ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ?? ಇದರ ಹಿಂದೆ ಇರುವ ಕಾರಣ ಏನು.
Banana and Coconut: ನಮ್ಮ ಹಿಂದೂ ಸಂಪ್ರದಾಯದಂತೆ ಯಾರಾದರೂ ಸರಿ ದೇವಸ್ಥಾನಕ್ಕೆ ಹೋಗಬೇಕಾದರೆ ಹೂವು ಬಾಳೆಹಣ್ಣು ತೆಂಗಿನಕಾಯಿ ಕಡ್ಡಿ ಕರ್ಪೂರಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಹಣ್ಣುಗಳ ವಿಷಯಕ್ಕೆ ಬಂದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರ ತೆಗೆದುಕೊಂಡು ಹೋಗ್ತಾರೆ. ಅಷ್ಟೇ ಅಲ್ಲದೆ ನಾವು ಯಾವತ್ತಾದರೂ ಯೋಚಿಸಿದ್ದೇವ ಯಾಕೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನೇ ತೆಗೆದುಕೊಂಡು ಹೋಗಬೇಕು ಬದಲಾಗಿ ಮಾವಿನಕಾಯಿ ಅಥವಾ ಸೌತೆಕಾಯಿಯನ್ನು ಯಾಕೆ ತೆಗೆದುಕೊಂಡು ಹೋಗಬಾರದು ಎಂದು ?ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ನಾವು ಯಾವುದೇ ಹಣ್ಣನ್ನು ಉದಾಹರಣೆಗೆ ತೆಗೆದುಕೊಂಡರು ನಾವು ತಿಂದು ಬಿಸಾಕಿದಂತಹ ಅಥವಾ ಬಳಸಿ ಬಿಸಾಕಿದಂತಹ ಹಣ್ಣುಗಳಿಂದ ಅದು ಗಿಡವಾಗಿ ಅಥವಾ ಮರವಾಗಿ ಬೆಳೆಯುತ್ತದೆ. ಉದಾಹರಣೆಗೆ ಮಾವಿನ ಕಾಯಿ ಆಗಿರಬಹುದು. ಮಾವಿನ ಕಾಯಿಯನ್ನು ತಿಂದು ಎಸೆದ ಅದರ ವಾಟೆಯಿಂದ ಮರ ಬೆಳೆಯುತ್ತದೆ.
ಆದರೆ ಈ ರೀತಿಯ ಒಂದು ಆಪ್ಷನ್ ತೆಂಗಿನಕಾಯಿ ಹಾಗೂ ಬಾಳೆಹಣ್ಣಿಗೆ ಇಲ್ಲ. ಒಂದು ವೇಳೆ ಈ ರೀತಿ ಮಾವಿನ ಕಾಯಿಯಾಗಲಿ ಅಥವಾ ಬೇರೆ ಹಣ್ಣುಗಳಾಗಲಿ ದೇವರಿಗೆ ಅರ್ಪಿಸಿದರೆ ಅದು ಎಂಜಲಿನ ಪ್ರಸಾದವನ್ನು ನೀಡಿದಂತೆ ಆಗುತ್ತದೆ. ಅದೊಂದು ಕಾರಣಕ್ಕಾಗಿ ತೆಂಗಿನ ಕಾಯಿ ಮತ್ತು ಬಾಳೆಹಣ್ಣನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಾಳೆ ಹಣ್ಣುಗಳಲ್ಲಿ ಬೀಜ ಬರುತ್ತಿದ್ದರು ಸಹ ಮತ್ತು ಮುಂದಿನ ಗಿಡಕ್ಕಗಿ ಕಂದನ್ನೇ ನೀಡಬೇಕು. ಅಷ್ಟೇ ಅಲ್ಲದೆ ತೆಂಗಿನಕಾಯಿಯು ಅಷ್ಟೇ ಅದನ್ನು ಮೂರು ತಿಂಗಳ ಕಾಲ ನೆನೆಸಿ ಕುಂಭದಿಂದ ಸಂತಾನೋತ್ಪತ್ತಿ ಮಾಡಲು ಸಹಾಯ ಮಾಡುತ್ತದೆ.
ಮತ್ತೊಂದು ಮುಖ್ಯ ಕಾರಣ ಏನೆಂದರೆ ತೆಂಗಿನ ಕಾಯಿಯ ಸಿಪ್ಪೆಯನ್ನು ಅಹಂಕಾರಕ್ಕೇ ಹೊಲಿಸಲಾಗುತ್ತದೆ. ಅದರ ಒಳಗೆ ಇರುವಂತಹ ಕಾಯಿ ಕೋಮಲತ್ವಕ್ಕೆ ಪ್ರತೀಕವಾಗಿದೆ. ಅಷ್ಟೇ ಅಲ್ಲದೆ ಅದರಲ್ಲಿ ಇರುವಂತಹ ನೀರು ಭಕ್ತಿ ಭಾವಗಳಿಗೆ ಸಮಾನವಾಗಿರುತ್ತದೆ. ಆದ್ದರಿಂದ ನಾವು ನಮ್ಮ ಅಹಂಕಾರವನ್ನು ಬಿಟ್ಟು ಕೋಮಲತೆಯಿಂದ ಬದುಕಬೇಕು ಎಂಬ ಅರ್ಥವನ್ನು ಸಹ ಇದು ಸೂಚಿಸುತ್ತದೆ.
ತೆಂಗಿನಕಾಯಿ ಹೊಡೆಯುವುದರಿಂದ ಅದರ ಸಿಪ್ಪೆ ಕಾಯಿ ಮತ್ತು ಒಳಗೆ ಇರುವಂತಹ ನೀರನ್ನು ಭೂತಕಾಲ ವರ್ತಮಾನ ಕಾಲ ಭವಿಷ್ಯತ್ಕಾಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಆದ್ದರಿಂದ ನಾವು ನಮ್ಮ ಅಹಂಕಾರವನ್ನೆಲ್ಲ ಬಿಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂಬ ಅರ್ಥವನ್ನು ಇದು ಸೂಚಿಸುತ್ತದೆ.