Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೆಣ್ಣೆ ಬೇಡ, ಎಣ್ಣೆ ತುಪ್ಪ ಏನು ಬೇಡ ಕೇವಲ ಅಕ್ಕಿ ಹಿಟ್ಟಿನಲ್ಲಿ ಗರಿಗರಿಯಾದ ಚಕ್ಲಿ ಮಾಡುವ ಸುಲಭ ವಿಧಾನ.

Chakli Recipe: ಇನ್ನೇನು ಚಳಿಗಾಲ ಅತ್ತಿರ ಬರ್ತಾ ಇದೆ. ಎಲ್ಲರಿಗೂ ಸಹ ಮನೆಯಲ್ಲಿ ಮಹಿಳೆಯರಿಗೆ ಆಗಲಿ ಅಥವಾ ಮಕ್ಕಳಿಗೆ ಆಗಲಿ ಅಥವಾ ಹಿರಿಯರಿಗೆ ಆಗಲಿ ಬಿಸಿಬಿಸಿಯಾಗಿ ಮತ್ತು ಗರಿಗರಿಯಾಗಿ ಕಾರವಾಗಿ ಏನಾದರೂ ಸಹ ತಿನ್ನಬೇಕು ಅನಿಸುತ್ತಿರುತ್ತದೆ. ಅಂತಹವರಿಗೆ ಈ ಒಂದು ರೆಸಿಪಿ ತುಂಬಾನೇ ಇಷ್ಟ ಆಗುತ್ತದೆ. ಏಕೆಂದರೆ ಇದರಲ್ಲಿ ಅತಿ ಹೆಚ್ಚಿನ ಎಣ್ಣೆಯ ಬಳಕೆ ಇಲ್ಲ ಅಷ್ಟೇ ಅಲ್ಲದೆ ಆರೋಗ್ಯಕ್ಕೂ ಸಹ ಒಳ್ಳೆಯದು. ಹಾಗಾದರೆ ಬೆಣ್ಣೆ, ಎಣ್ಣೆ ಹಾಗು ತುಪ್ಪ ಇಲ್ಲದೆ ಹೇಗೆ  ತಯಾರಿಸುವುದು ಎಂಬುದನ್ನು ನೋಡೋಣ ಬನ್ನಿ.

ಚಕ್ಲಿ ಮಾಡುವ ವಿಧಾನ:-

ಮೊದಲಿಗೆ ಒಂದು ಬಟ್ಟಲಿನಲ್ಲಿ ಒಂದು ಕಪ್ ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಿ, ನಂತರ ಕಾಲು ಕಪ್ ಅಷ್ಟು ಕಡಲೆ ಬೆಳೆಯನ್ನು ಒಂದು ಮಿಕ್ಸಿ ಜಾರ್ ನಲ್ಲಿ ನುಣ್ಣಗೆ ರುಬ್ಬಿ ಪೌಡರ್ ಮಾಡಿಕೊಂಡು ಅದನ್ನು  ಅಕ್ಕಿ ಹಿಟ್ಟಿನೊಳಗೆ ಹಾಕಿಕೊಳ್ಳಬೇಕು. ನಂತರ ಅದರೊಳಗೆ ಕಾಲು ಟೀ ಸ್ಪೂನ್ ಅಜ್ವೈನ್ ಒಂದು ಟೀ ಸ್ಪೂನ್ ಬಿಳಿ ಎಳ್ಳು ಅಥವಾ ಕಪ್ಪುಎಳ್ಳು ಅರ್ಧ ಟೀ ಸ್ಪೂನ್ ಕಾರದಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು.

ಒಂದು ವೇಳೆ ನಿಮಗೆ ಇಷ್ಟ ಇದ್ದರೆ ಈ ಸಮಯದಲ್ಲಿ ಅದರೊಳಗೆ ಎರಡೇ ಸ್ಪೂನ್ ಬೆಣ್ಣೆ ಅಥವಾ ತುಪ್ಪ ಹಾಕಿಕೊಂಡು ಬೆರೆಸಿಕೊಳ್ಳಬಹುದು. ಒಂದು ವೇಳೆ ಇಷ್ಟವಿಲ್ಲದಿದ್ದರೆ ಸ್ಕಿಪ್ ಮಾಡಬಹುದು. ನಂತರ ಒಂದು ಬಟ್ಟಲಿನಲ್ಲಿ ಬಿಸಿ ನೀರನ್ನು ಸ್ವಲ್ಪ ಕಾಯುವವರೆಗೂ ಇಟ್ಟುಕೊಳ್ಳಬೇಕು. ನಂತರ ಕಲಸಿದಂತಹ ಹಿಟ್ಟಿನೊಳಗೆ  ಒಂದು ಗ್ಲಾಸ್ ಅಷ್ಟು ನೀರನ್ನು ಹಾಕಿ ಸ್ವಲ್ಪ ಕಲಿಸಿಕೊಂಡು ಹತ್ತು ನಿಮಿಷ ಹಾಗೆ ಬಿಟ್ಟು ನಂತರ ಉಳಿದಂತಹ ನೀರನ್ನು ಹಾಕಿ ಹಿಟ್ಟನ್ನು ಚಪಾತಿ ಹಿಟ್ಟಿನ ಅದಕ್ಕೆ ಬರುವವರೆಗೂ ಕಲಿಸಿಕೊಳ್ಳಬೇಕು.

ಹಿಟ್ಟನ್ನು ಚೆನ್ನಾಗಿ ನಾದಿಕೊಂಡ ನಂತರ ಅದನ್ನು ಚಕ್ಕುಲಿಯ ಮೌಲ್ಡ್ ಗೆ ಹಾಕಿ ಒಂದು ಬಟರ್ ಪೇಪರ್ ಮೇಲೆ ರೌಂಡ್ ಆಗಿ ಅಥವಾ ನಿಮಗೆ ಯಾವ ಶೇಪ್ ಬೇಕೋ ಆ ಶೇಪ್ ಅನ್ನು ಹಾಕಿಕೊಳ್ಳಬೇಕು. ನಂತರ ಬಿಸಿಯಾಗಿ ಕಾದ ಎಣ್ಣೆಯಲ್ಲಿ ಚಕ್ಕುಲಿಯನ್ನು ಹಾಕಬೇಕು. ಸುಮಾರು ಐದರಿಂದ ಆರು ನಿಮಿಷಗಳ ಕಾಲ ಇದು ತೆಗೆದುಕೊಳ್ಳುತ್ತದೆ. ಅದಾದ ನಂತರ ಬಬಲ್ಸ್ ಬರುವುದು ಕಡಿಮೆಯಾಗುತ್ತದೆ. ಅ ಸಮಯದಲ್ಲಿ ತೆಗೆಯಬೇಕು.

ಈ ರೀತಿ ಮಾಡುವುದರಿಂದ ಸರಿಯಾದ ಕನ್ಸಿಸ್ಟೆನ್ಸಿಯಲ್ಲಿ ಆಗುತ್ತದೆ. ಇನ್ನು ಹಾಗೆ ಬಿಟ್ಟರೆ ಚಕ್ಕುಲಿ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಈ ರೀತಿಯಲ್ಲಿ ಚಕ್ಕುಲಿಯನ್ನು ತಯಾರಿಸಿ ನೋಡಿ ಖಂಡಿತ ನಿಮಗೆ ಇಷ್ಟವಾಗುತ್ತದೆ. ಈ ಚಕ್ಲಿ ಮಾಡುವ ವಿಧಾನವನ್ನು ನೀವು ವಿಡಿಯೋ ನೂಕಾಣ್ತಾರ ನೋಡಲು ಬಯಸಿದರೆ ವಿಡಿಯೋ ಇಲ್ಲಿದೆ ನೋಡಿಚಕ್ಲಿ ಮಾಡುವ ವಿಧಾನದ ವಿಡಿಯೋ ಇಲ್ಲಿದೆ ನೀಲಿ ಅಕ್ಷರದಲ್ಲಿ. Easy way to make crispy chakli in rice flour no need of butter, oil or ghee.

Easy way to make crispy chakli in rice flour no need of butter, oil or ghee.
Image credited to the original sources.

 

ಇದನ್ನು ಓದಿ:-

Floor Cleaning Tips: ನೆಲ ಒರೆಸುವ ನೀರಿಗೆ ಇದನ್ನು ಬೆರೆಸಿದರೆ ಸಾಕು ನೋಡಿ ನಂತರ ಚಮತ್ಕಾರ !! ಗ್ರೇಟ್ ಅಂತೀರಾ!!

Kitchen Tips: ಮನೆಯಲ್ಲಿ ಕರಿದ ಎಣ್ಣೆ ಇದ್ದು ಕಪ್ಪಾಗಿದ್ದರೆ ಬಿಸಾಡವು ಬದಲು ಈ ರೀತಿ ಮಾಡಿ ನೋಡಿ, ಒಂದೇ ಕ್ಷಣದಲ್ಲಿ ಹೊಸ ಎಣ್ಣೆ ಅಂತೇ ಬದಲಾಗುತ್ತದೆ.

Cockroach Tips: ಮನೆಯಲ್ಲಿ ಜಿರಳೆ ಕಾಟ ಇದಿಯಾ, ಚಿಂತೆ ಬಿಡಿ ಈ ಒಂದು ಉಪಾಯ ಮಾಡಿ ಸಾಕು ಮನೆಯಲ್ಲಿ ಒಂದು ಜಿರಳೆಯೂ ಉಳಿಯುವುದಿಲ್ಲ 2 ನಿಮಿಷ ಸಾಕು.

 

Leave a comment