Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Rajkumar-Lokesh: ಅಣ್ಣಾವ್ರೊಂದಿಗೆ ಈ ಖ್ಯಾತನಟ ಕೊನೆಗೂ ನಟಿಸಲು ಆಗಲೇ ಇಲ್ಲ..! ಕಾರಣ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೇ ಕಂಡ್ರಿ!!

ಇನ್ನು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿಲ್ಲವಾದರೂ ಒಂದೇ ನಾಟಕದಲ್ಲಿ ಆಸ್ತಿಕ-ನಾಸ್ತಿಕರಾಗಿ ಜನರಿಗೆ ಮತ್ತು ಅಭಿಮಾನಿಗಳಿಗೆ ಸಂತೃಪ್ತಿಯನ್ನು ನೀಡಿದ್ದು ಇದೆ.

Get real time updates directly on you device, subscribe now.

Rajkumar-Lokesh: ಸ್ನೇಹಿತರೆ, ಡಾಕ್ಟರ್ ರಾಜಕುಮಾರ್ ತಮ್ಮ ಭೂತಪೂರ್ವ ನಟನೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿ ಚಂದನವನದ ಶ್ರೇಷ್ಠ ಕಲಾವಿದರಾಗಿ, ಕನ್ನಡಿಗರ ಆರಾಧ್ಯ ದೈವರಾಗಿದ್ದಾರೆ. ಹಾಗೆ ಮತ್ತೊಬ್ಬರು ತಮ್ಮೊಳಗೆ ಇರುವಂತಹ ಸಹನೆಯಲ್ಲಿ ನಟನೆ ಮಾಡುತ್ತಾ ಕನ್ನಡಿಗರ ಮನಸ್ಸಿನಲ್ಲಿ ಭುಜಂಗಯ್ಯ ಗೆಂಡೆತಿಮ್ಮನಾಗಿ ಸ್ಥಾನ ಪಡೆದುಕೊಂಡ ಲೋಕೇಶ್.

ಹೌದು ಫ್ರೆಂಡ್ಸ್ ಇವರಿಬ್ಬರನ್ನು ನಮ್ಮ ಕನ್ನಡ ಚಿತ್ರರಂಗದ ಆಧಾರಸ್ಥಂಭ ಎಂದರೆ ತಪ್ಪಾಗಲಾರದು. ಹೀಗಿರುವಾಗಲೂ ಇವರಿಬ್ಬರನ್ನು ಒಂದೇ ಸಿನಿಮಾದ ಮೂಲಕ ನೋಡಬೇಕೆಂಬುದು ಆಗಿನಕಾಲದ ಅದೆಷ್ಟೋ ಪ್ರೇಕ್ಷಕರಿಗೆ ಇದ್ದಂತಹ ಹುಚ್ಚು ಆಸೆ. ಆದರೆ ಇಂತಹ ಅದ್ಭುತ ಅವಕಾಶ ಕೂಡಿ ಬರಲೇ ಇಲ್ಲ. ಹೌದು ಲೋಕೇಶ್ ಮತ್ತು ಡಾಕ್ಟರ್ ರಾಜಕುಮಾರ್ ಒಂದೇ ಒಂದು ಬಾರಿಯಾದರೂ ಒಂದೇ ಸಿನಿಮಾದಲ್ಲಿ ನಟಿಸಲಾಗಲಿಲ್ಲ ಎಂಬುದು ವಿಪರ್ಯಾಸ.

ಇದೆಲ್ಲವನ್ನು ಗಮನಿಸಿದಂತಹ ವೀಕ್ಷಕರು ಅಣ್ಣಾವ್ರು ಮತ್ತು ಲೋಕೇಶ್ ಅವರ ನಡುವೆ ಏನು ಸರಿ ಇಲ್ಲ, ಇವರಿಬ್ಬರ ಮಧ್ಯೆ ವೈಮನಸ್ಸಿರಬೇಕು ಆದಕಾರಣ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬ ಊಹಾಪೋಹಗಳನ್ನು ಸಮಾಜದಲ್ಲಿ ಎಬ್ಬಿಸುವ ಕೆಲಸವನ್ನು ಮಾಡಿದರು. ಆದರೆ ಇದ್ಯಾವುದಕ್ಕೂ ಅವರ ಮಧ್ಯೆ ಸ್ಥಳವೇ ಇರಲಿಲ್ಲ. ಬದಲಿಗೆ ಸ್ನೇಹ ಸಂಬಂಧವೆಂಬುದು ಇವರಿಬ್ಬರ ಮಧ್ಯೆ ಹೇರಳವಾಗಿತ್ತು. ಲೋಕೇಶ್ ಅವರು ತಮ್ಮ ಸಕುಟುಂಬದೊಂದಿಗೆ ಅಣ್ಣಾವ್ರ ಮನೆಗೆ ಹೋಗುತ್ತಿದ್ದರು.

Rajkumar-Lokesh
Why Lokesh didn’t act with Dr.rajkumar what was the reason behind this

ಅದರಂತೆ ಅಣ್ಣಾವ್ರು ಕೂಡಾ ಗಿರಿಜಮ್ಮ ಮಾಡುವಂತಹ ಅಡುಗೆಯನ್ನು ಸವಿಯುತ್ತಿದ್ದರು. ಆದರೆ ಆ ಕಾಲದಲ್ಲಿ ಇವರಿಬ್ಬರು ಆಯ್ದುಕೊಳ್ಳುತ್ತಿದ್ದ ಪಾತ್ರಗಳು ಮತ್ತು ಇಬ್ಬರಿಗೂ ಕೂಡ ಸರಿಸಮಾನವಾದ ಪಾತ್ರಗಳು ಸಿಗದೇ ಹೋದದ್ದು ಕೂಡ ಕಾರಣವಾಗಿರಬಹುದು. ಹಾಗೆ ನೋಡಿದರೆ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗದೇ ಇದ್ದರೂ ಕೂಡ ನಾಟಕವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಇನ್ನು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿಲ್ಲವಾದರೂ ಒಂದೇ ನಾಟಕದಲ್ಲಿ ಆಸ್ತಿಕ-ನಾಸ್ತಿಕರಾಗಿ ಜನರಿಗೆ ಮತ್ತು ಅಭಿಮಾನಿಗಳಿಗೆ ಸಂತೃಪ್ತಿಯನ್ನು ನೀಡಿದ್ದು ಇದೆ. ರಾಜಣ್ಣನ ಸಿನಿರಂಗದ ಹಾದಿ ಹೇಗೆ ಸುಪ್ಪತ್ತಿಗೆಯಲ್ಲಿ ಇರಲಿಲ್ಲವೋ ಹಾಗೇನೆ ಲೋಕೇಶ್ ಅವರ ಸಿನಿ ಬದುಕು ಕೂಡ ಸುಖದ ಸುಪ್ಪತ್ತಿಗೆಯಲ್ಲಿ ಮುಂದುವರೆಯಲಿಲ್ಲ. ಹೀಗೆ ಇವರಿಬ್ಬರ ಸಿನಿಪಯಣ ಬೇರೆಬೇರೆ ದಾರಿಯಲ್ಲಿ ಸುಗಮವಾಗಿ ಸಾಗಿತ್ತು. ಆದರೆ ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಲಿಲ್ಲ ಎಂಬುದು ದುರಾದೃಷ್ಟವೇ ಸರಿ.

Why Lokesh didn’t act with Dr. Rajkumar What was the reason behind this?

Get real time updates directly on you device, subscribe now.

Leave a comment