Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Yuva Movie: ಎಲ್ಲೆಡೆ ಸದ್ದು ಮಾಡುತ್ತಿದೆ “ಒಬ್ಬನೇ ಶಿವಾ,  ಒಬ್ಬನೇ ಯುವಾ” ಹಾಡು, ಆಡಿಯೋ ಹಕ್ಕುಗಳು ಬರೋಬ್ಬರಿ 3 ಕೋಟಿಗೆ ಮಾರಾಟ.

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣ ಆಗುತ್ತಿರುವ, ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡುತ್ತಿರುವ ‘ಯುವ’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

Yuva Movie: ಅಣ್ಣಾವ್ರ ಮೊಮ್ಮಗ ಯುವ ರಾಜ್​ಕುಮಾರ್​ ನಟನೆಯ ಮೊದಲ ಸಿನಿಮಾ ಎಂಬ ಕಾರಣಕ್ಕೆ ‘ಯುವ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾಗೆ ಅಜನೀಶ್​ ಬಿ. ಲೋಕನಾಥ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳ ಪ್ರಸಾರದ ಹಕ್ಕನ್ನು ‘ಆನಂದ್​ ಆಡಿಯೋ’ ಸಂಸ್ಥೆ ಖರೀದಿಸಿದೆ.

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣ

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣ ಆಗುತ್ತಿರುವ, ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡುತ್ತಿರುವ ‘ಯುವ’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಯುವ ರಾಜ್​ಕುಮಾರ್​ ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಮಾರ್ಚ್ 29ಕ್ಕೆ ‘ಯುವ’ ಸಿನಿಮಾ ಬಿಡುಗಡೆ ಆಗಲಿದೆ.

Yuva Movie: The "Obbane Shiva, Obbane Yuva" song is buzzing everywhere; audio rights were sold for Rs 3 crore.

‘ಯುವ’ ಸಿನಿಮಾದ (Yuva Movie) ಶೂಟಿಂಗ್​ ಮುಕ್ತಾಯ

‘ಯುವ’ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿರುವ ಸುಮಧುರ ಹಾಡುಗಳು ಈ ಸಿನಿಮಾದಲ್ಲಿವೆ. ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ‘ಆನಂದ್ ಆಡಿಯೋ’ ‘ಯುವ’ ಸಿನಿಮಾದ ಹಾಡುಗಳ ಹಕ್ಕನ್ನು 3 ಕೋಟಿಗೂ ಅಧಿಕ ದಾಖಲೆಯ ಮೊತ್ತಕ್ಕೆ ಪಡೆದುಕೊಂಡಿದೆ ಎಂದು ಸುದ್ದಿಯಾಗುತ್ತಿದೆ, ಕನ್ನಡ ಚಿತ್ರರಂಗದಲ್ಲೆ ಇದೇ ಮೊದಲ ಬಾರಿಗೆ ಒಬ್ಬ ಹೊಸ ನಾಯಕನಟನ ಮೊದಲ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಆಡಿಯೋ ರೈಟ್ಸ್ ಹಕ್ಕನ್ನು ಪಡೆದುಕೊಂಡಿರುವುದು .

Yuva Movie: The "Obbane Shiva, Obbane Yuva" song is buzzing everywhere; audio rights were sold for Rs 3 crore.

ಎಲ್ಲೆಡೆ ಸದ್ದು ಮಾಡುತ್ತಿದೆ “ಒಬ್ಬನೇ ಶಿವಾ,  ಒಬ್ಬನೇ ಯುವಾ” ಹಾಡು

ನಿನ್ನೆ ಸಂಜೆ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆಯಾದ “ಯುವ” ಚಿತ್ರದ ಮೊದಲ ಹಾಡು “ಒಬ್ಬನೇ ಶಿವಾ..ಒಬ್ಬನೇ ಯುವ.. ” ಕೇಳುಗರ ಮನ ಗೆದ್ದು ಯೂ ಟೂಬ್ ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಶೀಘ್ರದಲ್ಲೇ ಟೀಸರ್ ಮತ್ತು ಟ್ರೇಲರ್ ಬಿಡುಗಡೆಗೆ ಪ್ಲ್ಯಾನ್​ ಮಾಡಲಾಗುತ್ತಿದೆ.

Yuva Movie: The "Obbane Shiva, Obbane Yuva" song is buzzing everywhere; audio rights were sold for Rs 3 crore.

Also read: Puneeth Rajkumar: ಎಂದೂ ಬಾಡದ ಬೆಟ್ಟದ ಹೂ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟಿದ ಆಸ್ಪತ್ರೆ ಇದೇ ನೋಡಿ!! ಇನ್ನು ಯಾರೆಲ್ಲಾ ಸೆಲೆಬ್ರಿಟಿಗಳು ಇದೇ ಆಸ್ಪತ್ರೆಯಲ್ಲಿ ಜನಿಸಿದ್ದಾರೆ ಗೊತ್ತೆ?

 

Leave a comment