Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಚಿಂತೆ ಮಾಡಿ ತುಂಬಾ ಯೋಚನೆಯಲ್ಲಿ ಇದ್ದರೆ ಒಮ್ಮೆ ಶ್ರೀ ಕೃಷ್ಣನ ಈ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿ ಸಾಕು.

Lord Krishna Motivation words: ನೀವು ತುಂಬಾ ಯೋಚನೆ ಮಾಡಿ ಅಥವಾ ಯಾರದೋ ಕೈವಾಡಕ್ಕೆ ಮೋಸ ಹೋಗಿ ಯೋಚನೆ ಮಾಡುತ್ತಿದ್ದೀರಾ, ಯೋಚನೆಯಲ್ಲಿ ಇದ್ದೀರಾ ಹಾಗಾದರೆ ನೀವು ಈ ಎಲ್ಲ ಯೋಚನೆಗಳಿಂದ ಹೊರಬರಲು ಶ್ರೀ ಕೃಷ್ಣನ ಕೆಲವೊಂದಿಷ್ಟು ಸ್ಪೂರ್ತಿದಾಯಕ ಮಾತುಗಳನ್ನು ನೀವು ಕೇಳಿದರೆ ತಕ್ಷಣವೇ ನಿಮ್ಮ ಮನಸ್ಸು ಬದಲಾಗಿ ನೀವು ಮರಳಿ ನಿಮ್ಮನ್ನು ಸೇರಲು ಸಾಧ್ಯವಾಗುತ್ತೀರಾ.

Hindustan Prime Photo

ಶ್ರೀ ಕೃಷ್ಣ ಪರಮಾತ್ಮನು ಹೇಳುವ ಪ್ರತಿ ಒಂದು ಮಾತು ಕೂಡ ನಿಮ್ಮಲ್ಲಿರುವ ಕೋಪ ಚಿಂತೆ ಆಲೋಚನೆಗಳು ಎಲ್ಲವನ್ನು ದೂರ ಮಾಡಿ ನಿಮ್ಮಲ್ಲಿ ಹೊಸ ಹರುಷ ತರುತ್ತದೆ. ಜೀವನದಲ್ಲಿ ನಾನು ಸೋತೆ ಎನ್ನುವವರಿಗೆ ಮತ್ತೆ ಗೆಲ್ಲಬೇಕು ಎನ್ನುವ ಹುಮ್ಮಸ್ ಬರುತ್ತದೆ. ಯಾವುದರ ಬಗ್ಗೆಯು  ಜಾಸ್ತಿ ಸಮಯ ನೀನು ಯೋಚಿಸಬೇಡ ಏಕೆಂದರೆ ಈ ಜಗತ್ತಿನಲ್ಲಿ ಯಾವುದು ಕೂಡ ಶಾಶ್ವತವಲ್ಲ.

ಚಿನ್ನ ಬೆಳ್ಳಿಯ ವಜ್ರ ವೈಡೂರ್ಯಗಳು  ಶ್ರೇಷ್ಠ ಸಂಪತ್ತು ಅಲ್ಲ ಮಾನಸಿಕ ನೆಮ್ಮದಿಯೇ ಜಗತ್ತಿನ ಶ್ರೇಷ್ಠ ಸಂಪತ್ತು. ಭಗವಂತನು ಎಲ್ಲಿದ್ದಾನೆ ಎಂದು ನೀನು ಯೋಚನೆ ಮಾಡಬೇಡ ಏಕೆಂದರೆ ಭಗವಂತನು ಪ್ರತಿಯೊಂದು ಜೀವಿಯಲ್ಲಿಯೂ ಇದ್ದಾನೆ. ನೀವು ಕೇವಲ ನಿಮ್ಮ ಕೆಲಸದ ಬಗ್ಗೆ ಗಮನವನ್ನು ಕೊಡಿ ಫಲಿತಾಂಶದ ಬಗ್ಗೆ ಚಿಂತೆ ಬಿಡಿ. ನೀವು ಮಾಡಿದ ಕೆಲಸ ಸರಿಯಾದ ರೀತಿಯಲ್ಲಿದ್ದರೆ ಅದು ನಿಮಗೆ ಸಿಕ್ಕೆ ಸಿಗುತ್ತದೆ.

ಆತ್ಮದ ಅಂತಿಮ ಗುರಿಯ ಪರಮಾತ್ಮನೊಂದಿಗೆ ವಿಲೀನವಾಗುವುದು. ಕೊನೆಯ ಬಗ್ಗೆ ಚಿಂತಿಸಬೇಡಿ ಏಕೆಂದರೆ ಆತ್ಮಕ್ಕೆ ಕೊನೆಯಿಲ್ಲ ಅದು ಸದಾ ಅಮರವಾಗಿರುತ್ತದೆ. ಮನುಷ್ಯನಿಗೆ ಮನುಷ್ಯ ಶತ್ರು ಅಲ್ಲ ಅವನ ನಿಜವಾದ ಮನಸ್ಸು ಶತ್ರು. ಮರ್ಯಾದೆ ಎಂಬುದು ನಮ್ಮ ಆಸ್ತಿ ಅಂತಸ್ತಿನಿಂದ ಬರುವುದಿಲ್ಲ ನಮ್ಮ ವ್ಯಕ್ತಿತ್ವ ಗುಣಗಳಿಂದ ಬರುವುದು. ನೀವು ಮಾಡುವ ಪ್ರತಿಯೊಂದು ಕರ್ಮ ಕೆಲಸಗಳು ನಿಮ್ಮ ಹಣೆಬರಹವನ್ನು ಬದಲಾಯಿಸುತ್ತದೆ.

ಧರ್ಮ ಮತ್ತು ಸತ್ಯದ ಕೆಲಸಗಳು ಮಾತ್ರ ನಿಮ್ಮ ಕರ್ತವ್ಯವಾಗಿರಲಿ. ಚಿಂತೆ ಇಲ್ಲದ ಮನುಷ್ಯನಿಗೆ ಮಣ್ಣಿನ ರಾಶಿ ಮತ್ತು ಚಿನ್ನದ ರಾಶಿ ಎರಡು ಕೂಡ ಒಂದೇ ಆಗಿರುತ್ತದೆ. ಧರ್ಮವು ಕರ್ಮದಿಂದ ಮಾತ್ರ ನಡೆಯುತ್ತದೆ. ಧರ್ಮ ಇಲ್ಲದೆ ಆಧಾರ ಕೂಡ ಇಲ್ಲ. ವ್ಯಕ್ತಿಯ ಗೌರವ ಆಸ್ತಿ ಅಂತಸ್ತು ಹಣ ಇವೆಲ್ಲವೂ ಆತನ ಸೊಕ್ಕಿನಿಂದ ಕೊನೆಗೊಳ್ಳುತ್ತದೆ.

ಜೀವನದಲ್ಲಿ ನೀವು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳದಿದ್ದರೆ ನೀವು ಹೇಗೆ ಇದ್ದೀರಾ ಹಾಗೆಯೇ ನೀವು ಜೀವಿಸಿ. ಆಗ ನೀವು ಎಲ್ಲರಿಗಿಂತ ಉತ್ತಮರಾಗಿರುತ್ತೀರಿ. ಮನುಷ್ಯನ ಜೀವನವು ಅವನ ಕಾಯಗಳ ಮೇಲೆ ಮಾತ್ರ ಚಲಿಸುತ್ತದೆ ಅವನ ಕಾರ್ಯಗಳು ಹೇಗೆ ಇರುತ್ತವೆಯೋ ಹಾಗೆ ಅವನ ಜೀವನ ಕೂಡ ನಡೆಯುತ್ತದೆ. ನೀವು ಸಂತೋಷದಲ್ಲಿದ್ದಾಗ ಯಾರಿಗೂ ಕೂಡ ಭರವಸೆಗಳನ್ನು ನೀಡಬೇಡಿ ಹಾಗೆ ಕೋಪದಲ್ಲಿ ಇದ್ದಾಗ ಉತ್ತರವನ್ನು ಕೊಡಬೇಡಿ.

ದುಃಖದಲ್ಲಿದ್ದಾಗ ಎಂದಿಗೂ ಕೂಡ ನಿರ್ಧಾರ ತೆಗೆದುಕೊಳ್ಳಬೇಡಿ. ಜೀವನ ಎಂಬುದಕ್ಕೆ ಅಂತ್ಯವೇ ಇಲ್ಲ ಏಕೆಂದರೆ ಪ್ರತಿ ಅಂತ್ಯದ ಹಿಂದೆಯೇ ಹೊಸದೊಂದು ಪ್ರಾರಂಭ ಇದ್ದೇ ಇರುತ್ತದೆ. ನೀವು ಏನು ಮಾಡಬೇಕು ಅಂದುಕೊಂಡಿರುತ್ತೀರಾ ಅದನ್ನೇ ಮಾಡಿ ಆದರೆ ಅದನ್ನು ಅಹಂಕಾರ ಅಸೂಯೆ ಕೆಟ್ಟ ತಾನದಿಂದ  ಮಾಡಬೇಡಿ ಬದಲಾಗಿ ಪ್ರೀತಿಯಿಂದ ಭಕ್ತಿಯಿಂದ ಮಾಡಿ. ಮನಸ್ಸನ್ನು ಗೆದ್ದವನಿಗೆ ಮನಸ್ಸು ಅತ್ಯುತ್ತಮ ಮಿತ್ರ ಹಾಗೆ ಮಾಡಲು ಹೋದವನಿಗೆ ಮನಸ್ಸು ದೊಡ್ಡ ಶತ್ರು.

ನೀವು ಯಾಕೆ ಅನಗತ್ಯವಾಗಿ ಚಿಂತನೆ ಮಾಡುತ್ತೀರಿ, ನೀವು ಯಾಕೆ ಭಯಪಡುತ್ತೀರಿ, ನಿಮ್ಮಳೊಗೆ ನೀವು ಯಾಕೆ ಅನುಭವಿಸುತ್ತೀರಿ ನಿಮ್ಮೊಳಗೆ ಶ್ರೀ ಕೃಷ್ಣ ಪರಮಾತ್ಮ ಇರುವಾಗ. ನೀವು ಸತ್ಯದ ಧರ್ಮದ ಹಾದಿಯಲ್ಲಿ ಸಾಗಿದರೆ ನೀವು ಪಾತಾಳಕ್ಕೆ ಬಿದ್ದರೂ ಕೂಡ ನಿಮ್ಮನ್ನು ಕಾಪಾಡಲು ಶ್ರೀ ಕೃಷ್ಣ ಪರಮಾತ್ಮ ಬಂದೇ ಬರುತ್ತಾರೆ. ಶ್ರೀ ಕೃಷ್ಣ ಪರಮಾತ್ಮರು ಹೇಳಿರುವ ಈ ಮಾತುಗಳನ್ನು ನೀವು ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮಲ್ಲಿ ನೀವು ಬದಲಾವಣೆ ತಂದುಕೊಳ್ಳಿ, If you are worried and thinking too much, just listen to these inspiring words of Lord Krishna.

If you are worried and thinking too much, just listen to these inspiring words of Lord Krishna.
Image Source – Vijaya Karnataka.

 

ಸಾವಿರ ವರ್ಷಗಳ ಹಿಂದೆ ಈ ಗೋಪುರ ಇಷ್ಟು ಮೇಲೆ ಹೋಗಿದ್ದಾದರೂ ಹೇಗೆ ಗೊತ್ತೇ ?? ಯಾವುದು ಈ ದೇವಸ್ಥಾನ ಎಲ್ಲಿದೆ ಗೊತ್ತೇ ?? ಇದರ ವಿಶೇಷತೆ ಮಾತ್ರ ಸಿಕ್ಕಾಪಟ್ಟೆ ಗ್ರೇಟ್ ಕಣ್ರೀ !!

ಸೂತಕ ಎಂದರೇನು ?? ಸೂತಕದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು, ಇದರ ಬಗ್ಗೆ ನಮ್ಮ ಧಾರ್ಮಿಕ ಪುರಾಣ ಏನು ಹೇಳುತ್ತದೆ ಗೊತ್ತೇ ??

ಅಧಿಕ ಮಾಸದಲ್ಲಿ ಮಗು ಜನಿಸಿದರೆ ಏನಾಗುತ್ತದೆ,  ಈ ಮಾಸದ ಮಗುವಿನ ಸ್ವಭಾವ ಮತ್ತು ಭವಿಷ್ಯದಲ್ಲಿ ಮಗು ಹೇಗಿರುತ್ತದೆ.

ಒಂದು ವಾರವು ತಪ್ಪದೇ ಪ್ರತಿ ಸೋಮವಾರ ಶಿವನಿಗೆ ಈ ರೀತಿ ಮಾಡುವುದರಿಂದ ಶಿವನ ಆಶೀರ್ವಾದ ನಿಮಗೆ ಸದಾ ಇರುತ್ತದೆ!!

ಸಕಲ ದೇವತೆಗಳ ಆಶೀರ್ವಾದಕ್ಕಾಗಿ ಮುಂಜಾನೆ ಎದ್ದ ತಕ್ಷಣ ಈ ಮಂತ್ರಗಳನ್ನು ಜಪಿಸಿ..!! ನಿಮ್ಮ ಏಳೇಳು ಜನ್ಮದ ಪಾಪಗಳು ಕಳೆದುಹೋಗುತ್ತದೆ !!

Leave a comment