Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Facts of Lamp: ಪೂಜೆ ಮಾಡುವಾಗ ತುಪ್ಪದ ದೀಪ ಹಚ್ಚೋದು ಒಳ್ಳೆಯದೋ? ಎಣ್ಣೆ ದೀಪ ಹಚ್ಚೋದು ಒಳ್ಳೆಯದೋ? ಇದರ ಬಗ್ಗೆ ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ?

ನಮ್ಮ ಮನೆಗಳಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತಾರೆ, ಎಣ್ಣೆಯ ದೀಪದ ವಿಷಯದಲ್ಲಿ ಬೇರೆ ಬೇರೆ ಎಣ್ಣೆಗಳನ್ನು ಬಳಸಲಾಗುತ್ತದೆ.

Facts of Lamp: ಅನಾದಿ ಕಾಲದಿಂದಲೂ ಪೂಜೆ ಮಾಡುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಬೇರೆ ಬೇರೆ ಧರ್ಮಗಳಲ್ಲಿ ಪೂಜೆ ಮಾಡುವ ವಿಧಾನ ಬೇರೆ ಆದರೂ ದೇವರ ಆರಾಧನೆ ಒಂದೇ. ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ ಮಾಡುವ ದೀಪ ಹಚ್ಚುವ ಕಾರ್ಯ ಆಗಿನಿಂದಲು ಇದೆ. ದೀಪ ಹಚ್ಚದೇ ಯಾವುದೇ ಪೂಜೆ ಶುರು ಆಗುವುದಿಲ್ಲ. ಕೆಲವರು ಎಣ್ಣೆ ದೀಪ ಹಚ್ಚಿದರೆ, ಇನ್ನು ಕೆಲವರು ತುಪ್ಪದ ದೀಪ ಹಚ್ಚುತ್ತಾರೆ. ಹಾಗಿದ್ದರೆ ದೀಪ ಹಚ್ಚಲು ಸೂಕ್ತ ಯಾವುದು? ಎಣ್ಣೆ ಅಥವಾ ತಪ್ಪದ ದೀಪದ ಅರ್ಥವೇನು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಎಣ್ಣೆ ದೀಪ ಅಥವಾ ತುಪ್ಪದ ದೀಪ? ಯಾವುದಕ್ಕೆ ಹೆಚ್ಚು ಮಹತ್ವ?

ನಮ್ಮ ಮನೆಗಳಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚುತ್ತಾರೆ, ಎಣ್ಣೆಯ ದೀಪದ ವಿಷಯದಲ್ಲಿ ಬೇರೆ ಬೇರೆ ಎಣ್ಣೆಗಳನ್ನು ಬಳಸಲಾಗುತ್ತದೆ. ಸಾಮಾನ್ಯ ದೀಪದ ಎಣ್ಣೆ, ಎಳ್ಳೆಣ್ಣೆ, ಮಲ್ಲಿಗೆ ಎಣ್ಣೆ, ಸಾಸಿವೆ ಎಣ್ಣೆ ಇವುಗಳಿಂದ ದೀಪ ಹಚ್ಚಲಾಗುತ್ತದೆ. ಎಣ್ಣೆಯ ಬೆಲೆ ಕಡಿಮೆ ಇರುವುದರಿಂದ, ತುಪ್ಪದ ಬೆಲೆ ದುಬಾರಿ ಆಗಿರುವುದರಿಂದ ಹೆಚ್ಚಿನ ಜನರು ಎಣ್ಣೆಯ ದೀಪ ಬೆಳಗಿಸುತ್ತಾರೆ. ಆದರೆ ಧರ್ಮದ ಅನುಸಾರ ಅತ್ಯಂತ ಶುಭವಾದದ್ದು ತುಪ್ಪದ ದೀಪ..

ಒಳ್ಳೆಯ ದೀಪ ಯಾವುದು?

1. ಧರ್ಮ ಶಾಸ್ತ್ರಗಳ ಪ್ರಕಾರ ದೇವರ ಪೂಜೆಯ ವೇಳೆ ಬಲಗಡೆ ತುಪ್ಪದ ದೀಪ ಹಚ್ಚುವುದು ಒಳ್ಳೆಯದು. ಮತ್ತು ಎಡಗಡೆ ತುಪ್ಪದ ದೀಪ ಹಚ್ಚುವುದು ಸಹ ಅಷ್ಟೇ ಒಳ್ಳೆಯದು ಎನ್ನುತ್ತಾರೆ.

2. ತುಪ್ಪದ ದೀಪಕ್ಕೆ ಬಿಳಿ ಬಣ್ಣದ ಬತ್ತಿ ಮಾಡುವುದು ಒಳ್ಳೆಯ, ಈ ಥರದ ದೀಪದ ಬೆಳಕನ್ನು ಹೂವಿನ ಬೆಳಕು ಎನ್ನುತ್ತಾ, ಇದರಿಂದ ಬದುಕಿಗೆ ಶುಭವಾಗುತ್ತದೆ. ಇನ್ನು ಎಳ್ಳೆಣ್ಣೆಯ ದೀಪ ಹಚ್ಚುವಾಗ ಕ
ಕೆಂಪು ಅಥವಾ ಹಳದಿ ಬಣ್ಣದ ಬತ್ತಿ ಮಾಡಿ.

3. ಮತ್ತೊಂದು ಮುಖ್ಯವಾದ ವಿಚಾರ, ಸಾಮಾನ್ಯವಾಗಿ ದೇವರ ಪೂಜೆಗೆ ತುಪ್ಪದ ದೀಪ ಬಳಸಿದರು ಸಹ ಮುಖ್ಯ ದೇವರ ಪೂಜೆಗೆ ಎಣ್ಣೆ ದೀಪವೇ ಮುಖ್ಯ.

4. ಭೈರವನ ಪೂಜೆಗಾಗಿ ಸಾಸಿವೆ ಎಣ್ಣೆಯ ದೀಪವನ್ನೇ ಹಚ್ಚಬೇಕು.
ಮನಸ್ಸಿನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಎಳ್ಳೆಣ್ಣೆ ದೀಪ ಹೆಚ್ಚುವುದು ಒಳ್ಳೆಯದು..

5. ಲಕ್ಷ್ಮೀದೇವಿಯ ಆಶೀರ್ವಾದ ಪಡೆದು, ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂದರೆ, ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ.

6. ಶನಿದೇವರ ಪರಿಣಾಮ ಕಡಿಮೆ ಆಗಬೇಕು ಎಂದರೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯ ದೀಪ ಹಚ್ಚಿ.

7. ಗಂಡನ ಆರೋಗ್ಯ ಚೆನ್ನಾಗಿರಬೇಕು, ಅವರ ಆಯಸ್ಸು ಜಾಸ್ತಿಯಾಗಬೇಕು ಎಂದರೆ ಪೂಜೆ ವೇಳೆ ಸಾಸಿವೆ ಎಣ್ಣೆಯ ದೀಪ ಹಚ್ಚಿ.

8. ಆಂಜನೇಯ ಸ್ವಾಮಿಯ ವಿಶೇಷ ಅನುಗ್ರಹ ಆಶೀರ್ವಾದ ಪಡೆಯಲು, ಪೂಜೆ ಮಾಡುವಾಗ ಮಲ್ಲಿಗೆ ಎಣ್ಣೆಯ ದೀಪ ಬೆಳಗಿಸಿ.

9. ಸೂರ್ಯದೇವನ ಆಶೀರ್ವಾದಕ್ಕೆ ಮತ್ತು ಭೈರವನ ಆಶೀರ್ವಾದಕ್ಕೆ ಹಾಗೂ ಶತ್ರುಗಳ ನಾಶಕ್ಕೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ ಪೂಜೆ ಮಾಡಬೇಕು.

10. ಲಿನ್ಸಡ್ ಎಣ್ಣೆ ಬಳಕೆ ಮಾಡಿ ದೀಪ ಹಚ್ಚಿದರೆ ರಾಹು ಕೇತು ಶಾಂತರಾಗುತ್ತಾರೆ.

11. ತುಪ್ಪದ ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣ ಸಹ ಇದು, ಇದರ ಪರಿಮಳ ಖಿನ್ನತೆ ದೂರ ಮಾಡುತ್ತದೆ, ಶಾಂತಿ ನೀಡುತ್ತದೆ. ಮನೆಯ ಗಾಳಿ ಶುದ್ಧಿಯಾಗುತ್ತದೆ. ರೋಗಗಳು ಬರುವುದಿಲ್ಲ.

Should worshipers light ghee lamps? Is lighting an oil lamp good? How do our scriptures explain this?

Tirupati Facts: ತಿರುಪತಿ ತಿಮ್ಮಪ್ಪನನ್ನು ಭಕ್ತರು ಗೋವಿಂದ ಎಂದು ಕರೆಯಲು ಕಾರಣವೇನು ಗೊತ್ತಾ? ಹಸುವಿನ ಸಗಣಿಯಿಂದ ಗೋವಿಂದಾ ಎಂಬ ನಾಮಸ್ಮರಣೆ ಹುಟ್ಟಿಕೊಳ್ತಾ??

Leave a comment