Bhanuprakash: ‘ಚೆನ್ನಾಗಿದೆ, ಚೆನ್ನಾಗಿದೆ’ ಎಂಬ ಒಂದೇ ಡೈಲಾಗ್ ಇಂದ ಮನಸ್ಸಲ್ಲಿ ಉಳಿದಿರೋ ಈ ಬಾಲನಟ ಯಾರು ಅಂತ ಗೊತ್ತಾಯ್ತಾ? ಈಗ ಎಲ್ಲಿದ್ದಾರೆ, ಎಷ್ಟು ಬದಲಾಗಿದ್ದಾರೆ ಗೊತ್ತೇ?
ಪುಟಾಣಿ ಏಜೆನ್ಟ್ 123, ನಾಗರಹೊಳೆ, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಸಿನಿಮಾಗಳಿವೆ.
Bhanuprakash: ನಮ್ಮ ಕನ್ನಡ ಚಿತ್ರರಂಗದಲ್ಲಿ 80ರ ದಶಕ ಗೋಲ್ಡನ್ ಎರಾ ಎಂದು ಹೇಳಿದರೆ ತಪ್ಪಲ್ಲ. 70, 80 ಮತ್ತು 90ರ ದಶಕದಲ್ಲಿ ಅನೇಕ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದಿಗೂ ಕೂಡ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಆ ಕಲಾವಿದರು ಇಂದು ತೆರೆಮರೆಗೆ ಸರಿದು ಹೋಗಿರಬಹುದು. ಅದರ ಅವರು ನಟಿಸಿದ ಪಾತ್ರಗಳನ್ನು ಜನರು ಇನ್ನು ಮರೆತಿಲ್ಲ. ಕೆಲವು ಪಾತ್ರಗಳೇ ಹಾಗೆ, ಎಷ್ಟೇ ವರ್ಷವಾದರೂ ನೆನಪಿನಲ್ಲಿ ಉಳಿಯುತ್ತದೆ.
ಕರಿಯ 2 ಕನ್ನಡ ಫುಲ್ ಮೂವಿ
80ರ ದಶಕದಲ್ಲಿ ತಯಾರಾಗುತ್ತಿದ್ದ ಸಿನಿಮಾಗಳು ಕೂಡ ಅದೇ ರೀತಿ ನೆನಪಿನಲ್ಲಿ ಉಳಿಯುವಂತ ಸಿನಿಮಾಗಳೇ ಆಗಿರುತ್ತಿದ್ದವು. ಆಗಿನ ಸಿನಿಮಾ ಕಥೆಗಾರರು, ನಿರ್ದೇಶಕರು ಸಿನಿಮಾ ತಯಾರು ಮಾಡುತ್ತಿದ್ದ ರೀತಿಯೇ ಅಷ್ಟು ನೈಜವಾಗಿರುತ್ತಿತ್ತು, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂಥ ಕಥೆಗಳನ್ನು ಹೆಣೆದು ಸಿನಿಮಾ ಮಾಡುತ್ತಿದ್ದರು. ಆಗಿನ ಕಲಾವಿದರು ಮತ್ತು ನಿರ್ದೇಶಕರು, ಕಥೆಗಾರರು ಎಲ್ಲರೂ ಲೆಜೆಂಡ್ ಗಳು ಎಂದರೆ ತಪ್ಪಲ್ಲ.
ಅದೇ ಕಾರಣಕ್ಕೆ 80ರ ದಶಕದ ಸಿನಿಮಾಗಳು ನಮಗೆ ಈಗಲೂ ಅಷ್ಟೇ ಫ್ರೆಶ್ ಅನ್ನಿಸುತ್ತದೆ, ವಿಭಿನ್ನ ಕಥೆ ಅನ್ನಿಸುತ್ತದೆ. ಆಗಿನ ಕಾಲದಲ್ಲಿ ಸಾಮಾಜಿಕ ಚಿತ್ರಗಳು ಮಾತ್ರವಲ್ಲ, ಮಕ್ಕಳಿಗೆ ಮನರಂಜನೆ ಕೊಡುವಂಥ ಮಕ್ಕಳ ಚಿತ್ರಗಳು ಕೂಡ ತಯಾರಾಗುತ್ತಿದ್ದವು. ಅನೇಕ ಮಕ್ಕಳ ಸಿನಿಮಾಗಳು ಬಂದಿವೆ. ಪುಟಾಣಿ ಏಜೆನ್ಟ್ 123, ನಾಗರಹೊಳೆ, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಸಿನಿಮಾಗಳಿವೆ.
ಈ ಫೋಟೋದಲ್ಲಿ ಇರುವ ಹುಡುಗ ಕೂಡ ಬಾಲನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಬಹುಷಃ ಇವರ ಹೆಸರು ನಿಮಗೆ ನೆನಪಿರದೇ ಹೋದರು, ಇವರು ಅಭಿನಯಿಸಿದ ಪಾತ್ರ ಮತ್ತು ಆ ಪಾತ್ರದ ಡೈಲಾಗ್ ಎಲ್ಲರಿಗು ನೆನಪಿನಲ್ಲಿ ಇರುತ್ತದೆ. ಸಿಂಹದ ಮರಿ ಸೈನ್ಯ (Simhada Mari Sainya) ಸಿನಿಮಾದಲ್ಲಿ ಚೆನ್ನಾಗಿದೆ ಚೆನ್ನಾಗಿದೆ ಎಂದು ಇವರು ಡೈಲಾಗ್ ಹೇಳುವ ಶೈಲಿಯನ್ನು ಮರೆಯುವ ಹಾಗಿಲ್ಲ. ಬೇಬಿ ಇಂದಿರಾ, ಮಾಸ್ಟರ್ ಅರ್ಜುನ್ ಇವರೆಲ್ಲರ ಜೊತೆಗೆ ಇವರು ಕೂಡ ಇದ್ದರು.
ಚೆನ್ನಾಗಿದೆ ಚೆನ್ನಾಗಿದೆ ಎಂದು ಹೇಳುವ ಡೈಲಾಗ್ ಮೂಲಕ ಫೇಮಸ್ ಆದ ಇವರ ಹೆಸರು ಭಾನುಪ್ರಕಾಶ್ (Bhanuprakash). 80ರ ದಶಕದ ಮಕ್ಕಳ ಸಿನಿಮಾಗಳಲ್ಲಿ ನಟಿಸಿದ್ದರು, ಬಳಿಕ ನಟನೆಯಿಂದ ದೊರ ಸರಿದರು. ಭಾನುಪ್ರಕಾಶ್ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗದಿಂದ ಸಂಪೂರ್ಣ ದೂರವೇ ಆಗಿ, ಈಗ ತಮ್ಮ ಪರ್ಸನಲ್ ಲೈಫ್ ನಲ್ಲಿ ಬ್ಯುಸಿ ಆಗಿದ್ದಾರೆ.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.