Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಜಿಟಿ ಜಿಟಿ ಮಳೆಗೆ 10 ನಿಮಿಷದಲ್ಲಿ ಗರಿಗರಿ ರವೆ ದೋಸೆ ರೆಡಿಯಾಗುತ್ತದೆ, ಎಷ್ಟು ಚೆನ್ನಾಗಿರುತ್ತೆ ಗೊತ್ತ ಈ ಅದ್ಭುತ ದೋಸೆ, ಬಾಯಲ್ಲಿ ನೀರು ಬರುತ್ತೆ.

Rava Dosa Recipe: ಮನೆಯಲ್ಲಿ ಮಹಿಳೆಯರು ಬೆಳಗ್ಗೆ ಟಿಫನ್ ಆಗಲಿ ಅಥವಾ ಸ್ಕೂಲ್ ಗಳಿಂದ ಸಂಜೆ ಬಂದಂತಹ ಮಕ್ಕಳಿಗೆ ಆಗಲಿ, ಸ್ನಾಕ್ಸ್ ರೂಪದಲ್ಲಿ ಈ ರೀತಿಯಾದಂತಹ ದೋಸೆಯನ್ನು ಮಾಡಿಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅಷ್ಟೇ ಅಲ್ಲದೆ ಇದು ಬರೀ ಹತ್ತೆ ನಿಮಿಷಗಳಲ್ಲಿ ತಯಾರಿಸುವಂತಹ ಒಂದು ದೋಸೆ ಆಗಿದೆ. ತಡ ಮಾಡದೆ ಆ ದೋಸೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

ರವೆ ದೋಸೆ ಮಾಡುವ ವಿಧಾನ:-

ಮೊದಲಿಗೆ ಒಂದು ಬಟ್ಟಲಿನಲ್ಲಿ ಒಂದು ಕಪ್ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಬೇಕು. ಅದರೊಳಗೆ ಯಾವುದೇ ರೀತಿಯಾದಂತಹ ರವೆಯನ್ನಾದರೂ ಸರಿ ಅರ್ಧ ಕಪ್ ನಷ್ಟು ಹಾಕಿ, ಅದರೊಳಗೆ ಎರಡು ಸ್ಪೂನ್ ಮೈದಾ ಮತ್ತು ಒಂದು ಸ್ಪೂನ್ ಕಡಲೆ ಹಿಟ್ಟನ್ನು ಹಾಕಬೇಕು. ರವೆ ದೋಸೆ ಗರಿಗರಿಯಾಗಿ ಬರುವುದಷ್ಟೇ ಅಲ್ಲದೆ ಕಲರ್ ಕೂಡ ತುಂಬಾ ಚೆನ್ನಾಗಿ ಇರುತ್ತದೆ. ನಂತರ ಅದರೊಳಗೆ ಎರಡೂವರೆ ಕಪ್ ನಷ್ಟು ನೀರನ್ನು ಹಾಕಿ ಕಲಸಿ ಸುಮಾರು 10 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.

ನಂತರ ಅದರೊಳಗೆ ಸ್ವಲ್ಪ ಕರಿಬೇವು ಕಾಲು ಟೀ ಸ್ಪೂನ್ ಕಾಳು ಮೆಣಸು, ಒಂದು ಇಂಚು ಶುಂಠಿ, ಎರಡರಿಂದ ಮೂರು ಹಸಿಮೆಣಸಿನಕಾಯಿ, ಅರ್ಧ ಟೀ ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ನಿಮಗೆ ಇಷ್ಟ ಇದ್ದರೆ ತೆಂಗಿನ ತುರಿಯನ್ನು ಸಹ ಎರಡು ಸ್ಪೂನ್ ಹಾಕಿಕೊಳ್ಳಬಹುದು. ನಂತರ ಅದಕ್ಕೆ ಇನ್ನೂ ನೀರಿನ ಪ್ರಮಾಣ ಬೇಕಿದ್ದರೆ ನೋಡಿಕೊಂಡು  ಹಾಕಿಕೊಳ್ಳಬಹುದು. ಈ ಹಿಟ್ಟಿನ ಹದ ಹೇಗಿರಬೇಕು ಎಂದರೆ ನೀರ್ದೋಸೆಗೆ ನಾವು ಯಾವ ರೀತಿಯಲ್ಲಿ ಹಿಟ್ಟನ್ನು ಕಲಸಿಕೊಳ್ಳುತ್ತೇವೆಯೋ ಅದೇ ರೀತಿಯಲ್ಲಿ ಇದು ತಿಳಿಯಾಗಿ ಇರಬೇಕು.

ನಂತರ ಒಲೆಯ ಮೇಲೆ ಒಂದು ಫ್ಯಾನ್ ಅಥವಾ ತವವನ್ನು ಇಟ್ಟು ಮೊದಲು ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ಸಣ್ಣಹೇ ಹೆಚ್ಚಿಕೊಂಡಂತಹ ಈರುಳ್ಳಿಯನ್ನು ಹಾಕಿ ನೀರ್ ದೋಸೆ ಹೇಗೆ ಮಾಡುತ್ತೇವೆ ಅದೇ ರೀತಿಯಲ್ಲಿ ಇದನ್ನು ಮಾಡಿದರೆ ತುಂಬಾ ರುಚಿಯಾದಂತಹ ಮತ್ತು ಗರಿಗರಿಯಾದಂತಹ ದೋಸೆ ರೆಡಿಯಾಗುತ್ತದೆ. ಅಷ್ಟೇ ಅಲ್ಲದೆ ಇದು ದೇಹಕ್ಕೂ ಕೂಡ ತಂಪನ್ನು ನೀಡುತ್ತದೆ.

ಈ ದೋಸೆ ಎಷ್ಟು ರುಚಿಯಾಗಿರುತ್ತದೆ ಎಂದರೆ ಬಾಯಲ್ಲಿಟ್ಟ ತಕ್ಷಣವೇ ಇದು ಕರಗಿ ಹೋಗುತ್ತದೆ. ಇದನ್ನು ನೀವು ನಿಮಗೆ ಇಷ್ಟವಾಗುವಂತಹ ಯಾವುದೇ ರೀತಿಯ ಚಟ್ನಿಯಲ್ಲೂ ಸಹ ತಿನ್ನಬಹುದು ಇಲ್ಲದಿದ್ದರೆ ಹಾಗೆ ಸಹ ತಿನ್ನಬಹುದು. ಏಕೆಂದರೆ ಇದರಲ್ಲಿ ಬೇಕಾದಂತಹ ಮಸಾಲೆಯನ್ನು ನಾವು ಮೊದಲೇ ಹಾಕಿಕೊಂಡಿರುತ್ತೇವೆ. ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ ಖಂಡಿತ ನಿಮಗೆ ಇಷ್ಟವಾಗುತ್ತದೆ.  ರವೇ ದೋಸೆ ಮಾಡುವ ವಿಡಿಯೋವನ್ನು ನೀವು ಇಲ್ಲಿ ಕ್ಲಿಕ್ ಮಾಡಿ ನೋಡಬಹುದುSimple rava dosa recipe will be ready in just 10 minutes.

Simple rava dosa recipe will be ready in just 10 minutes
Respected images are credited to the original sources.

 

ಇದನ್ನು ಓದಿ:-

ಟೊಮೊಟೊ ಸಕ್ಕತ್ ದುಬಾರಿ! ಅದರ ಬದಲು 5  ಪದಾರ್ಥಗಳನ್ನು ಬಳಸಿ ಟೊಮೇಟೊ ಇಲ್ಲದೆ ಸಕ್ಕತ್ ಅಡುಗೆ ಮಾಡಬಹುದು.

Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!

ನಿಂಬೆಹಣ್ಣು ಹಾಳಾಗಿದೆ ಕೊಳೆತಿದೆ ಎಂದು ಎಸೆಯಬೇಡಿ, ಕೊಳೆತ ನಿಂಬೆಹಣ್ಣಿನಿಂದ ನಿಮ್ಮ ಮನೆಯ ದೊಡ್ಡ ಕೆಲಸಗಳು ಬಹಳ ಕಡಿಮೆ ನಿಮಿಷದಲ್ಲಿ ಆಗುತ್ತದೆ.

ಪ್ರೆಷರ್ ಕುಕ್ಕರ್ ಹಾಳಾಗದಂತೆ ಉಪಯೋಗಿಸುವ ಸರಿಯಾದ ವಿಧಾನ.

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

Leave a comment