Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Investment Tips: ಬಂಗಾರ ಖರೀದಿ ಮಾಡುವ ಮೊದಲು ಈ 8 ಅಂಶಗಳನ್ನು ಗಮನಿಸಿ, ಇಲ್ಲದಿದ್ದರೇ ಮೋಸ ಹೋಗಬಹುದು!

ಗೋಲ್ಡ್ ಕಾಯ್ನ್ ಗಳನ್ನು ನೋಡಿದರೆ ಅವುಗಳ ತೂಕ ಒಂದೇ ರೀತಿ ಇರುವ ಹಾಗೆ ಅನ್ನಿಸುತ್ತದೆ. ಹಾಗಾಗಿ Gold Coin ಗಳನ್ನು ನೋಡುವುದು ಮಾತ್ರವಲ್ಲ,

Gold Investment Tips: ವರ್ಷಗಳು ಉರುಳಿದ ಹಾಗೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಕಡಿಮೆ ಅಂತು ಆಗುತ್ತಿಲ್ಲ. ಚಿನ್ನವನ್ನು ಖರೀದಿ ಮಾಡುವ ಜನರ ಸಂಖ್ಯೆ ಕೂಡ ಜಾಸ್ತಿ ಆಗುತ್ತಲೇ ಇದೆ. ಚಿನ್ನದ ಬೆಲೆ ಎಷ್ಟೇ ಏರಿಕೆ ಆದರೂ ಜನರು ಖರೀದಿ ಮಾಡುತ್ತಿದ್ದಾರೆ. ಆದರೆ ಚಿನ್ನ ಖರೀದಿ ಮಾಡುವಾಗ ಪ್ರಮುಖವಾಗಿ ಕೆಲವು ವಿಚಾರಗಳನ್ನು ಗಮನಿಸಬೇಕು, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಹಾಗಿದ್ದಲ್ಲಿ ಆ ಅಂಶಗಳು ಏನೇನು ಎಂದು ತಿಳಿಯೋಣ ಬನ್ನಿ..

1. ಶುದ್ಧತೆ ಪರಿಶೀಲಿಸಿ: ಚಿನ್ನದ ಪರಿಶೀಲನೆ ನಡೆಯುವುದು ಶುದ್ಧತೆಯ ಮೇಲೆ. ಚಿನ್ನದ ಆಭರಣ ತಯಾರಕರು ಬೇರೆ ಮೆಟಲ್ ಗಳನ್ನು ಸಹ ಬಳಸಿರುತ್ತಾರೆ. ಚಿನ್ನ ಎಷ್ಟು ಕ್ಯಾರೆಟ್ ಇದೆ ಎನ್ನುವುದರ ಮೇಲೆ ಚಿನ್ನದ ಕ್ವಾಲಿಟಿ ಗೊತ್ತಾಗುತ್ತದೆ. ಹಾಗಾಗಿ ಚಿನ್ನ ಖರೀದಿ ಮಾಡುವುದಕ್ಕಿಂತ ಮೊದಲು ಅದು ಎಷ್ಟು ಕ್ಯಾರೆಟ್ ಇದೆ, ಶುದ್ಧತೆ ಹೇಗಿದೆ ಎಂದು ಪರಿಶೀಲಿಸಿ.

2. ತೂಕದ ಬಗ್ಗೆ ಗಮನ ಕೊಡಿ: ಗೋಲ್ಡ್ ಕಾಯ್ನ್ ಗಳನ್ನು ನೋಡಿದರೆ ಅವುಗಳ ತೂಕ ಒಂದೇ ರೀತಿ ಇರುವ ಹಾಗೆ ಅನ್ನಿಸುತ್ತದೆ. ಹಾಗಾಗಿ Gold Coin ಗಳನ್ನು ನೋಡುವುದು ಮಾತ್ರವಲ್ಲ, ಅವುಗಳ ತೂಕದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ನಂತರ ಖರೀದಿ ಮಾಡಿ.

3. ಹಾಲ್ ಮಾರ್ಕ್ ಮುದ್ರೆ ಚೆಕ್ ಮಾಡಿ: ಚಿನ್ನದ ಗುಣಮಟ್ಟವನ್ನು ದೃಢೀಕರಿಸುವುದೇ ಹಾಲ್ ಮಾರ್ಕ್ ಹುದ್ದೆಗಳು, ಹಾಗಾಗಿ ನೀವು ಚಿನ್ನ ಖರೀದಿ ಮಾಡುವಾಗ ಅದರ ಮೇಲೆ ಅಧಿಕೃತ ಹಾಲ್ ಮಾರ್ಕ್ ಹುದ್ದೆ ಇದೆಯಾ ಎನ್ನುವುದನ್ನು ಚೆಕ್ ಮಾಡಿ. ಇದು ಬಹಳ ಮುಖ್ಯ ಆಗುತ್ತದೆ.

4. ನಂಬಿಕೆಯ ಸ್ಥಳಗಳಲ್ಲಿ ಮಾತ್ರ ಖರೀದಿ ಮಾಡಿ: ಚಿನ್ನದ ಅಂಗಡಿ ಚೆನ್ನಾಗಿದೆ ಎಂದು ಎಲ್ಲೆಂದರಲ್ಲಿ ಖರೀದಿ ಮಾಡಬೇಡಿ, ನಿಮಗೆ ಚೆನ್ನಾಗಿ ಪರಿಚಯ ಇದ್ದು, ನಂಬಿಕೆಗೆ ಅರ್ಹವಾಗಿರುವಂಥ ಕಡೆಗಳಲ್ಲಿ ಮಾತ್ರ ಚಿನ್ನ ಖರೀದಿ ಮಾಡಿ. ಇದು ನಿಮಗೆ ಸೇಫ್ಟಿ ಎಂದು ಹೇಳಬಹುದು, ಮೋಸ ಹೋಗುವ ಪ್ರಕ್ರಿಯೆ ಕಡಿಮೆ ಇರುತ್ತದೆ.

5. ಆ ದಿನದ ಚಿನ್ನದ ಬೆಲೆ ತಿಳಿದುಕೊಳ್ಳಿ: ಯಾವಾಗಲೂ ಚಿನ್ನ ಖರೀದಿಗೆ ಹೋಗುವಾಗ ಆ ದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೀವು ತಿಳಿದುಕೊಂಡಿರಬೇಕು. ಚಿನ್ನ ಖರೀದಿ ಮಾಡಲು ಹೋದಾಗ ಬೆಲೆ ಜಾಸ್ತಿ ಹೇಳಿ ನಿಮ್ಮನ್ನು ಯಾಮಾರಿಸಲು ಆಗುವುದಿಲ್ಲ. ಹಾಗಾಗಿ ನಿಮ್ಮ ಸೇಫ್ಟಿಗೆ ಚಿನ್ನ ಖರೀದಿಗೇ ಹೋಗುವ ಮೊದಲು ಅಂದಿನ ಬೆಲೆ ತಿಳಿದುಕೊಂಡು ಹೋಗಿ..

6. ಡಿಸೈನ್ ಮತ್ತು ಬ್ರ್ಯಾಂಡ್ ಚೆಕ್ ಮಾಡಿ: ಚಿನ್ನದ ಆಭರಣ ಖರೀದಿ ಮಾಡುವಾಗ ಬಹಳ ವರ್ಷಗಳ ಕಾಲ ಬಳಸಬೇಕು ಎಂದು ಖರೀದಿ ಮಾಡುತ್ತಾರೆ. ಹಾಗಾಗಿ ಆಭರಣದ ಡಿಸೈನ್ ಮತ್ತು ಬ್ರ್ಯಾಂಡ್ ಇದೆಲ್ಲವನ್ನು ಕೂಡ ಗಮನದಲ್ಲಿ ಇಟ್ಟುಕೊಂಡು, ನಂತರ ಖರೀದಿ ಮಾಡಿ.

7. ಪ್ಯಾಕೇಜಿಂಗ್ ಚೆಕ್ ಮಾಡಿ: Gold Coin ಗಳನ್ನು ಆನ್ಲೈನ್ ಆರ್ಡರ್ ಮಾಡುವವರು ಇರುತ್ತಾರೆ. ಅಂಥವರು ಪ್ಯಾಕಿಂಗ್ ಸರಿ ಇದೆಯಾ ಎಂದು ಪೂರ್ತಿಯಾಗಿ ಚೆಕ್ ಮಾಡಿ. ಒಂದು ವೇಳೆ ಡ್ಯಾಮೇಜ್ ಆಗಿದ್ದರೆ ಹಿಂದಿರುಗಿಸುವುದು ಒಳ್ಳೆಯದು..

8. ಮೇಕಿಂಗ್ ಚಾರ್ಜಸ್ ತಿಳಿಯಿರಿ: ಜನರು ಆಭರಣ ಖರೀದಿ ವೇಳೆ ಮೇಕಿಂಗ್ ಚಾರ್ಜಸ್ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ, ಆದರೆ ಇದು ಜಾಸ್ತಿಯಾದರೆ ಒಟ್ಟಾರೆ ಚಿನ್ನದ ಬೆಲೆ ಜಾಸ್ತಿಯಾಗುತ್ತದೆ. ಹಾಗಾಗಿ ಮೇಕಿಂಗ್ ಚಾರ್ಜಸ್ ಬಗ್ಗೆ ಗಮನ ಕೊಡಿ.

Note these 8 points before buying gold; otherwise, you may be cheated!

Leave a comment