Karimani Malika: ಕೊನೆಗೂ ಕರೀಮಣಿ ಮಾಲೀಕ ಯಾರು ಅಂತ ಗೊತ್ತಾಯ್ತು!
ಈ ಹಾಡಿಗೆ ಮ್ಯೂಸಿಕ್ ಕೊಟ್ಟವರು ಗುರುಕಿರಣ್ ಅವರು. ಇದೊಂದು ರೀತಿ ಪ್ಯಾತೋ ಸಾಂಗ್. ಆದರೆ ಇತ್ತೀಚೆಗೆ ಲವ್ ಬ್ರೇಕಪ್ ಕಾರಣಕ್ಕೆ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ.
Karimani Malika: ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಹಾಡು ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ಹಾಡಿನ, ಕರೀಮಣಿ ಮಾಲೀಕ ನೀನಲ್ಲ ಸಾಲುಗಳು.. ಈ ಹಾಡು ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನಾಗಿ ನಟಿಸಿದ ಎರಡನೇ ಸಿನಿಮಾ ಉಪೇಂದ್ರ ಸಿನಿಮಾದ ಹಾಡು. ಉಪೇಂದ್ರ ಅವರು ಮತ್ತು ಪ್ರೇಮಾ ಅವರ ಮೇಲೆ ಈ ಹಾಡನ್ನು ಚಿತ್ರೀಕರಿಸಲಾಗಿದೆ..
ಈ ಹಾಡಿಗೆ ಮ್ಯೂಸಿಕ್ ಕೊಟ್ಟವರು ಗುರುಕಿರಣ್ ಅವರು. ಇದೊಂದು ರೀತಿ ಪ್ಯಾತೋ ಸಾಂಗ್. ಆದರೆ ಇತ್ತೀಚೆಗೆ ಲವ್ ಬ್ರೇಕಪ್ ಕಾರಣಕ್ಕೆ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಏನಿಲ್ಲ ಏನಿಲ್ಲ ಹಾಡಿಗೆ ಡಿಜೆ ಬೀಟ್ಸ್ ಮಿಕ್ಸ್ ಮಾಡಿ, ಎಲ್ಲರೂ ಇದೇ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ, ಎಲ್ಲಾ ಕಡೆ ಈ ಹಾಡಿನದ್ದೇ ಹವಾ ಎಂದರೆ ತಪ್ಪಲ್ಲ. ಈ ಹಾಡಿನ ಸಾಹಿತ್ಯ ಬರೆದಿರುವವರು ಉಪೇಂದ್ರ ಅವರೇ, ಡೀಪ್ ಮೀನಿಂಗ್ ಹೊಂದಿರುವ ಹಾಡು ಇದು ಎಂದರು ತಪ್ಪಲ್ಲ.
ಈ ಹಾಡಿನಲ್ಲಿ ಕೊನೆಯದಾಗಿ ಕೇಳಿಬರುವ ಪ್ರಶ್ನೆ ಕರೀಮಣಿ ಮಾಲೀಕ ಯಾರು ಎನ್ನುವುದು.. ಅದಕ್ಕೀಗ ತಮಾಷೆಯ ಉತ್ತರ ಸಿಕ್ಕಿದ್ದು, ಕರೀಮಣಿ ಮಾಲೀಕ ರಾಹುಲ್ಲಾ ಎಂದು ಮತ್ತೊಂದು ವಿಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಚಂದ್ರು ಅವರ ಹೋಟೆಲ್ ನ ಬೆಳ್ಳುಳ್ಳಿ ಕಬಾಬ್ ವಿಡಿಯೋ ಕೂಡ ವೈರಲ್ ಆಯಿತು. ಅವರ ಹೋಟೆಲ್ ನಲ್ಲಿ ಕೆಲಸ ಮಾಡುವ ಹುಡುಗ ರಾಹುಲ್ ಹೆಸರು ರಾಹುಲ್ಲಾ ಎಂದು ವೈರಲ್ ಆಗಿತ್ತು.
https://www.instagram.com/vickypedia_007/?hl=en
ವೈರಲ್ ಆಗಿರುವ ಈ ಎರಡು ವಿಷಯಗಳನ್ನು ಇಟ್ಟುಕೊಂಡು, ನಾನು ನಂದಿನಿ ಹಾಡಿನ ಖ್ಯಾತಿಯ ವಿಕಿಪೀಡಿಯಾ ಅವರು ಕರೀಮಣಿ ಮಾಲೀಕ ರಾಹುಲ್ಲಾ ಎಂದು ಹೊಸದಾಗಿ ರೀಲ್ಸ್ ಮಾಡಿ, ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಕೊನೆಗೂ ಕರೀಮಣಿ ಮಾಲಿಕ ಯಾರು ಅಂತ ಗೊತ್ತಾಯ್ತು ಎಂದು ನೆಟ್ಟಿಗರು ಈ ವಿಡಿಯೋ ಕೂಡ ವೈರಲ್ ಆಗುವ ಹಾಗೆ ಮಾಡಿದ್ದಾರೆ.
Finally found out who is the owner of Karimani