Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LIC ಇಂದ ಹೊಸ ಪಾಲಿಸಿ ಲಾಂಚ್! LIC Index Plus ಯೋಜನೆಯ ಬೆನಿಫಿಟ್ಸ್ ಏನು ಗೊತ್ತಾ?

LIC ಲಾಂಚ್ ಮಾಡಿರುವ ಹೊಸ ಪಾಲಿಸಿಯ ಹೆಸರು LIC ಇಂಡೆಕ್ಸ್ ಪ್ಲಸ್ ಪಾಲಿಸಿ. ಈ ಹೊಸ ಪಾಲಿಸಿ ಇದು ಇರುವಷ್ಟು ಸಮಯ ಕೂಡ ನಿಮಗೆ ಜೀವವಿಮೆ ಒದಗಿಸುತ್ತದೆ.

LIC Index Plus: ನಮ್ಮ ದೇಶದ ಜನರಲ್ಲಿ ಒಳ್ಳೆಯ ನಂಬಿಕೆ ಗಳಿಸಿರುವ ಸಂಸ್ಥೆ LIC. ಈ ಸಂಸ್ಥೆಯಲ್ಲಿ ಜನರಿಗೆ ಅನುಕೂಲ ಆಗುವ ಹಾಗೆ ಸಣ್ಣದರಿಂದ ಹಿಡಿದು ದೊಡ್ಡ ಯೋಜನೆಗಳಿದ್ದು, ಇದೀಗ LIC ಇಂದ ಮತ್ತೊಂದು ಹೊಸ ಪಾಲಿಸಿ ಲಾಂಚ್ ಆಗಿದ್ದು, ಇದು ಯೂನಿಟ್ ಲಿಂಕ್ಡ್, ರೆಗ್ಯುಲರ್ ಪ್ರೀಮಿಯಂ, ಪರ್ಸನಲ್ ಲೈಫ್ ಇನ್ಷುರೆನ್ಸ್ ಪಾಲಿಸಿ ಆಗಿದೆ. ಈ ಯೋಜನೆಯ ಮೂಲಕ ನಿಮಗೆ ಏನೆಲ್ಲಾ ಬೆನಿಫಿಟ್ಸ್ ಸಿಗುತ್ತದೆ ಎಂದು ತಿಳಿದುಕೊಳ್ಳೋಣ..

LIC Index Plus Policy:

LIC ಲಾಂಚ್ ಮಾಡಿರುವ ಹೊಸ ಪಾಲಿಸಿಯ ಹೆಸರು LIC ಇಂಡೆಕ್ಸ್ ಪ್ಲಸ್ ಪಾಲಿಸಿ. ಈ ಹೊಸ ಪಾಲಿಸಿ ಇದು ಇರುವಷ್ಟು ಸಮಯ ಕೂಡ ನಿಮಗೆ ಜೀವವಿಮೆ ಒದಗಿಸುತ್ತದೆ. ಈ ಯೋಜನೆಯಲ್ಲಿ ನಿಮಗೆ ವಾರ್ಷಿಕ ಪ್ರೀಮಿಯಂ ಅನ್ನು ನಿಗದಿ ಆಗಿರುವ ಮೊತ್ತದ ಅನುಸಾರ ನಿರ್ಧರಿಸಲಾಗಲಿದ್ದು, ಹೆಚ್ಚಿನ ಹಣವನ್ನು ನಿಮ್ಮ ನಿಧಿಗೆ ಆಡ್ ಮಾಡಲಾಗುತ್ತದೆ. ಇದರಿಂದ ನೀವು ಹೆಚ್ಚುವರಿ ಘಟಕೆ ಪಡೆಯಬಹುದು. ಇದೆಲ್ಲದರಿಂದ ಈ ಯೋಜನೆಯ ಮೂಲಕ ನೀವು ಹೆಚ್ಚು ಅನುಕೂಲ ಪಡೆಯಬಹುದು.

LIC Index Plus Policy Benefits:

LIC ಇಂದ ಸಿಕ್ಕಿರುವ ಮಾಹಿತಿಯ ಅನುಸಾರ ಈ ಹೊಸ ಪಾಲಿಸಿಯು ಇಂತಿಷ್ಟು ಸಮಯ ಪ್ರೀಮಿಯಂ ಕಟ್ಟುವುದನ್ನು ಪೂರ್ತಿ ಮಾಡಿದ ಬಳಿಕ, ವರ್ಷಕ್ಕೆ ಕಟ್ಟುವ ಪ್ರೀಮಿಯಂ ನಲ್ಲಿ ಹೆಚ್ಚುವರಿ ಹಣವನ್ನು ಘಟಕ ನಿಧಿಗೆ ಜೋಡಿಸಲಾಗುತ್ತದೆ. ಇದರಿಂದ ಘಟಕೆ ಖರೀದಿ ಮಾಡಲಾಗುತ್ತದೆ.

LIC Index Policy ಖಾತೆ ತೆರೆಯಲು ಅರ್ಹತೆಗಳು:

1. ಈ ಯೋಜನೆಯಲ್ಲಿ ಖಾತೆ ತೆರೆಯಲು ನೀವು ಪಾವತಿ ಮಾಡುವ ಮೂಲ ವಿಮೆಯ ಪ್ರೀಮಿಯಂ ಮೇಲಿನ ಮಿನಿಮಮ್ 90 ದಿನಗಳು ಪೂರ್ತಿಯಾದ ನಂತರ 50 ರಿಂದ 60 ವಯಸ್ಸಾಗುವವರೆಗು ಇರುತ್ತದೆ.

2. ಈ ಪಾಲಿಸಿ ಪಡೆಯುವ ವ್ಯಕ್ತಿಯ ವಯಸ್ಸು 50 ಅಥವಾ 60 ವರ್ಷಗಳ ಒಳಗಿರಬೇಕು. ಹಾಗೆಯೇ ಹುಟ್ಟಿ 90 ದಿವಸವಾದ ಮಗುವಿನ ಹೆಸರಿನಲ್ಲೂ ಪಾಲಿಸಿ ತೆರೆಯಬಹುದು.

3. 90 ದಿನಗಳ ಮಗುವಿನಿಂದ 50 ವರ್ಷಗಳ ಒಳಗಿರುವವರು ಪಾಲಿಸಿ ಪಡೆದರೆ, ಅವರು ಪಾವತಿ ಮಾಡುವ ಇಡೀ ವರ್ಷದ ಪ್ರೀಮಿಯಂ ಗಿಂತ 7 ರಿಂದ 10% ಜಾಸ್ತಿ ಮೊತ್ತವನ್ನು ವಿಮೆಯ ಮೊತ್ತವಾಗಿ ಫಿಕ್ಸ್ ಮಾಡಲಾಗುತ್ತದೆ.

4. 50 ರಿಂದ 60 ವರ್ಷಗಳ ಒಳಗಿನ ವ್ಯಕ್ತಿ ಪಾಲಿಸಿ ಖಾತೆ ಶುರು ಮಾಡಿದರೆ, ವಾರ್ಷಿಕ ವಿಮೆಗಿಂತ 7% ಹೆಚ್ಚು ಮೊತ್ತವನ್ನು ವಿಮೆಯ ಮೊತ್ತವಾಗಿ ಮಾಡಲಾಗುತ್ತದೆ.

5. ಇದು 15 ವರ್ಷಗಳ ಮೆಚ್ಯುರಿಟಿ ಅವಧಿ ಹೊಂದಿರುವ ಪಾಲಿಸಿ ಆಗಿದ್ದು, ಮ್ಯಾಕ್ಸಿಮಮ್ 25 ವರ್ಷಗಳವರೆಗು ವಿಸ್ತರಿಸಬಹುದು.

A new policy launch from LIC! What are the benefits of the LIC Index Plus scheme?

Post Office Money Savings Scheme: ಈ ಒಂದು ಸ್ಕೀಮ್ ನಲ್ಲಿ 4.5 ಲಕ್ಷ ಬಡ್ಡಿಯ ರೂಪದಲ್ಲೇ ಪಡೆಯಿರಿ! ಪೋಸ್ಟ್ ಆಫೀಸ್ ನ ಸೂಪರ್ ಸ್ಕೀಮ್

Leave a comment