Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

HSRP Number Plate: ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಹಾಕಿಸಿದ್ದೀರಾ? HSRP ಅಂದರೇನು? ಹಾಕಿಸಿಲ್ಲ ಎಂದರೆ ಕಟ್ಟಬೇಕು ಒಂದು ಸಾವಿರ ದಂಡ.

ಕಾನೂನಿನ 1989ರ ಸಿಎಂವಿಆರ್‌ ಕಾಯ್ದೆಯ ಅನುಸಾರ ಎಲ್ಲಾ ವಾಹನಗಳಲ್ಲಿ HSRP ನಂಬರ್ ಪ್ಲೇಟ್ ಇರಬೇಕು ಎನ್ನುವುದನ್ನು ಕಡ್ಡಾಯಗೊಳಿಸಲಾಗಿದೆ.

HSRP Number Plate: ಕಳೆದ ವರ್ಷವೇ ಸರ್ಕಾರ HSRP ನಂಬರ್ ಪ್ಲೇಟ್ ಬಗ್ಗೆ ಆದೇಶ ನೀಡಿತು. 2019ಕ್ಕಿಂತ ಖರೀದಿ ಮಾಡಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಬೇಕು ಎಂದು ನಿಯಮವನ್ನು ಜಾರಿಗೆ ತಂದು, ಕೊನೆಯ ದಿನಾಂಕವನ್ನು ಸಹ ನಿಗದಿ ಮಾಡಿತ್ತು, ಆದರೆ ಎಲ್ಲರೂ ಈ ಕೆಲಸ ಮಾಡಿಸದ ಕಾರಣ ಕೊನೆಯ ದಿನಾಂಕ ವಿಸ್ತರಣೆ ಆಗಿ, ಈ ವರ್ಷ ಫೆಬ್ರವರಿ 17 HSRP ಅಳವಡಿಸಲು ಕೊನೆಯ ದಿನಾಂಕ ಆಗಿದೆ. ಒಂದು ವೇಳೆ ನಿಮ್ಮ ವಾಹನಕ್ಕೆ HSRP ಹಾಕಿಸಿಲ್ಲ ಎಂದರೆ, 500 ಇಂದ 1000 ವರೆಗು ದಂಡ ಪಾವತಿ ಮಾಡಬೇಕಾಗುತ್ತದೆ..

HSRP ನಂಬರ್ ಪ್ಲೇಟ್ ಎಂದರೇನು?

  • ಇದು ನಿಮ್ಮ ವಾಹನಕ್ಕೆ ಅತಿಹೆಚ್ಚು ಸುರಕ್ಷತೆ ನೀಡುವ ನಂಬರ್ ಪ್ಲೇಟ್ ಆಗಿರುತ್ತದೆ. ಒಮ್ಮೆ HSRP ಪ್ಲೇಟ್ ಅಳವಡಿಸಿದರೆ, ಮತ್ತೆ ಅದನ್ನು ತೆಗೆಯಲು ಆಗುವುದಿಲ್ಲ. ಒಂದು ವೇಳೆ ತೆಗೆಯಬೇಕು ಎಂದರೆ ಲಾಕ್ ಮುರಿದು ಹಾಕಬೇಕಾಗುತ್ತದೆ. ಎಲ್ಲಾ ವಾಹನಗಳಿಗೆ ಹಾಕುವ HSRP ಪ್ಲೇಟ್ ಗಳ ಫಾನ್ಟ್ ಮತ್ತು ಅದರ ಸೈಜ್ ಎಲ್ಲವೂ ಒಂದೇ ಥರ ಇರುತ್ತದೆ. ಎಡಗಡೆ ಬ್ಲೂ ಬಣ್ಣದಲ್ಲಿ ಒಂದು ಚಕ್ರದ ಸಿಂಬಲ್ ಇರುತ್ತದೆ. ನಿಮ್ಮ ವಾಹನಕ್ಕೆ ತಕ್ಕಂಥ ನಂಬರ್ ಪ್ಲೇಟ್ ಆಗಿರುತ್ತದೆ. ಪ್ರೈವೇಟ್ ವೆಹಿಕಲ್ ಗಳ ನಂಬರ್ ಪ್ಲೇಟ್ ಗಳ ಬ್ಯಾಗ್ರೌಂಡ್ ಬ್ಲ್ಯಾಕ್ ಕಲರ್ ಆಗಿರುತ್ತದೆ. ಅದರ ಮೇಲೆ ನಂಬರ್ ಪ್ಲೇಟ್ ಇಂಡಿಯಾ ನಿಶಾನೆ ಇರುತ್ತದೆ.

HSRP ನಂಬರ್ ಪ್ಲೇಟ್ ಕಡ್ಡಾಯ?

  • ಕಾನೂನಿನ 1989ರ ಸಿಎಂವಿಆರ್‌ ಕಾಯ್ದೆಯ ಅನುಸಾರ ಎಲ್ಲಾ ವಾಹನಗಳಲ್ಲಿ HSRP ನಂಬರ್ ಪ್ಲೇಟ್ ಇರಬೇಕು ಎನ್ನುವುದನ್ನು ಕಡ್ಡಾಯಗೊಳಿಸಲಾಗಿದೆ.

ಇಲ್ಲಿ ಯಾವೆಲ್ಲಾ ಮಾಹಿತಿ ಇರುತ್ತದೆ?

  • HSRP ನಂಬರ್ ಪ್ಲೇಟ್ ನಲ್ಲಿ ವೆಹಿಕಲ್ ರಿಜಿಸ್ಟ್ರೇಷನ್ ನಂಬರ್, ನೋಂದಣಿ ಆಗಿರುವ ಪ್ರಾಧಿಕಾರದ ಮಾಹಿತಿ, ಲೇಸರ್ ಬ್ರಾಂಡೆಡ್ ಪರ್ಮನೆಂಟ್ ಐಡಿ ನಂಬರ್. ವಾಹನ ರಿಜಿಸ್ಟರ್ ಆದ ದಿನಾಂಕ ಈ ಎಲ್ಲಾ ಮಾಹಿತಿ ಇರುತ್ತದೆ.

HSRP ಬುಕಿಂಗೆ ಗೆ ಬೇಕಾಗುವ ದಾಖಲೆಗಳು:

  • ವಾಹನದ ರಿಜಿಸ್ಟೇಷನ್ ಸಂಖ್ಯೆ, ಛಾಸಿ ಸಂಖ್ಯೆ, ಇಂಜಿನ್‌ ಸಂಖ್ಯೆ ಇದೆಲ್ಲವೂ ನಿಮ್ಮ ಬೈಕ್ ಡಾಕ್ಯುಮೆಂಟ್ ನಲ್ಲಿ ಸಿಗುತ್ತದೆ. ನಿಮಗೆ ಡೀಲರ್ ಪಾಯಿಂಟ್ ಓಟಿಪಿ ಬರುತ್ತದೆ ಅದಕ್ಕಾಗಿ, ಹಣ ಪಾವತಿಯ ರಿಸಿಪ್ಟ್ ಪಡೆಯಲು ಫೋನ್ ನಂಬರ್ ಮತ್ತು ಇಮೇಲ್ ಐಡಿ ಬೇಕು.

HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ವಿಧಾನ:

  1. www.siam.in ಅಥವಾ https://transport.karnataka.gov.in ಈ ಎರಡರಲ್ಲಿ ಒಂದು ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ.
  2. ಹೋಮ್ ಪೇಜ್ ನಲ್ಲಿ Book HSRP ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಬಳಿಕ ವಾಹನ ತಯಾರಿಕಾ ಕಂಪನಿಯನ್ನು ಸೆಲೆಕ್ಟ್ ಮಾಡಿ.
  3. ಈಗ ವಾಹನದ ಬೇಸಿಕ್ ಡೀಟೇಲ್ಸ್ ಫೀಲ್ ಮಾಡಿ.
  4. ಈಗ ನಿಮ್ಮ ಅಗತ್ಯಕ್ಕೆ ತಕ್ಕಂತೆ ಡೀಲರ್ ಲೋಕೇಶನ್ ಆಯ್ಕೆ ಮಾಡಿ.
  5. HSRP ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ.

ಆಕಸ್ಮಾತ್ ನಿಗದಿಯಾದ ದಿವಸ ಹೋಗಲು ಆಗಲಿಲ್ಲ ಎಂದರೆ?

  • HSRP ನಂಬರ್ ಪ್ಲೇಟ್ ಹಾಕಿಸಲು ದಿನಾಂಕ ಫಿಕ್ಸ್ ಮಾಡಿ, ಆ ದಿನ ಹೋಗಲು ಆಗಲಿಲ್ಲ ಎಂದರೆ, ಹೊಸದಾಗಿ ಅರ್ಜಿ ಸಲ್ಲಿಸಿ, ದಿನಾಂಕ ನಿಗದಿ ಮಾಡಿಕೊಳ್ಳಬಹುದು.

Got an HSRP number plate on your vehicle? What is HSRP?

Karnataka Job Fair: ರಾಜ್ಯದಲ್ಲಿ ನಡೆಯಲಿದೆ ದೊಡ್ಡ ಉದ್ಯೋಗ ಮೇಳ! ಹೊಸ ಹೆಲ್ಪ್ ಲೈನ್ ಶುರು!

Leave a comment