ದೇವರ ಫೋಟೋದಿಂದ ಹೂವು ಪದೇ ಪದೇ ಕೆಳಗೆ ಬೀಳುತ್ತಿದ್ದರೆ ಇದರ ಅರ್ಥವೇನು ಗೊತ್ತೇ, ಇದು ಶುಭವೋ ಅಥವಾ ಅಶುಭವೋ ??
Dharmika: ಎಷ್ಟೋ ಜನರ ಮನೆಯಲ್ಲಿ ಪೂಜೆ ಮಾಡುವುದಕ್ಕೆ ಶುರು ಮಾಡಿದ ತಕ್ಷಣವೇ ಹೂವು ಕೆಳಗೆ ಬೀಳುವುದು ಅಥವಾ ಪೂಜೆ ಮುಗಿಯುವುದರ ಅಂತ್ಯದೊಳಗೆ ಹೂವು ಕೆಳಗೆ ಬೀಳುವುದು ಮತ್ತು ಯಾವ ರೀತಿಯ ಹೂವು ಮುಡಿಸಬೇಕು ಮತ್ತು ಕೆಳಗೆ ಬಿದ್ದಂತಹ ಹೂವುಗಳನ್ನು ಏನು ಮಾಡಬೇಕು?? ಎಲ್ಲಾ ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಇರುವ ಹಾಗಿದ್ಧರೆ ಇಂದಿನ ದಿನ ಅವೆಲ್ಲವುಗಳಿಗೂ ಉತ್ತರವನ್ನು ತಿಳಿದುಕೊಳ್ಳೋಣ.
ಮೊದಲಿಗೆ ದೇವರಿಗೆ ಇಟ್ಟಂತಹ ಹೂವು ಒಂದು ವೇಳೆ ಕೆಳಗೆ ಬಿದ್ದರೆ ಅದನ್ನು ನಾವು ದೇವರ ಪ್ರಸಾದ ಎಂದು ಸ್ವೀಕರಿಸಬೇಕಾಗುತ್ತದೆ. ಹೇಗೆ ದೇವಸ್ಥಾನದಲ್ಲಿ ನಾವು ಏನಾದರೂ ಸಹ ಒಂದು ಇಷ್ಟಾರ್ಥ ಆಗಬೇಕು ಅಂದುಕೊಂಡಾಗ ಹೂವು ಕೆಳಗೆ ಬಿದ್ದಾಗ ಅದನ್ನು ಹೇಗೆ ಪ್ರಸಾದವೆಂದು ಸ್ವೀಕರಿಸುತ್ತೇವೆಯೋ ಅದೇ ರೀತಿ ಮನೆಯಲ್ಲಿ ಕೂಡ ಹಾಗೆಯೇ ಕೆಳಗೆ ಬಿದ್ದಂತಹ ಹೂವು ಪ್ರಸಾದವೆಂದು ಸ್ವೀಕರಿಸಬೇಕು.
ಹಾಗಾದರೆ ಈ ರೀತಿ ಬಿದ್ದಂತ ಹೂವನ್ನು ಏನು ಮಾಡಬೇಕು ?? ಮತ್ತೆ ಮುಡಿಸಬಹುದಾ ಅಥವಾ ಮುಡಿಸಬಾರದಾ?? ಈ ರೀತಿ ಕೆಳಗೆ ಬಿದ್ದಂತಹ ಹೂವನ್ನು ತೆಗೆದುಕೊಂಡು ನಮ್ಮ ಬಳಿ ಇಟ್ಟುಕೊಳ್ಳಬೇಕು. ಅದು ಬಾಡಿದ ನಂತರ ಯಾವುದೇ ಕಾರಣಕ್ಕೂ ನಮ್ಮ ಬಳಿ ಇಟ್ಟುಕೊಳ್ಳುವುದಾಗಲಿ ಅಥವಾ ತುಳಿಯುವ ಜಾಗದಲ್ಲಿ ಹಾಕುವುದಾಗಲಿ ಮಾಡಬಾರದು. ತಕ್ಷಣವೇ ಅದು ಮನೆಯ ಬಳಿ ಇರುವ ತುಳಸಿ ಕಟ್ಟೆಗೋ ಅಥವಾ ಯಾವುದಾದರೂ ಹಸಿರು ಮರದ ಕೆಳಗೋ ಅದನ್ನು ಇಡಬೇಕು.
ದೇವರಿಗೆ ಎಂದಿಗೂ ಸಹ ಸುಗಂಧ ಭರಿತವಾದಂತಹ ಹೂವುಗಳನ್ನೇ ಮುಡಿಸಬೇಕು. ಅಷ್ಟೇ ಅಲ್ಲದೆ ಸಂಪಿಗೆ ಹೂವು, ಗುಲಾಬಿ ಹೂವು, ಮಲ್ಲಿಗೆ ಹೂವು ಮತ್ತು ಈ ರೀತಿಯಾದಂತಹ ಹೂವುಗಳನ್ನು ವಾಸನೆ ನೋಡಿ ದೇವರಿಗೆ ಮುಡಿಸಬಾರದು ಅಷ್ಟೇ ಅಲ್ಲದೆ ಕೆಲವರ ಮನೆಯಲ್ಲಿ ದೇವರಿಗೆ ಆಗಲಿ ಅಥವಾ ದೇವರು ಮನೆಯ ಬಾಗಿಲಿಗೆ ಆಗಲಿ ಪ್ಲಾಸ್ಟಿಕ್ ಹೂಗಳನ್ನು ಹಾಕಿರುತ್ತಾರೆ. ಆದರೆ ಇದು ನಕಾರಾತ್ಮಕ ಪ್ರಭಾವವನ್ನು ಮನೆಯ ಮೇಲಿರುವವರು ಮೇಲೆ ಬೀಳುತ್ತದೆ.
ದೇವರಿಗೆ ಎಂದಿಗೂ ಸಹ ಸುಗಂಧ ಭರಿತವಾದಂತಹ ಹೂಗಳನ್ನೇ ಮುಡಿಸಬೇಕು. ನಂತರ ದೇವರಿಗೆ ಮುಡಿಸಿದಂತಹ ಹೂವು ಬಲಭಾಗದಿಂದ ಬಿದ್ದರೆ ಶ್ರೇಷ್ಠವಾಗಿರುತ್ತದೆ ಮತ್ತು ನೀವು ಅಂದುಕೊಂಡಂತಹ ಕೆಲಸ ನೆರವೇರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಎಡ ಭಾಗದಲ್ಲಿ ಬಿದ್ದಂತಹ ಹೂವು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.
ದೇವರಿಗೆ ಮುಟ್ಟಾದ ಹೆಣ್ಣು ಮಕ್ಕಳು ಮುಟ್ಟಿದಂತಹ ಹೂವುಗಳನ್ನು ಮೂಡಿಸಬಾರದು ಒಂದು ವೇಳೆ ನಿಮಗೆ ಗೊತ್ತಿದ್ದೂ ಅಥವಾ ಗೊತ್ತಿಲ್ಲದೇ ಈ ರೀತಿ ಮಾಡಿದರೆ ಅದು ತಪ್ಪಾಗುವುದಿಲ್ಲ ಆದರೆ ತಿಳಿದು ತಿಳಿದು ಸಹ ನಾವು ಈ ತಪ್ಪನ್ನು ಮಾಡಬಾರದು. what if flower fall from god photo.
ಇದನ್ನು ಓದಿ:-