Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ವರಮಹಾಲಕ್ಷ್ಮಿ ಹಬ್ಬಕ್ಕೆ ಕಳಶ ಇಟ್ಟು ಪೂಜೆ ಮಾಡುವಾಗ ಖಂಡಿತ ಇಂತಹ ತಪ್ಪುಗಳನ್ನು ಮಾಡಬೇಡಿ.

Varamahalakshmi festival Special: ಇನ್ನೇನು ಹತ್ತಿರದಲ್ಲಿ ವರಮಹಾಲಕ್ಷ್ಮಿ ಹಬ್ಬದ ವ್ರತ ಬರುತ್ತಿದೆ. ಆದ್ದರಿಂದ ಎಲ್ಲರ ಮನೆಯಲ್ಲೂ ಸಹ ಕ್ಲೀನಿಂಗ್ ಈಗಾಗಲೇ ಶುರುವಾಗಿರುತ್ತದೆ. ಅದರಲ್ಲಿ ಸಹ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲ ಹೆಣ್ಣು ಮಕ್ಕಳಿಗೂ ಸಹ ಒಂದು ರೀತಿಯ ಖುಷಿಯೋ ಖುಷಿ. ಏಕೆಂದರೆ ಪ್ರತಿಯೊಂದು ಹಬ್ಬಗಳಲ್ಲಿ  ಇರುವ ಒಂದು ದೇವರಿಗೆ ಪೂಜೆ ಮಾಡಿದರೆ, ವರಮಹಾಲಕ್ಷ್ಮಿ ಹಬ್ಬದಲ್ಲಿ ನಾವೇ ಒಂದು ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಮನೆಯೇ ಒಂದು ದೇವಾಲಯವಾಗಿ ಪೂಜಿಸಲಾಗುತ್ತದೆ.

ಹೀಗೆ ಪೂಜಿಸಿದ ದೇವರನ್ನು ಹೇಗೆಂದರೆ ಹಾಗೆ ಸ್ಥಾಪಿಸುವುದು ಸಾಧ್ಯವಿಲ್ಲ. ಅದಕ್ಕೆಂದೆ ಕೆಲವೊಂದಷ್ಟು ನಿಯಮ ನಿಷ್ಠೆಗಳಿರುತ್ತವೆ. ಅವುಗಳನ್ನು ಪಾಲಿಸಿ ನೀವು ಮಹಾಲಕ್ಷ್ಮಿ ಹಬ್ಬವನ್ನು ಮಾಡಿದರೆ ಅಷ್ಟೈಶ್ವರ್ಯಗಳು ನಿಮ್ಮ ಮನೆಗೆ  ಬರುತ್ತವೆ. ಹಾಗಾದರೆ ಕಳಸವನ್ನು ಹೇಗೆ ಪೂಜಿಸಬೇಕು ಮತ್ತು ವರಮಹಾಲಕ್ಷ್ಮಿಯ ರೂಪವನ್ನು ಹೇಗೆ ಪ್ರತಿಷ್ಠಾಪಿಸಬೇಕು ಎಂಬ ಕೆಲವು ವಿಷಯಗಳನ್ನು ಇಲ್ಲಿ ತಿಳಿಸುತ್ತೇವೆ ನೋಡಿ.

ಮೊದಲಿಗೆ ಪೂಜಿಸುವಂತಹ ಕಳಸದ ಚೊಂಬು ಸ್ಟೀಲ್ ಆಗಿರಬಾರದು. ಬದಲಿಗೆ ಬೆಳ್ಳಿ ಅಥವಾ ಇತ್ತಾಳೆ ತಾಮ್ರದ ಚೊಂಬುಗಳಲ್ಲಿ ಕಳಸವನ್ನು ಪೂಜಿಸಬೇಕು. ಹಾಗೆಯೆ ಪೂಜಿಸುವಾಗ ಮೊದಲಿಗೆ ನೀವು ಯಾವುದರ ಮೇಲೆ ಪೂಜಿಸಬೇಕೆಂದಿದ್ದೀರಿ. ಅದರ ಮೇಲೆ ಅಷ್ಟದಳ ರಂಗೋಲಿಯನ್ನು ಹಾಕಿ ಅದರ ಮೇಲೆ ಬೆಳ್ಳಿ ತಟ್ಟೆ ಅಥವಾ ತಾಮ್ರದ ತಟ್ಟೆಯಲ್ಲಿ ಕಳಸದ ಚೊಂಬನ್ನು ಇಡಬೇಕು. ಕೆಲವರು ಬಾಳೆಎಲೆಯ ಇಲ್ಲಿ ಸಹ ಚೊಂಬನ್ನು ಇಡುತ್ತಾರೆ. ಅದು ಕೂಡ ಶ್ರೇಷ್ಠವೇ ಆಗಿದೆ. ಆದರೆ ಕಳಸದ ಚೊಂಬು ಇಡುವ ಮುಂಚೆ ಬಾಳೆ ಎಲೆಯ ಮೇಲೆ ಅಥವಾ ಬೆಳ್ಳಿಯ ತಟ್ಟೆಯ ಮೇಲೆ ಮೂರು ಹಿಡಿ ಇಲ್ಲದಿದ್ದರೆ ಐದು ಹಿಡಿಯಷ್ಟು ಅಕ್ಕಿಯನ್ನು ಹಾಕಬೇಕು. ನಂತರ ಆ ಸ್ಥಳದಲ್ಲಿ ಓಂ ಶ್ರೀ ಅಥವಾ ಸ್ವಸ್ತಿಕ್ ಬರೆಯಬೇಕು.

ನಂತರ ಶುಭ್ರವಾಗಿ ತೊಳೆದಂತಹ ಕಳಸದ ಚೊಂಬನ್ನು ಇಟ್ಟು ಅದರ ತುಂಬಾ ನೀರನ್ನು ಹಾಕಿ ಅದರೊಳಗೆ ಅರಿಶಿನ ಕುಂಕುಮ ಅಕ್ಷತೆ ಹೂವು ಇತ್ತಾಳೆಯ ನಾಣ್ಯಾವಿದ್ದಾರೆ ತಾಮ್ರದ ನಾಣ್ಯ ಇದ್ದರೆ ತಾಮ್ರದ ನಾಣ್ಯ ಅಥವಾ ನಾರ್ಮಲ್ ನಾಣ್ಯವನ್ನು ಹಾಕಬೇಕು. ಏಕೆಂದರೆ ಇದು ಪ್ರಾಣದ ಪ್ರತೀಕವಾಗಿರುತ್ತದೆ. ನಂತರ ಅರಿಶಿನದ ಕೊಂಬನ್ನು ಕಡ್ಡಾಯವಾಗಿ ಕಟ್ಟಲೇಬೇಕು.

ನಂತರ ಕಳಸದ ಚೊಂಬನ್ನು ಇಟ್ಟ ಮೇಲೆ ಅದರ ಮೇಲೆ ಅದಕ್ಕೆ ಸರಿಹೊಂದುವಂತೆ ತೆಂಗಿನಕಾಯಿಯನ್ನು ಇಡಬೇಕು. ತೆಂಗಿನಕಾಯಿ ಮತ್ತು ಕಳಸದ ನೀರಿಗೂ ಟಚ್ ಆಗುವಂತೆ ಇಡಬೇಕು. ಅಷ್ಟೇ ಅಲ್ಲದೆ ನೀರನ್ನು ಚೆಲ್ಲದಂತೆ ನೋಡಿಕೊಳ್ಳಬೇಕು. ನಂತರ 6 ಗೋಮತಿ ಚಕ್ರ ಅಥವಾ ಆರು ಕಮಲದ ಬೀಜವನ್ನು ಇಡಬೇಕು ಇನ್ನು ಕೆಲವರು ಡ್ರೈಫ್ರೂಟ್ಸ್ ಗಳನ್ನು ಸಹ ಇಡುತ್ತಾರೆ.

ನಂತರ ಕಳಸದ ಮುಂದೆ ಒಂದು ತಟ್ಟೆಯಲ್ಲಿ ಹೊಸದಾದಂತಹ ಬ್ಲೌಸ್ ಪೀಸ್ ಅಥವಾ ಸೀರೆ ಮತ್ತು ಹೂವು ಹಾಗೂ ನಿಮ್ಮ ಬಳಿ ಇರುವಂತಹ ಒಡವೆಗಳನ್ನು ಹಾಕಿ ದೇವರನ್ನು ಅಲಂಕರಿಸಬೇಕು. ಅಷ್ಟೇ ಅಲ್ಲದೆ ಕಳಶವನ್ನು ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ದಿನಗಳನ್ನು ಹಾಗೂ ಇನ್ನೂ ಕೆಲವರು ಕಳಸ ಇಡುವುದು ಅಷ್ಟೇ ಅಲ್ಲದೆ ಮುಖವಾಡಗಳನ್ನು ಸಹ ಇಡುತ್ತಾರೆ.

ನಿಮಗೆ ಅನುಕೂಲ ಇರುವ ಹಾಗೆ ಇದ್ದರೆ ಬೆಳ್ಳಿಯ ಮುಖವಾಡ ಇಲ್ಲದಿದ್ದರೆ ಮಣ್ಣಿನ ಮುಖವಾಡಗಳನ್ನು ಬಳಸಿ ಹಬ್ಬಗಳನ್ನು ಆಚರಿಸಬಹುದು. ಹೀಗೆ ಕೆಲವೊಂದಷ್ಟು ನಿಯಮಗಳನ್ನು ಪಾಲಿಸಿದರೆ ನಿಮ್ಮ ಮನೆಗೆ ವರಮಹಾಲಕ್ಷ್ಮಿ ಆಗಮಿಸುವುದು ಖಚಿತವಾಗಿದೆ. ಅಷ್ಟೇ ಅಲ್ಲದೆ ಕಳಸ ಕದಲಿಸುವಾಗಲು ಸಹ ಮೂರು ಸಲ ಬಲಕ್ಕೆ ಸಲ್ಲಿಸಿ ಮೂರು ಸಲಿ ಎಡಕ್ಕೆ ಸಲ್ಲಿಸಿ ಕಲಶವನ್ನು ತೆಗೆಯಬೇಕು.

ತೆಗೆದ ನಂತರ ಅದರಲ್ಲಿ ಇರುವಂತಹ ನೀರನ್ನು ತುಳಸಿ ಗಿಡ ಅಥವಾ ತೆಂಗಿನ ಮರಕ್ಕೆ ಹಾಕಬೇಕು. ತೆಂಗಿನಕಾಯಿಯನ್ನು ಏನಾದರೂ ಒಂದು ಸಿಹಿಯೂಟದಲ್ಲಿ ಬಳಸಿ ಅದನ್ನು ಮನೆಯ ಅವರೆಲ್ಲರೂ ಸಹ ಪ್ರಸಾದವಾಗಿ ಸ್ವೀಕರಿಸಬಹುದು. ಕಳಸ ಪೂಜಿಸುವುದು ಎನ್ನುವುದು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಂತೆ ಆಚರಿಸಲಾಗುತ್ತದೆ. ನಿಮ್ಮ ಪೂರ್ವಜರು ಯಾವ ರೀತಿ ಆಚರಿಸುತ್ತಾರೋ ಅದೇ ರೀತಿ ನೀವು ಸಹ ಆಚರಿಸಿದರೇ ಉತ್ತಮವಾಗಿರುತ್ತದೆ.

Do not make such mistakes while performing puja for Varamahalakshmi festival.
Image credited to the original sources.
Leave a comment