸೀಸನ್ ಮುಗಿದಿದ್ದು, ಹೊಸ ಸೀಸನ್ ಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ..

ಬಿಗ್ ಬಾಸ್ ಕನ್ನಡ ಹೊಸ ಸೀಸನ್?

ಹೌದು, ನಿಮಗೆಲ್ಲ ಮನರಂಜನೆ ಕೊಡೋಕೆ ಬಿಗ್ ಬಾಸ್ ಹೊಸ ಸೀಸನ್ ಬರ್ತಿರೋದು ಪಕ್ಕಾ. ಆದರೆ ಇದು ಟಿವಿ ಸೀಸನ್ ಅಲ್ಲ. ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 2 ಆಗಿರಲಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿ ಜನಪ್ರಿಯತೆ ಪಡೆದಿದೆ. ಇತ್ತ ಕನ್ನಡದಲ್ಲಿ ಕೂಡ ಓಟಿಟಿ 1 ಸೀಸನ್ ಮುಗಿದಿದೆ. 2022ರಲ್ಲಿ ಬಿಗ್ ಬಾಸ್ ಕನ್ನಡ ಓಟಟಿ ಸೀಸನ್ 1 ನಡೆದಿತ್ತು., ಆಗ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಇವರೆಲ್ಲರೂ ಓಟಿಟಿ ಸೀಸನ್ ನಲ್ಲಿದ್ದರು.

ಈ ಸೀಸನ್ ನಲ್ಲಿ ಅತಿಹೆಚ್ಚು ವೋಟ್ಸ್ ಪಡೆದಿದ್ದ 5 ಸ್ಪರ್ಧಿಗಳನ್ನು ಟಿವಿ ಸೀಸನ್ ಗೆ ಕಳಿಸಲಾಯಿತು. ಎರಡು ಕಡೆ ಉತ್ತಮ ಸ್ಪರ್ಧಿಯಾಗಿದ್ದ ರೂಪೇಶ್ ಶೆಟ್ಟಿ ಅವರು ಬಿಬಿಕೆ9 ಗೆದ್ದಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10 ಈಗಷ್ಟೇ ಮುಗಿದಿದೆ. ಕಳೆದ ಎಲ್ಲಾ ಸೀಸನ್ ಗಳಿಗಿಂತ ಅತ್ಯಂತ ಯಶಸ್ವಿಯಾದ ಸೀಸನ್ ಇದು ಎಂದು ಹೇಳಿದರೆ ತಪ್ಪಲ್ಲ. ಬಿಬಿಕೆ10 ಮುಗಿದು ಎರಡು ವಾರ ಕಳೆಯುವುದರ ಒಳಗೆ ಬಿಗ್ ಬಾಸ್ ಓಟಿಟಿ ಸೀಸನ್ ಬಗ್ಗೆ ಮಾತುಕತೆ ಶುರುವಾಗಿದೆ.

ಬಿಬಿಕೆ ಓಟಿಟಿ ಸೀಸನ್ 2 ಯಾವಾಗ?

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 2 ಶೀಘ್ರದಲ್ಲೇ ಶುರು ಆಗುವುದಂತೂ ಖಂಡಿತ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಸೀಸನ್ ಅನ್ನು ಕೂಡ ಸುದೀಪ್ ಅವರೇ ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ಜಿಯೋ ಸಿನಿಮಾ ಆಪ್ ನಲ್ಲಿ ಬಿಬಿಕೆ ಓಟಿಟಿ ಲೈವ್ ಸ್ಟ್ರೀಮ್ ಆಗಲಿದೆ ಎಂದು ಮಾಹಿತಿ ಸಿಕ್ಕಿದೆ. ಜಿಯೋ ಸಿನಿಮಾ ಆಪ್ ನಲ್ಲಿ ಫ್ರೀಯಾಗಿ ಕಂಟೆಂಟ್ ನೋಡಬಹುದು. ಹಾಗಾಗಿ ಓಟಿಟಿ ಸೀಸನ್ ಯಶಸ್ವಿ ಆಗುವುದರಲ್ಲಿ ಸಂಶಯ ಅಂತೂ ಇಲ್ಲ.

ಈಗ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಕುರಿತಾದ ಕೆಲಸಗಳಲ್ಲಿ ಬ್ಯುಸಿ ಇದ್ದು, ಅವರಿಗೆ ಬಿಡುವು ಸಿಕ್ಕ ಕೂಡಲೇ ಓಟಿಟಿ ಸೀಸನ್ ಶುರುವಾಗಲಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದ್ದು, ಅದನ್ನು ತಿಳಿಯಲು ಇನ್ನು ಕೆಲ ಸಮಯ ಕಾದು ನೋಡಬೇಕಿದೆ.

Big Boss Kannada OTT 2 starts again! Entertainment non-stop,

Kannada Cinema Technology: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾಗಳು, ಯಾವುವು ಗೊತ್ತೇ ಯಪ್ಪಾ ತಿಳಿದರೆ ಗ್ರೇಟ್ ಅಂತೀರಾ ಕಣ್ರೀ !!

Leave a comment