Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬಾಳೆಎಲೆಯ ಹೊಸ ದೋಸೆ ರೆಸಿಪಿ ಬೆಳಗಿನ ತಿಂಡಿಗೆ ಅರ್ಧ ಗಂಟೆಯಲ್ಲಿ ರೆಡಿಯಾಗುತ್ತೆ, ತಯಾರಿಸುವ ವಿಧಾನ ಮಾತ್ರ ತುಂಬಾನೇ ಸಿಂಪಲ್.

Banana Dosa Recipe: ಸಾಧಾರಣವಾಗಿ ನಾವು ಅಕ್ಕಿ ದೋಸೆಯನ್ನು ಮತ್ತು ಉದ್ದಿನ ದೋಸೆ ಹಾಗೂ ರವೆ ದೋಸೆಗಳನ್ನು ಮಾಡುತ್ತಿರುತ್ತೇವೆ ಅಲ್ಲವೇ,  ಹಾಗಾದರೆ ಅಕ್ಕಿಯ ಮತ್ತು ಉದ್ದಿನ ಕಾಂಬಿನೇಷನ್ನಲ್ಲಿ ಮಾಡುವಂತಹ ಈ ಒಂದು ಹೊಸ ರೀತಿಯ ದೋಸೆಯನ್ನು ಒಮ್ಮೆ ಮಾಡಿ ನೋಡಿ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಅಷ್ಟೇ ರುಚಿಕರವಾಗಿ ಕೂಡ ಇರುತ್ತದೆ. ಹಾಗಾದರೆ ಬಾಳೆ ಎಲೆ ದೋಸೆ ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಒಂದು ಕಪ್ ಉದ್ದು ಮತ್ತು ಎರಡು ಕಪ್ ದೋಸೆ ಅಕ್ಕಿಯನ್ನು ಹಾಗೂ ಅದರೊಳಗೆ ಎರಡು ಚಮಚದಷ್ಟು ಮೆಂತ್ಯೆಯನ್ನು ಹಾಕಿ ಚೆನ್ನಾಗಿ ತೊಳೆದು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಅದನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು ಅದರೊಳಗೆ ರುಬ್ಬುವಾಗ ಹರಳು ಅಥವಾ ತೆಳು ಅವಲಕ್ಕಿ ಅರ್ಧ ಕಪ್ ಮಿಕ್ಸ್ ಮಾಡಿದರೆ ಹಿಟ್ಟು ಮತ್ತಷ್ಟು ಮೃದುವಾಗಿ ಬರುತ್ತದೆ.

ರುಬ್ಬಿಕೊಂಡಂತಹ ಹಿಟ್ಟು ಹುಳಿ ಬರಲು ಸುಮಾರು 8 ರಿಂದ 10 ಗಂಟೆಗಳ ಕಾಲ ಬಿಡಬೇಕು. ಅದಕ್ಕೂ ಮುಂಚೆ ರುಬ್ಬಿಕೊಂಡಂತ ಹಿಟ್ಟಿನೊಳಗೆ ಸ್ವಲ್ಪ ಉಪ್ಪನ್ನು ಹಾಕಿ ಕಲಸಿಡಬೇಕು. ಏಕೆಂದರೆ ಇದು ಮೊದಲೇ ಚಳಿಗಾಲ ಆಗಿರುವುದರಿಂದ ಅಷ್ಟು ಬೇಗ ಹುಳಿ ಬರುವುದಿಲ್ಲ ಆದ್ದರಿಂದ ಉಪ್ಪನ್ನು ಹಾಕಿ ಕೈಯಿಂದ ಕಳಿಸಿ ಇರುವುದರಿಂದ ಸ್ವಲ್ಪ ಬೇಗನೆ ಹುಳಿ ಬರಲು ಸಹಾಯ ಮಾಡುತ್ತದೆ.

ಮರುದಿನ ಬೆಳಗ್ಗೆ ಹುಳಿ ಬಂದ ಹಿಟ್ಟಿಗೆ ಸ್ವಲ್ಪ ಒಗ್ಗರಣೆ ಹಾಕಿ ಅದರೊಳಗೆ ಒಂದು ಹಿಡಿಯಷ್ಟು ಕೊತ್ತಂಬರಿಯನ್ನು ಹಾಕಿ ಹಿಟ್ಟನ್ನು ದೋಸೆ ಹಿಟ್ಟಿನ ರೀತಿ ಅದಕ್ಕೆ ಕಲಸಿಕೊಳ್ಳಬೇಕು. ನಂತರ ಒಂದು ಸ್ಟೀಮ್ ಪಾತ್ರೆಯಲ್ಲಿ ನೀರು ಕುದಿಯುವವರೆಗೂ ಇಟ್ಟು ಅದರ ಮೇಲೆ ಒಂದು ಪ್ಲೇಟನ್ನು ಇಟ್ಟು ಅದರ ಮೇಲೆ ಒಂದು ಬಾಳೆ ಎಲೆಯನ್ನು ಹಾಕಿ ನಾವು ದೋಸೆಯನ್ನು ಯಾವ ರೀತಿ ಮಾಡಿಕೊಳ್ಳುತ್ತೇವೆ.
ಅದೇ ರೀತಿ ಮಾಡಿಕೊಳ್ಳಬೇಕು.

ಇದನ್ನು ಮೂರು ನಿಮಿಷಗಳ ಕಾಲ ಬಿಟ್ಟರೆ ಸಾಕು ನಾವು ಯಾವ ರೀತಿ ದೋಸೆ ತಿನ್ನುವ ಹಾಗೆ ಬೇಯುತ್ತದೆ. ಇದು ಕೂಡ ಹಾಗೆ ಬೇಯುತ್ತದೆ. ಆದರೆ ನಾರ್ಮಲ್ ದೋಸೆಯಾದರೆ ಸ್ವಲ್ಪ ಗರಿಗರಿಯಾಗಿರುತ್ತದೆ. ಆದರೆ ಇದು ತುಂಬಾ ಮೃದು ತುಂಬಾನೇ ಚೆನ್ನಾಗಿ ಇರುತ್ತದೆ. ಇದಕ್ಕೆ ಕೊತ್ತಂಬರಿ ಚಟ್ನಿಯನ್ನು ಮಾಡಿಕೊಂಡು ತಿಂದರೆ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ಇದನ್ನು ಚಿಕ್ಕ ಮಕ್ಕಳಿಗಂತೂ ಕೊಟ್ಟರೆ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಅಷ್ಟೇ ಅಲ್ಲದೆ ಬಾಳೆ ಎಲೆಯಲ್ಲಿ ಮಾಡಿರುವುದರಿಂದ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದಾಗಿದೆ. ಈ ದೋಸೆ ರೆಸಿಪಿಯನ್ನು ವಿಡಿಯೋ ಮುಖಾಂತರ ನೋಡಲು ಬಯಸಿದರೆ ವಿಡಿಯೋ ಇಲ್ಲಿ ಪ್ರಕಟಿಸಲಾಗಿದೆ ನೋಡಿ ನೀಲಿ ಅಕ್ಷರದಲ್ಲಿ ಬಾಳೆ ಎಲೆ ದೋಸೆ ಮಾಡುವ ವಿಡಿಯೋ ಇಲ್ಲಿದೆ

Leave a comment