PM Kisan Samman Nidhi Yojana: ರೈತರು ಏನಾದರೂ ಈ ತಪ್ಪುಗಳನ್ನ ಮಾಡಿದ್ರೆ ಪಿಎಮ್ ಕಿಸಾನ್ ಯೋಜನೆಯ ಹಣ ಬರಲ್ಲ! ಕೇಂದ್ರದಿಂದ ರೈತರಿಗೆ ವಾರ್ನಿಂಗ್!
ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೊಟ್ಟಿರುವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ಯಾ? ಇಕೆವೈಸಿ ಆಗಿದ್ಯಾ? ಇದೆಲ್ಲವನ್ನು ಚೆಕ್ ಮಾಡಿಕೊಳ್ಳಿ.
PM Kisan Samman Nidhi Yojana: ಕೇಂದ್ರ ಸರ್ಕಾರವು ಕಷ್ಟಪಟ್ಟು ಕೆಲಸ ಮಾಡುವ ರೈತರಿಗಾಗಿ ವಿಶೇಷವಾಗಿ ಜಾರಿಗೆ ತಂದ ಯೋಜನೆ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಎಲ್ಲಾ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯ ಆಗಲಿ ಎಂದು ವಾರ್ಷಿಕವಾಗಿ ₹6000 ರೂಪಾಯಿಗಳನ್ನು 3 ಕಂತುಗಳಲ್ಲಿ ನೀಡಲಾಗುತ್ತಿದೆ. ರೈತರು ಈಗಾಗಲೇ 15 ಕಂತುಗಳ ಹಣವನ್ನು ಸ್ವೀಕರಿಸಿದ್ದಾರೆ.
ಇನ್ನೇನು 16ನೇ ಕಂತಿನ ಹಣ ಕೂಡ ಬರಬೇಕಿದೆ. ಆದರೆ ಈ ವೇಳೆ ಸರ್ಕಾರವು ರೈತರಿಗೆ ಒಂದು ಎಚ್ಚರಿಕೆ ನೀಡಿ, ಈ ತಪ್ಪುಗಳನ್ನು ರೈತರು ಮಾಡಿದರೆ ಅವರಿಗೆ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರೋದಿಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹಾಗಿದ್ದಲ್ಲಿ ಆ 5 ತಪ್ಪುಗಳು ಯಾವುವು ಎಂದು ತಿಳಿಯೋಣ.
1. ಬ್ಯಾಂಕ್ ಅಕೌಂಟ್ ಮಾಹಿತಿ: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೊಟ್ಟಿರುವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ಯಾ? ಇಕೆವೈಸಿ ಆಗಿದ್ಯಾ? ಇದೆಲ್ಲವನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಈ ಕೆಲಸ ಆಗಿಲ್ಲ ಅಂದ್ರೆ ನಿಮಗೆ 16ನೇ ಕಂತಿನ ಹಣ ಬರುವುದಿಲ್ಲ, ಹಾಗಾಗಿ ಇಕೆವೈಸಿ ಆಗಿಲ್ಲ ಎಂದರೆ ತಕ್ಷಣವೇ ಬ್ಯಾಂಕ್ ಗೆ ಹೋಗಿ ಇಕೆವೈಸಿ ಮಾಡಿಸಿ. ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
2. ಸ್ಟೇಟಸ್ ಚೆಕ್ ಮಾಡಿ: pmkisan.gov.in ಇದು ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿದ್ದು, ಇದಕ್ಕೆ ಭೇಟಿ ನೀಡಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸ್ಟೇಟಸ್ ಚೆಕ್ ಮಾಡಿ, ಎಷ್ಟು ಕಂತುಗಳ ಹಣ ಬಂದಿದೆ ಎನ್ನುವುದನ್ನು ಚೆಕ್ ಮಾಡಿ. ಹಾಗೆಯೇ ಆಧಾರ್ ಸೀಡಿಂಗ್ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಿ, ಆಗಿಲ್ಲ ಎಂದರೆ ಆಧಾರ್ ಸೀಡಿಂಗ್ ಮಾಡಿಸಿ
3. ಸ್ಟೇಟಸ್ ಚೆಕ್ ಮಾಡುವ ರೀತಿ: ವೆಬ್ಸೈಟ್ ಗೆ ಭೇಟಿ ನೀಡಿದ ಬಳಿಕ ಸ್ಟೇಟಸ್ ಚೆಕ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಅಲ್ಲಿ ಫೋನ್ ನಂಬರ್ ಅಥವಾ ಆಧಾರ್ ಕಾರ್ಡ್ ಎಂಟರ್ ಮಾಡಿ, ಕ್ಯಾಪ್ಚ ಕೋಡ್ ಹಾಕಿ, ಓಟಿಪಿ ಹಾಕುವ ಮೂಲಕ ಲಾಗಿನ್ ಮಾಡಬಹುದು. ನಿಮ್ಮ ಬಂದಿರುವ ಎಲ್ಲಾ ಕಂತುಗಳ ಹಣದ ಬಗ್ಗೆ ಮಾಹಿತಿ ಸಿಗುತ್ತದೆ.
4. ಆಧಾರ್ ನಂಬರ್ ಚೆಕ್ ಮಾಡಿ: ಕೆಲವೊಮ್ಮೆ ನಿಮ್ಮ ಆಧಾರ್ ಕಾರ್ಡ್ ನಂಬರ್ ನಲ್ಲಿ ಕೂಡ ಚೆಕ್ ಮಾಡಬಹುದು. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ಸೈಟ್ ನಲ್ಲಿ ರೈತ ಕಾರ್ನರ್ ಎನ್ನುವ ಆಪ್ಶನ್ ನಲ್ಲಿ, ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಪಡೆಯಬಹುದು. ಒಂದು ವೇಳೆ ಅಲ್ಲಿರುವ ಮಾಹಿತಿ ತಪ್ಪಿದೆ ಎಂದರೆ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ.
5. ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಚೆಕ್ ಮಾಡಿ: ಬ್ಯಾಂಕ್ ಅಕೌಂಟ್ ಯಾವುದಾದರೂ ಮಾಹಿತಿ ತಪ್ಪಿದ್ದರು ನಿಮಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರುವುದಿಲ್ಲ. ಹಾಗಾಗಿ ಬ್ಯಾಂಕ್ ಅಕೌಂಟ್ ಮಾಹಿತಿ ಚೆಕ್ ಮಾಡಿ, ತಪ್ಪಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಿ.
ಈ ಯೋಜನೆಯಲ್ಲಿ ಯಾವುದಾದರೂ ಸಮಸ್ಯೆ ಉಂಟಾಗಿ, ನಿಮಗೆ ಸರಿಪಡಿಸಲು ಆಗುತ್ತಿಲ್ಲ ಎಂದರೆ, ಇನ್ನು ಖಾತೆಗೆ ಬಂದಿಲ್ಲ ಎಂದರೆ 011-24300606 ಅಥವಾ 155261 ಈ ಟೋಲ್ ಫ್ರೀ ನಂಬರ್ ಗಳಿಗೆ ಕರೆ ಮಾಡಿ.
If the farmers make any of these mistakes, the PM Kisan Samman Nidhi Yojana money will not come.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.