Kannada Cinema Technology: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾಗಳು, ಯಾವುವು ಗೊತ್ತೇ ಯಪ್ಪಾ ತಿಳಿದರೆ ಗ್ರೇಟ್ ಅಂತೀರಾ ಕಣ್ರೀ !!
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಶಾಂತಿ ಕ್ರಾಂತಿ ಸಿನಿಮಾವನ್ನು ಏಕದಿನದ ನಾಲ್ಕು ಚಿತ್ರಿಕರಣದಲ್ಲಿ ಶೂಟಿಂಗ್ ಮಾಡಲಾಗಿದೆ. ಅಂದರೆ ತೆಲುಗಿನಲ್ಲಿ ನಾಗಾರ್ಜುನ್ ಮತ್ತು ಹಿಂದಿ ಹಾಗೂ ತಮಿಳುನಲ್ಲಿ ರಜನಿಕಾಂತ್ ಅವರು ನಟಿಸಿದ್ದಾರೆ.
Kannada Cinema Technology: ಅನೇಕ ಭಾಷೆಯ ಚಿತ್ರಗಳು ತಮ್ಮ ಸಿನಿಮಾಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ ಅದನ್ನು ಪ್ರಯೋಗಕ್ಕೆ ತರುತ್ತಾರೆ. ಹಾಗೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲೂ ಕೂಡ ಕೆಲ ಹೊಸ ಪ್ರಯೋಗಗಳನ್ನು ಸಿನಿಮಾಗಳಲ್ಲಿ ತಂದಿದ್ದಾರೆ. ಅದರಲ್ಲೂ ಅದು ಸಕ್ಸಸ್ ಕೂಡ ಆಗಿದೆ. ಹಾಗಾದರೆ ಬನ್ನಿ ಅವು ಯಾವುವು ಎಂದು ಇಲ್ಲಿ ನೋಡೋಣ..
ಡಾ ವಿಷ್ಣುವರ್ಧನ್ ಅವರ ಅಭಿನಯದ ನಾಗರಹಾವು ಚಿತ್ರವು 1972 ರಲ್ಲಿ ಬಿಡುಗಡೆಯಾಯಿತು. ಇನ್ನು ಈ ಸಿನಿಮಾದಲ್ಲಿ ಬಾರೆ ಬಾರೆ ಚೆಲುವಿನ ತಾರೆ ಎನ್ನುವ ಹಾಡನ್ನು ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಸ್ಲೋಮೋಷನ್ ನಲ್ಲಿ ಮಾಡಲಾಗಿದೆ. ಇದರ ಜೊತೆಗೆ ಇದು ಯಶಸ್ಸನ್ನು ಕೂಡ ಕಾಣಿತು.
ಡಾ ವಿಷ್ಣುವರ್ಧನ್ ಅವರ ಅಭಿನಯದ ಸಿಂಗಾಪುರದಲ್ಲಿ ರಾಜಾಕುಳ್ಳ ಎನ್ನುವ ಸಿನಿಮಾದ ಇಡೀ ಶೂಟಿಂಗ್ ಅನ್ನು ಪರದೇಶದಲ್ಲಿ ಮಾಡಲಾಗಿದ್ದು ಇದು ಕೂಡ ಭಾರತದಲ್ಲಿ ಮೊಟ್ಟಮೊದಲನೆಯ ಸಿನಿಮಾ ಆಗಿ ಗುರುತಿಸಿಕೊಂಡಿದೆ. ಇನ್ನು ಈ ಸಿನಿಮಾ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 225 ದಿನಗಳ ಕಾಲ ಓಡಿದ ಮೊದಲನೆಯ ಕನ್ನಡ ಸಿನಿಮಾ ಆಗಿದೆ.
ಡಾ ರಾಜ್ ಕುಮಾರ್ ಅವರ ಅಭಿನಯದ ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಒಂದು ಅಂಡರ್ ವಾಟರ್ ಫೈಟ್ ಶೂಟ್ ಇದೆ. ಇನ್ನು ಇದರಲ್ಲಿ ಡಾ ರಾಜ್ ಕುಮಾರ್ ಅವರು ಯಾವುದೇ ಆಕ್ಸಿಜನ್ ಮಾಸ್ಕ್ ಅನ್ನು ಬಳಸದೆ ಲಂಡನ್ನಿಂದ ತರಿಸಿದ್ದ ಕೃತಕ ಅಕ್ಟೋಪಸ್ ಜೊತೆಗೆ ಫೈಟ್ ಮಾಡಿದ್ದಾರೆ. ಈ ರೀತಿ ಪ್ರಯೋಗವನ್ನು ಮಾಡಿ ಇದು ಮೊದಲನೆಯ ಸಿನಿಮಾವಾಗಿ ಗುರುತಿಸಿಕೊಂಡಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಶಾಂತಿ ಕ್ರಾಂತಿ ಸಿನಿಮಾವನ್ನು ಏಕದಿನದ ನಾಲ್ಕು ಚಿತ್ರಿಕರಣದಲ್ಲಿ ಶೂಟಿಂಗ್ ಮಾಡಲಾಗಿದೆ. ಅಂದರೆ ತೆಲುಗಿನಲ್ಲಿ ನಾಗಾರ್ಜುನ್ ಮತ್ತು ಹಿಂದಿ ಹಾಗೂ ತಮಿಳುನಲ್ಲಿ ರಜನಿಕಾಂತ್ ಅವರು ನಟಿಸಿದ್ದಾರೆ. ಇನ್ನು ಈ ನಾಲ್ಕು ಭಾಷೆಯ ಸಿನಿಮಾಗಳನ್ನು ಒಂದೇ ಸೆಟ್ನಲ್ಲಿ ಶೂಟ್ ಮಾಡಲಾಗಿದೆ ಮತ್ತು ಸುಮಾರು 10 ಕೋಟಿ ಬಜೆಟ್ ಆಗಿದ್ದು ಭಾರತದಲ್ಲಿ ಮೊಟ್ಟಮೊದಲನೆಯ ಬಾರಿಗೆ ಹೆಚ್ಚು ಬಜೆಟ್ ಇರುವ ಸಿನಿಮಾ ಆಗಿ ಗುರುತಿಸಿಕೊಂಡಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಎಕೆ 47 ಸಿನಿಮಾ ಭಾರತದಲ್ಲಿ ಮೊಟ್ಟಮೊದಲನೆಯದಾಗಿ ಡಿಟಿಎಕ್ಸ್ ಸೌಂಡ್ ಎಫೆಕ್ಟ್ ಅನ್ನು ಬಳಕೆ ಮಾಡಿಕೊಂಡಿದೆ. ಇನ್ನು ಇದು ಶಿವರಾಜಕುಮಾರ್ ಅವರ 55ನೆಯ ಸಿನಿಮಾ ಆಗಿದ್ದು ಇದು ಬಿಡುಗಡೆಯಾದ ಎರಡನೆಯ ವಾರಗಳಲ್ಲಿ ಸುಮಾರು 55 ಕೋಟಿ ರೂ.ಗಳ ಕಲೆಕ್ಷನ್ ಆಗಿತ್ತು.
ಈಗ ಯಾವುದೇ ಸಿನಿಮ ನೋಡಿದರೂ ಕೂಡ ಪ್ಯಾನ್ ಸಿನಿಮಾ ಆಗುತ್ತಿದೆ. ಇನ್ನು ನಮ್ಮ ಭಾರತದಲ್ಲಿ ಮೊಟ್ಟಮೊದಲನೆಯದಾಗಿ ಡಾ ರಾಜಕುಮಾರ್ ಅವರ ಅಭಿನಯದ ಮಹಿಶಾಸುರ ಮರ್ದಿನಿ ಎನ್ನುವ ಸಿನಿಮಾ ಮೊಟ್ಟಮೊದಲನೆಯದಾಗಿ ಪ್ಯನ್ ಇಂಡಿಯಾ ಸಿನಿಮಾ ಆಗಿದ್ದು ಇದು 8 ಭಾಷೆಗಳಲ್ಲಿ ಡಬ್ ಆಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಓಂ ಚಿತ್ರವು ಭಾರತದ ಮೊಟ್ಟಮೊದಲನೆಯ ಸಿನಿಮಾ ವಾಗಿ ಅಂದರೆ ಸುಮಾರು 550ಕ್ಕಿಂತ ಹೆಚ್ಚು ಬಾರಿ ಮರು ಬಿಡುಗಡೆಯಾಗಿ ಗಿನ್ನೆಸ್ ದಾಖಲೆಯನ್ನು ಏರಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಮುಂಗಾರು ಮಳೆ ಚಿತ್ರವು 50 ಕೋಟಿ ರೂ.ಗಳಿಗಿಂತ ಹೆಚ್ಚು ಬಾಕ್ಸ್ ನಲ್ಲಿ ಕಲೆಕ್ಷನ್ ಆಗಿದ್ದು ಇದು ಕನ್ನಡದ ಮೊದಲನೆಯ ಸಿನಿಮಾ ಆಗಿದೆ. ಹಾಗೆ ಈ ಸಿನಿಮಾ ಸುಮಾರು 855 ದಿನಗಳ ಕಾಲ ಓಡಿ ಕನ್ನಡದಲ್ಲಿ ಅತಿ ಹೆಚ್ಚು ದಿನಗಳ ಕಾಲ ಓಡಿದ ಮೊದಲನೆಯ ಸಿನಿಮಾವಾಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಮಿಲನ ಚಿತ್ರವು ಮಲ್ಟಿಪ್ಲೆಕ್ಸ್ ನಲ್ಲಿ ಸುಮಾರು 500ಕ್ಕಿಂತ ಹೆಚ್ಚು ದಿನಗಳ ಕಾಲ ಓಡಿ ಕನ್ನಡದಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ ಅತಿ ಹೆಚ್ಚು ದಿನಗಳ ಕಾಲ ಓಡಿದೆ ಸಿನಿಮವಾಗಿದೆ.
Kannada movies used new technology for the first time in the Indian cinema industry.
Actress Rupini : ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ, ಅವರ ಪತಿ ಯಾರು ಗೊತ್ತೇ ??
ದರ್ಶನ್ ಶಾಸ್ತ್ರಿ ಚಿತ್ರದ ನಟಿ ಮಾನ್ಯ ಈಗ ಆಫೀಸಿನಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ?? ಅವರ ಪತಿ ಯಾರು ಗೊತ್ತಾ??
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಟಾಪ್ ಸಿನಿಮಾಗಳು ಯಾವ್ಯಾವು ಗೊತ್ತಾ ಇದರಲ್ಲಿ ನಿಮ್ಮ ಹೆಚ್ಚಿನ ಚಿತ್ರ ಯಾವುದು??