Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

ಈ ಸಮಯದಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತದೆ. ಅಧಿವೇಶನದ ಅವಧಿಯಲ್ಲಿ ಒಟ್ಟು 8 ದಿನಗಳನ್ನು ನಿಗದಿ ಮಾಡಲಾಗಿದೆ.

Karnataka Budget 2024: ಇತ್ತೀಚೆಗೆ ಕೇಂದ್ರ ಸರ್ಕಾರದ ಬಜೆ ತ್ ಮಂಡನೆ ನಡೆದು, ಜನರಿಗೆ ಕೆಲವಿ ಉತ್ತಮ ಬೆನಿಫಿಟ್ಸ್ ನೀಡಲಾಗಿದೆ. ಇನ್ನು ಫೆಬ್ರವರಿ 16ರಂದು ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ನಡೆಯಲಿದ್ದು, ರಾಜ್ಯ ಸರ್ಕಾರವು ಜನತೆಗೆ ಯಾವ್ಯಾವ ಅನುಕೂಲಗಳನ್ನು ಮಾಡಿಕೊಡಲಿದೆ ಎಂದು ಕಾದು ನೋಡಬೇಕಿದೆ. 16ನೇ ವಿಧಾನಸಭೆಯ 3ನೇ ಅಧಿವೇಶನ ಇದಾಗಿದ್ದು, ಫೆಬ್ರವರಿ 12 ರಿಂದ 13ರವರೆಗು 10 ದಿನಗಳ ಕಾಲ ನಡೆಯಲಿದೆ. ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಸ್ಪೀಕರ್ ಯುಟಿ ಖಾದರ್ ಅವರು ತಿಳಿಸಿದ್ದಾರೆ..

ಮಾಧ್ಯಮದವರ ಜೊತೆಯಲ್ಲಿ ಯುಟಿ ಖಾದರ್ ಅವರು ಈ ಬಗ್ಗೆ ಮಾತನಾಡಿದ್ದು, 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಮೊದಲನೆಯದಾಗಿ ಕಳೆದ ಅಧಿವೇಶನದಿಂದ ಇಲ್ಲಿಯವರೆಗೆ ಮರಣ ಹೊಂದಿರುಗ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಬಳಿಕ ಅಧಿವೇಶನದ ಬಗ್ಗೆ ರಾಜ್ಯಪಾಲರು ಭಾಷಣ ಮಾಡುತ್ತಾರೆ. ಬಳಿಕ ನಿರ್ಣಯಗಳು ನಡೆಯಲಿದೆ. ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಅದರ ಬಗ್ಗೆ ಚರ್ಚೆಗಳು ನಡೆಯಲಿದೆ..

ಈ ಸಮಯದಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತದೆ. ಅಧಿವೇಶನದ ಅವಧಿಯಲ್ಲಿ ಒಟ್ಟು 8 ದಿನಗಳನ್ನು ನಿಗದಿ ಮಾಡಲಾಗಿದೆ. ಈ ವೇಳೆ ಎಲ್ಲದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸ್ಪೀಕರ್ ಯುಟಿ ಖಾದರ್ ಅವರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಬಜೆಟ್ ವೇಳೆ ಶಾಸಕರು ಹೇಗಿರಬೇಕು ಎನ್ನುವುದರ ಬಗ್ಗೆ IIM ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ತರಬೇತಿ ನೀಡುವುದಾಗಿ ತಿಳಿಸಲಾಗಿದೆ. ಹಾಗೆಯೇ ಅವರು ಅಧಿವೇಶನಕ್ಕೆ ಬಂದಾಗ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.

ಇನ್ನು ಚರ್ಚೆಗಳ ಪ್ರಕಾರದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಬಡಜನರಿಗೆ ಅನುಕೂಲ ಅಗುವಂಥ ಇನ್ನು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎನ್ನಲಾಗಿದೆ. ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳು ಕೂಡ ಅದೇ ರೀತಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದ್ದು, ಎಲ್ಲವೂ ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ..

Budget presentation by the state government on February 16: What people may get in the budget?

KSRLPS Recruitment 2024: ವಿವಿಧ ಹುದ್ದೆಗಳ ನೇಮಕಾತಿ, ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ.

Leave a comment