Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Tirupati Facts: ತಿರುಪತಿ ತಿಮ್ಮಪ್ಪನನ್ನು ಭಕ್ತರು ಗೋವಿಂದ ಎಂದು ಕರೆಯಲು ಕಾರಣವೇನು ಗೊತ್ತಾ? ಹಸುವಿನ ಸಗಣಿಯಿಂದ ಗೋವಿಂದಾ ಎಂಬ ನಾಮಸ್ಮರಣೆ ಹುಟ್ಟಿಕೊಳ್ತಾ??

ಅದರಂತೆ ಕೈಲಾಸಕ್ಕೆ ಮರಳಿದಂತಹ ಶಿವನು ತನ್ನ ಪರಮ ಭಕ್ತನಾದ ಬೃಂಗಿಯನ್ನು ಕರೆದು ನಾಳೆ ವಿಷ್ಣು ದೇವನು ಕೈಲಾಸಕ್ಕೆ ಬರುತ್ತಿದ್ದಾನೆ.

Tirupati Facts: ಸ್ನೇಹಿತರೆ, ಹೀಗೆ ಒಮ್ಮೆ ಪರಮೇಶ್ವರನಾದ ಶಿವನು ವಿಷ್ಣುದೇವನ ವೈಕುಂಟಕ್ಕೆ ಹೋಗಿ ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಕಾಲ ಕಳೆಯುತ್ತಾ ಮರಳಿ ವಾಪಸ್ ತನ್ನ ಕೈಲಾಸ ಸೇರುವ ಸಂದರ್ಭದಲ್ಲಿ ವಿಷ್ಣು ಶಿವನ ಬಳಿಬಂದು ನಿನ್ನ ಕೈಲಾಸವನ್ನು ಮೂರುಲೋಕದ ಜನರು ಹೊಗಳುತ್ತಾರೆ, ಒಮ್ಮೆಯದರು ಕೈಲಾಸ ನೋಡಬೇಕು ಎಂಬ ಮಹದಾಸೆ ಇಂದಿಗೂ ಸಹ ಹಲವರಲ್ಲಿದೆ.

ಆದರೆ ನನಗೂ ಕೂಡ ನಿನ್ನ ಕೈಲಾಸವನ್ನು ನೋಡಲು ಸಮಯವೇ ಕೂಡಿ ಬರಲಿಲ್ಲವಲ್ಲ ಎಂದು ಶಿವನೊಡನೆ ಬೇಸರಗೊಂಡಾಗ ಶಿವ ಅದಕ್ಕೇನಂತೆ ನಾಳೆ ಮುಂಜಾನೆ ನಮ್ಮ ಕೈಲಾಸಕ್ಕೆ ಬರುವ ಎಲ್ಲಾ ತಯಾರಿ ಮಾಡಿಕೋ ಎಂದು ವಿಷ್ಣು ದೇವನನ್ನು ಕೈಲಾಸಕ್ಕೆ ಆಮಂತ್ರಿಸುತ್ತೇನೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಅದರಂತೆ ಕೈಲಾಸಕ್ಕೆ ಮರಳಿದಂತಹ ಶಿವನು ತನ್ನ ಪರಮ ಭಕ್ತನಾದ ಬೃಂಗಿಯನ್ನು ಕರೆದು ನಾಳೆ ವಿಷ್ಣು ದೇವನು ಕೈಲಾಸಕ್ಕೆ ಬರುತ್ತಿದ್ದಾನೆ. ಹೀಗಾಗಿ ಏನೆಲ್ಲ ಸಿದ್ಧತೆಗಳು ಬೇಕಾಗುತ್ತದೋ ಅವನ್ನೆಲ್ಲ ಮಾಡಿಕೋ ಎಂದು ಆದೇಶಿಸುತ್ತಾನೆ. ವೈಭವ ವೈಡೂರ್ಯಗಳಿಂದ ಕೂಡಿರುವಂತಹ ವೈಕುಂಟ ಲೋಕವನ್ನು ಬಿಟ್ಟು ವಿಷ್ಣುದೇವರು ಕೈಲಾಸಕ್ಕೆ ಬರುತ್ತಿದ್ದಾರೆ ಅವರನ್ನು ಹೇಗೆ ಆಮಂತ್ರಿಸುವುದು ಎಂಬ ಯಾವುದೇ ಉಪಯೋಗ ಭೃಂಗಿಯ ತಲೆಗೆ ಹೊಳೆಯದೆ ಶಿವನಿಂದ ಶಾಪಗೀಡಾಗಬೇಕಾಗುತ್ತದೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿರುತ್ತಾನೆ.

ಇದನ್ನು ಓದಿ:- ಪದೇ ಪದೇ ಮನೆಯಲ್ಲಿ ಹಾಲು ಉಕ್ಕಿ ಚೆಲ್ಲುತ್ತಿದ್ದರೆ ಶುಭವೋ ಅಥವಾ ಅಶುಭವೋ ಇದರ ಅರ್ಥವೇನು ಗೊತ್ತೇ??

ಆಗ ಅವನ ಮುಂದೆ ಬಂದಂತಹ ಗೋಮಾತೆಯೊಂದು ಅವನ ಎದುರಲ್ಲಿಯೇ ಸಗಣಿ ಹಾಕಿ ಬಿಡುತ್ತದೆ. ಇದನ್ನು ಗಮನಿಸಿದಂತಹ ಬೃಂಗಿ ಯಾಕೆ ನಾನು ಈ ಸಗಣಿಯಿಂದ ಇಡೀ ಕೆಲಸವನ್ನು ಸ್ವಚ್ಛಗೊಳಿಸಿ ಇದನ್ನು ಸಾರಿ ಸ್ತ್ರೀಯರ ಕೈಯಲ್ಲಿ ರಂಗೋಲಿ ಬಿಡಿಸಬಾರದು ಎಂದು ಯೋಚನೆ ಮಾಡುತ್ತಾನೆ. ಅದರಂತೆ ತನ್ನ ಆಶ್ರಮದಲ್ಲಿದ್ದಂತಹ ಹೆಣ್ಣುಮಕ್ಕಳಿಗೆ ಒಂದೊಂದು ಕೆಲಸವನ್ನು ಕೊಟ್ಟು ಇಡೀ ಕೈಲಾಸವನ್ನು ಸಗಣಿಯಿಂದ ಸಾರಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಟ್ಟು ಹೂಗಳಿಂದ ಅಲಂಕಾರ ಮಾಡುತ್ತಾರೆ.

ಮುಂಜಾನೆ ಬೆಳಗ್ಗೆ ಅಲ್ಲಿಗೆ ಬಂದಂತಹ ಶ್ರೀವಿಷ್ಣು ಸಗಣಿಯ ಪರಿಮಳದಿಂದ ಮಗ್ನನಾಗಿ ಶಿವನ ಬಳಿ ಎಲ್ಲಿಯೂ ಬಾರದಂತಹ ಪರಿಮಳ ಒಂದು ನಿನ್ನ ಕೈಲಾಸದಿಂದ ಬರುತ್ತಿದೆ ಇದರಿಂದ ನಾನು ಬಹಳ ಸಂತೋಷವಾಗಿದ್ದೇನೆ. ಇದಕ್ಕೆ ಕಾರಣವೇನು ಶಿವ ಪರಿಮಳ ಎಲ್ಲಿಂದ ಬರುತ್ತಿದೆ ಎಂದು ಕೇಳುತ್ತಾನೆ. ಆಗ ಶಿವನು ಭೃಂಗಿಯ ಕಡೆಗೆ ಮುಖ ಮಾಡಿ ನೋಡಿದಾಗ ಬೃಂಗಿ ತನು ಮಾಡಿದಂತಹ ಎಲ್ಲಾ ಕೆಲಸವನ್ನು ಒಂದೊಂದಾಗಿ ಸ್ಪಷ್ಟವಾಗಿ ತಿಳಿಸುತ್ತಾನೆ ಇದೆಲ್ಲವನ್ನು ಕೇಳಿದಂತಹ ಶಿವನು ಶ್ರೀ ವಿಷ್ಣು ಕೈಲಾಸಕ್ಕೆ ಬಂದ ಕಾರಣ ಇಂತಹ ಸುಗಂಧ ಹೊರಹೊಮ್ಮುತ್ತಿದೆ.

ಇದನ್ನು ಓದಿ:- ದೇವರ ಫೋಟೋದಿಂದ ಹೂವು ಪದೇ ಪದೇ ಕೆಳಗೆ ಬೀಳುತ್ತಿದ್ದರೆ ಇದರ ಅರ್ಥವೇನು ಗೊತ್ತೇ, ಇದು ಶುಭವೋ ಅಥವಾ ಅಶುಭವೋ ??

ಹೀಗಾಗಿ ಗೋವಿನಿಂದ ಬಂದಂತಹ ವಿಂದ ಅಂದರೆ ಸಗಣಿಯಿಂದ ನಮ್ಮ ಕೈಲಾಸ ಇಷ್ಟೊಂದು ಸುಮಧುರವಾಗಿ ಸುಗಂಧವನ್ನು ಬೀರುತ್ತಿದೆ. ಮುಂದೆ ವಿಷ್ಣು ತನ್ನ ಎಂಟನೇ ಅವತಾರದಿಂದ ಭೂಲೋಕದಲ್ಲಿ ನಲೆಸುವಾಗ ಗೋವಿಂದ ಎಂದೇ ಪ್ರಸಿದ್ಧನಾಗಲಿ ಗೋವಿಂದ ಎಂದರೆ ಗೋವಿನಿಂದ ಬಂದಂತಹ ವಿಂದ (ಸಗಣಿ) ಎಂದರ್ಥ. ಹೀಗಾಗಿ ಭೂಲೋಕದಲ್ಲಿ ವಿಷ್ಣು ತಿಮ್ಮಪ್ಪನ ಅವತಾರದಲ್ಲಿ ಜನ್ಮತಾಳಿದಾಗ ಭಕ್ತಾದಿಗಳು ಅವನನ್ನು ಪ್ರೀತಿಯಿಂದ ಗೋವಿಂದ ಎಂದು ಜಪಿಸುತ್ತಾರೆ.

Do you know why devotees call Tirupati Thimmappa as Govinda?

Leave a comment