Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vidura Niti: ತಾಯಿ ಮಹಾಲಕ್ಷ್ಮಿ ಯಾರ ಬಳಿಯು ನೆಲೆಸುವುದಿಲ್ಲ ಎಂದು ವಿದುರರು ಹೇಳಿರುವುದು ಯಾಕೆ? ಹಾಗಾದ್ರೆ ಶ್ರೀಮಂತರ ಬಳಿ ಅಷ್ಟೊಂದು ಹಣ ಇರಲು ಹೇಗೆ ಸಾಧ್ಯ?

ಸಾಕ್ಷಾತ್ ಶ್ರೀಕೃಷ್ಣನೇ ವಿದುರನ ಜ್ಞಾನವನ್ನು ಮೆಚ್ಚಿ ಮನಸೋತಿದ್ದರು. ಇನ್ನು ಪಾಂಡವರ ವಿಜಯಕ್ಕೆ ವಿದುರನು ತೆಗೆದುಕೊಂಡಂತಹ ಕೆಲವು ರಾಜತಾಂತ್ರಿಕತೆಗೆ ಮುಖ್ಯ ಕಾರಣ ಎಂದು ಹಲವಾರು ಪುರಾಣಗಳು ನಂಬುತ್ತವೆ.

Vidura Niti: ಸ್ನೇಹಿತರೆ, ಮಹಾಭಾರತ ಎಂದು ತಕ್ಷಣ ನಾವೆಲ್ಲರೂ ಮೊದಲಿಗೆ ನೆನಪಿಸಿಕೊಳ್ಳುವಂತಹ 5 ಹೆಸರುಗಳೆಂದರೆ ಪಾಂಡವರು, ಕೌರವರು, ಶ್ರೀಕೃಷ್ಣ, ಕರ್ಣ ಮತ್ತು ವಿದುರ. ಈ ಮೊದಲ 4 ಹೆಸರುಗಳು ನಿಮ್ಮೆಲ್ಲರಿಗೂ ಬಹಳ ಹತ್ತಿರದಿಂದ ಪರಿಚಯವಿರುತ್ತದೆ. ಹಲವಾರು ಸೀರಿಯಲ್ಗಳಲ್ಲಿ ಸಿನಿಮಾಗಳಲ್ಲಿ ಇವರ ಪಾತ್ರಗಳಿಗೆ ಬಹಳ ಪ್ರಾಮುಖ್ಯ ನೀಡಲಾಗುತ್ತದೆ.

ಆದರೆ ವಿದುರ ಹೆಸರು ಕೇಳಿರುವುದು ಕೊಂಚ ಕಡಿಮೆಯೇ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಕುರುವಂಶದ ರಾಜರ ಆಸ್ಥಾನದಲ್ಲಿ ಮಂತ್ರಿಯಾಗಿ ತಲೆ ಗಿಟ್ಟಿಸಿಕೊಂಡಿದ್ದರು. ಪ್ರತಿ ವಿಷಯದಲ್ಲಿಯೂ ನಿಖರವಾದ ಜ್ಞಾನವನ್ನು ಹೊಂದಿದ್ದರು. ಅಷ್ಟೇ ಅಲ್ಲದೆ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಹಲವಾರು ಬಾರಿ ಯೋಚಿಸುತ್ತಿದ್ದರು.

ಸಾಕ್ಷಾತ್ ಶ್ರೀಕೃಷ್ಣನೇ ವಿದುರನ ಜ್ಞಾನವನ್ನು ಮೆಚ್ಚಿ ಮನಸೋತಿದ್ದರು. ಇನ್ನು ಪಾಂಡವರ ವಿಜಯಕ್ಕೆ ವಿದುರನು ತೆಗೆದುಕೊಂಡಂತಹ ಕೆಲವು ರಾಜತಾಂತ್ರಿಕತೆಗೆ ಮುಖ್ಯ ಕಾರಣ ಎಂದು ಹಲವಾರು ಪುರಾಣಗಳು ನಂಬುತ್ತವೆ. ಇಂತಹ ವಿದುರ ಇಡೀ ಜಗತ್ತೇ ಒಪ್ಪಿಕೊಳ್ಳುವಂತಹ ಸಂದೇಶವನ್ನು ಸಾರಿದ್ದು, ಅದೇನೆಂದರೆ ಲಕ್ಷ್ಮೀದೇವಿಯು ಯಾರ ಬಳಿಯೂ ನೆನೆಸುವುದಿಲ್ಲ.

ಬದಲಿಗೆ ಆಕೆಯನ್ನು ಬಳಸಿಕೊಂಡವರ ಬಳಿ ಹಣವಿರುತ್ತದೆ ಎಂದಿದ್ದಾರೆ. ಅಷ್ಟಕ್ಕೂ ವಿದುರ ಹೀಗೆ ಹೇಳಲು ಕಾರಣವೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಮೊದಲನೆಯದಾಗಿ ವಿದುರ ನೀತಿಯ ಪ್ರಕಾರ ಒಬ್ಬ ವ್ಯಕ್ತಿ ತನ್ನನ್ನು ತಾನೇ ಒಳ್ಳೆಯ ವ್ಯಕ್ತಿ ಎಂದು ಹೇಳಿಕೊಂಡು ಓಡಾಡುವವನ ಬಳಿ ಲಕ್ಷ್ಮೀದೇವಿ ನಡೆಸುವುದಿಲ್ಲ.

ಇಂತಹ ಜನರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಎಂದು ಸಿಗುವುದಿಲ್ಲ. ಹಣದ ಒದ್ದಾಟದಿಂದಲೇ ಈ ಜನರು ತಮ್ಮ ಜೀವನವನ್ನು ನಡೆಸಬೇಕಾದಂತಹ ಕಠೋರವಾದ ಪರಿಸ್ಥಿತಿ ಇರುತ್ತದೆ. ಇನ್ನು ಎರಡನೆಯದಾಗಿ ಲಕ್ಷ್ಮಿ ತಾಯಿ ಅತಿಯಾದ ದಾನ ಮಾಡಿ ಅದನ್ನು ತೋರಿಸಿ ಕೊಳ್ಳುವವರ ಬಳಿ ಹೋಗುವುದಿಲ್ಲ. ಇದರ ಮುಖ್ಯ ಕಾರಣವೇನೆಂದರೆ ಹೆಚ್ಚು ದಾನಮಾಡುವ ವ್ಯಕ್ತಿಗಳು ಅವನ ಕುಟುಂಬಕ್ಕಾಗಿ ಏನನ್ನು ಉಳಿಸಿಕೊಳ್ಳುವುದಿಲ್ಲ. ಬದಲಿಗೆ ತಾನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಬೇಕೇ ಹೊರತು ಮನೆಯಲ್ಲೆಲ್ಲ ಎಂಬ ಮನೋಭಾವದಲ್ಲಿ ಇರುತ್ತಾನೆ. ಹೀಗಾಗಿ ಲಕ್ಷ್ಮೀದೇವಿಯು ಇಂತಹ ಜನರಿಗೆ ಎಂದಿಗೂ ಒಲಿಯುವುದಿಲ್ಲ.

ಇನ್ನು ಲಕ್ಷ್ಮೀದೇವಿಯು ಅತಿ ಹೆಚ್ಚು ಧೈರ್ಯವನ್ನು ಒಂದಿರುವ ಧೈರ್ಯಶಾಲಿ ವ್ಯಕ್ತಿಯ ಜೊತೆ ಇರುವುದಿಲ್ಲ. ಏಕೆಂದರೆ ಆ ವ್ಯಕ್ತಿ ತನಗೆ ಹೆಚ್ಚು ಧೈರ್ಯವಿದೆ ಎಂಬ ಕಾರಣಕ್ಕೆ ಇಡೀ ಜಗತ್ತನ್ನೇ ಗೆಲ್ಲುವಂತಹ ಮೂರ್ಖ ವಿದ್ಯೆಯನ್ನು ಪ್ರಯತ್ನಿಸುತ್ತಿರುತ್ತಾನೆ. ಹೀಗಾಗಿ ಲಕ್ಷ್ಮಿದೇವಿ ಇಂತಹ ಜನರಿಗೆ ಒಲಿಯುವುದಿಲ್ಲ. ಈ ಮೇಲ್ಕಂಡ ಜನರಲ್ಲಿ ನೀವು ಯಾವ ರೀತಿಯಾದಂತಹ ಜನ?

Why did Vidura say that Mahalakshmi does not reside with anyone?

Leave a comment