Bigg Boss Vinay: ಬಿಗ್ ಬಾಸ್ ಮನೆಯ ಆನೆ ವಿನಯ್ ಗೌಡ ಅವರ ತಾಯಿ ಎಲ್ಲಿದ್ದಾರೆ? ತಾಯಿಯಿಂದ ವಿನಯ್ ಅವರಿಗೆ ಏನಾಗಿದೆ ಗೊತ್ತಾ?
ವಿನಯ್ ಗೌಡ ಅವರು ಕನ್ನಡ ಕಿರುತೆರೆ ವೀಕ್ಷಕರಿಗೆ ಹೆಚ್ಚು ಹತ್ತಿರ ಆಗಿದ್ದು ಹರ ಹರ ಮಹಾದೇವ ಧಾರವಾಹಿ ಮೂಲಕ. ಸಾಕ್ಷಾತ್ ಶಿವನ ಹಾಗೆ ಕಾಣುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿತ್ತು.
Bigg Boss Vinay Mother: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಮನೆಯ ಆನೆ ಎಂದು ಹೆಸರು ಪಡೆದು, ವಿನ್ನರ್ ಆಗುವ ಎಲ್ಲಾ ಲಕ್ಷಣಗಳು ಇದೆ ಎಂದು ಸಾಬೀತುಪಡಿಸಿದ ಅಭ್ಯರ್ಥಿ ವಿನಯ್ ಗೌಡ. ಹಾಗೆಯೇ ಅಗ್ರೆಶನ್ ಇಂದಲೇ ಹೆಚ್ಚು ಸುದ್ದಿಯಾದವರು ಇವರು. ತೆರೆಮೇಲೆ ಬಿಗ್ ಬಾಸ್ ಮನೆಯಲ್ಲಿ ಖಡಕ್ ಆಗಿದ್ದ ವಿನಯ್ ಗೌಡ ಅವರ ತಾಯಿ ಯಾರು? ತಾಯಿಯ ಜೊತೆಗೆ ಅವರ ಸಂಬಂಧ ಹೇಗಿದೆ ಗೊತ್ತಾ?
ವಿನಯ್ ಗೌಡ ಅವರು ಕನ್ನಡ ಕಿರುತೆರೆ ವೀಕ್ಷಕರಿಗೆ ಹೆಚ್ಚು ಹತ್ತಿರ ಆಗಿದ್ದು ಹರ ಹರ ಮಹಾದೇವ ಧಾರವಾಹಿ ಮೂಲಕ. ಸಾಕ್ಷಾತ್ ಶಿವನ ಹಾಗೆ ಕಾಣುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿತ್ತು. ಮಹಾದೇವನಾಗಿ ಎಲ್ಲರೂ ವಿನಯ್ ಅವರನ್ನು ಮೆಚ್ಚಿಕೊಂಡಿದ್ದರು, ಆದರೆ ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರ ವ್ಯಕ್ತಿತ್ವ ಜನರಿಗೆ ಅರ್ಥವಾಗಲು ಹೆಚ್ಚು ಸಮಯ ಬೇಕಾಯಿತು ಎಂದರೆ ತಪ್ಪಲ್ಲ.
ಅತಿಯಾದ ಕೋಪ ಮತ್ತು ಅಗ್ರೆಶನ್ ಇಂದಲೇ ಸುದ್ದಿಯಾದದ್ದು ವಿನಯ್ ಗೌಡ. ಆದರೆ ಸೀಸನ್ ಮುಗಿಯುವ ವೇಳೆಗೆ ಇವರು ಎಂಥ ಜಂಟಲ್ ಮ್ಯಾನ್ ಅನ್ನುವುದು ಗೊತ್ತಾಗಿದ್ದು. ಬಿಗ್ ಬಾಸ್ ಮನೆಯ ವಿಲ್ಲನ್ ಆಗಿ ಫೇಮಸ್ ಆಗಿದ್ದ ವಿನಯ್ ಗೌಡ ರಿಯಲ್ ಲೈಫ್ ನಲ್ಲಿ ತುಂಬಾ ನೊಂದಿದ್ದಾರೆ. 15 ವರ್ಷ ಇದ್ದಾಗಲೇ ಇವರ ತಂದೆ ತಾಯಿ ವಿಚ್ಛೇದನ ಪಡೆದು, ಮಗನನ್ನು ಒಂಟಿ ಮಾಡಿ ಅವರಿಬ್ಬರು ದೂರವಾಗುತ್ತಾರೆ.
ಆಗಿನಿಂದ ಶುರುವಾಗುತ್ತದೆ ವಿನಯ್ ಅವರ ಕಷ್ಟಗಳು. ಅದೆಲ್ಲಾ ಏನೇ ಇದ್ದರೂ ಸಹ ಇಂದು ವಿನಯ್ ಅವರು ತಮ್ಮದೇ ಸ್ಥಾನ ಪಡೆದುಕೊಂಡಿರುವುದು ವಿಶೇಷ. ವಿನಯ್ ಅವರ ತಂದೆ ಈಗ ಇಲ್ಲ ಕೆಲ ವರ್ಷಗಳ ಹಿಂದೆ ವಿಧಿವಶರಾಗಿದ್ದಾರೆ. ಇನ್ನು ವಿನಯ್ ಅವರ ತಾಯಿಯ ಬಗ್ಗೆ ಹೇಳುವುದಾದರೆ, ವಿಚ್ಛೇದನ ಪಡೆದ ನಂತರ ವಿನಯ್ ಅವರ ತಾಯಿ ಮತ್ತೊಂದು ಮದುವೆ ಆಗಿದ್ದಾರೆ. ಅವರಿಗೆ ಮಕ್ಕಳು ಕೂಡ ಇದ್ದಾರಂತೆ.
ಅದರ ತಾಯಿ ಎಲ್ಲಿದ್ದಾರೆ ಎಂದು ವಿನಯ್ ಅವರಿಗೆ ಗೊತ್ತಿಲ್ಲ. ವಿನಯ್ ಅವರು ಅಮ್ಮನ್ನು ಭೇಟಿ ಮಾಡಿ 20 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದು ಹೋಗಿದೆ. ಆದರೆ ಒಂದು ದಿನವೂ ಈ ವಿಚಾರ ಇಟ್ಟುಕೊಂಡು ಸಿಂಪತಿ ಪಡೆಯಲಿಲ್ಲ ವಿನಯ್. ಅಮ್ಮ ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದು ಬಯಸುತ್ತಾರೆ. ತಮ್ಮ ಹೆಂಡತಿ ಮಗುವನ್ನು ತುಂಬಾ ಪ್ರೀತಿಸುತ್ತಾರೆ.
Where is Vinay Gowda’s mother? Here are the details about his mother.