Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Mula Nakshatra: ಮೂಲ ನಕ್ಷತ್ರ ಅದೃಷ್ಟವೋ ದುರಾದೃಷ್ಟವೋ? ನೀವೇನಾದ್ರೂ ಮೂಲ ನಕ್ಷತ್ರದಲ್ಲಿ ಜನಿಸಿದ್ರೆ ಖಂಡಿತ ಈ ಒಂದು ಕಷ್ಟವನ್ನು ಅನುಭವಿಸಿರುತ್ತೀರಿ!!

ಮಗು ಬೆಳೆದು ದೊಡ್ಡವನಾದ ಮೇಲೆ ಏನಾಗುತ್ತದೆ? ಎಂಬ ಭವಿಷ್ಯವನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಈ ಮಗುವಿನ ಕುಟುಂಬಸ್ಥರಿಗೆ ಇದ್ದೇ ಇರುತ್ತದೆ.

Mula Nakshatra: ಸ್ನೇಹಿತರೆ, ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಅದು ಭೂಮಿಗೆ ಬಂದಿದ್ದಂತಹ ಸಮಯವನ್ನು ಬರೆದಿಟ್ಟುಕೊಂಡು ಅದೇ ದಿನ ಅಥವಾ ಮರುದಿನ ಹಿರಿಯರು ಜ್ಯೋತಿಷ್ಯಶಾಸ್ತ್ರ ಕೇಳುವ ಪದ್ಧತಿ ನಮ್ಮಲ್ಲಿ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೌದು ಮಗು ಸರಿಯಾದ ಗಳಿಗೆಯಲ್ಲಿ ಜನಿಸಿದೆಯೇ? ಮಗುವಿನ ಜನ್ಮ ಕುಟುಂಬಕ್ಕೆ ಯಾವ ರೀತಿಯಾದಂತಹ ಅದೃಷ್ಟವನ್ನು ಹೊತ್ತು ತರಲಿದೆ? ಹಾಗೂ ತಂದೆ-ತಾಯಿ ಯಾವ್ಯಾವೆಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ?

ಹಾಗೂ ಮಗು ಬೆಳೆದು ದೊಡ್ಡವನಾದ ಮೇಲೆ ಏನಾಗುತ್ತದೆ? ಎಂಬ ಭವಿಷ್ಯವನ್ನು ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಈ ಮಗುವಿನ ಕುಟುಂಬಸ್ಥರಿಗೆ ಇದ್ದೇ ಇರುತ್ತದೆ. ಹೀಗಾಗಿ ಮಗು ಹುಟ್ಟಿದ ದಿನವೇ ಜನ್ಮದಿನ ಸಮಯ ಮತ್ತು ದಿನಾಂಕವನ್ನು ಸರಿಯಾಗಿ ಬರೆದುಕೊಂಡು, ಜ್ಯೋತಿಷ್ಯರ ಬಳಿ ಹಿರಿಯರು ಹೊರಡುತ್ತಾರೆ. ಹೀಗೆ ಮಗುವಿನ ಹೆಸರಿನಲ್ಲಿ ಯಾವುದಾದರೂ ದೋಷ, ಕೆಟ್ಟ ಸಮಯದಲ್ಲಿ ಅಥವಾ ಕೆಟ್ಟ ನಕ್ಷತ್ರದಲ್ಲಿ ಜನನ ಹೊಂದಿದ್ದರೆ ಅದಕ್ಕೆ ಸರಿಹೊಂದುವಂತಹ ಪರಿಹಾರವನ್ನು ಗುರೂಜಿಗಳು ತಿಳಿಸುತ್ತಾರೆ.

ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದೆ ಎಂದು ತಿಳಿದರೆ ಸಾಕಷ್ಟು ಜನ ಹೆದರಿ ಗಾಬರಿ ಪಡುವುದು ನೂರಕ್ಕೆ ನೂರರಷ್ಟು ಸತ್ಯ. ಹಾಗಾದ್ರೆ ಮೂಲ ನಕ್ಷತ್ರದಲ್ಲಿ ಜನಿಸಿದ ಮಕ್ಕಳು ಅದೃಷ್ಟ ಅಥವಾ ದುರಾದೃಷ್ಟವನ್ನು ಹೊತ್ತು ತರುತ್ತಾರಾ? ನಿಮ್ಮದು ಸಹ ಮೂಲ ನಕ್ಷತ್ರವಾಗಿದ್ದರೆ ತಪ್ಪದೇ ಈ ಪುಟವನ್ನು ಓದಿ ಮತ್ತು ನಿಮ್ಮ ಜನ್ಮ ನಕ್ಷತ್ರದ ಹಿಂದಿನ ವೃತ್ತಾಂತವನ್ನು ತಿಳಿದುಕೊಳ್ಳಿ. ಮೂಲ ನಕ್ಷತ್ರದಲ್ಲಿ ಜನನವಾದ ಮಕ್ಕಳು ಸೌಮ್ಯಸ್ವಭಾವದವರಾಗಿರುತ್ತಾರೆ.

ಹಠವಾದಿ, ಅದೃಷ್ಟವಂತರು ಆಗಿರುತ್ತಾರೆ ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡುವಂತಹ ಮನಸ್ಸನ್ನು ಈ ನಕ್ಷತ್ರದವರು ಎಂದು ಮಾಡ ಬಯಸುವುದಿಲ್ಲ. ಹಾಗೇನೆ ತಮ್ಮೆದುರಿರುವ ವ್ಯಕ್ತಿಯೊಳಗಿನ ಮನೋ ಧೈರ್ಯವನ್ನು ಸಮರ್ಥಿಸುವಂತಹ ಶಕ್ತಿ ಮೂಲ ನಕ್ಷತ್ರದ ಮಕ್ಕಳಿಗೆ ಇರುತ್ತದೆ. ಹಾಗೆ ಇವರಿಗೆ ವಂಶಸ್ಥರು ವಂಶದ ವಿಚಾರದ ಕುರಿತು ಅನುವಂಶತೆಯ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಈ ನಕ್ಷತ್ರದವರಿಗೆ ಇದ್ದೇ ಇರುತ್ತದೆ.

ಇನ್ನು ವಸ್ತ್ರಾಭರಣದ ಮೇಲೆ ಅತಿ ಹೆಚ್ಚಿನ ಪ್ರೀತಿ ಇದ್ದೇ ಇರುತ್ತದೆ. ಅಲ್ಲದೆ ಯಾವುದಾದರೂ ಶುಭಕಾರ್ಯಕ್ಕೆ ಹೋಗುವಾಗ ತಮ್ಮ ಬಟ್ಟೆಯ ಮೇಲೆ ಕಿಡಿ ಹಾರುವುದು ಹಾಗೂ ಬೆಂಕಿ ತಗಲಿರುವ ಸಂದರ್ಭ ಈ ನಕ್ಷತ್ರದವರ ಜೀವನದಲ್ಲಿ ಒಮ್ಮೆಯಾದರೂ ಸಂಭವಿಸಿರುತ್ತದೆ.

Is Mula Nakshatra lucky or unlucky?

Leave a comment