Vinod Raj: ಅಂದು ವಿನೋದ್ ಅವರ ಹೆಸರಿಗೆ ದ್ವಾರಕೀಶ್ “ರಾಜ್” ಎಂದು ಸೇರಿಸಿದ್ದು ಯಾಕೆ?? ಇದಕ್ಕೆ ರಾಜಕುಟುಂಬದ ಪ್ರತಿಕ್ರಿಯೆ ಹೇಗಿತ್ತು?!
ಇದರಿಂದ ಬೇಸರಗೊಂಡಂತಹ ವಿಷ್ಣುವರ್ಧನ್ ಮುಂದೆಂದೂ ದ್ವಾರಕೇಶ್ ಅವರೊಂದಿಗೆ ಸಿನಿಮಾ ಮಾಡಲು ಬಯಸುವುದಿಲ್ಲ.
Vinod Raj: ಸ್ನೇಹಿತರೆ, ಆ ಒಂದು ಕಾಲಘಟ್ಟದಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ದ್ವಾರಕೇಶ್ ಅವರ ಸ್ನೇಹ ಬಹಳ ಸುಗಮವಾಗಿತ್ತು. ಮೇಯರ್ ಮುತ್ತಣ್ಣ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅಭಿನಯ ಕೂಡ ಮಾಡಿದ್ದರು. ಆದರೆ ಕುಡಿದ ಮತ್ತಿನಲ್ಲಿ ಒಮ್ಮೆ ದ್ವಾರ್ಕೇಶ್ ಅವರು ಸಿನಿಮಾ ಗೆಲ್ಲೋದಕ್ಕೆ ದೊಡ್ಡವರ ಜೊತೆ ಮಾಡಬೇಕು ಅಂತ ಏನಿಲ್ಲ, ಸಿನಿಮಾದಲ್ಲಿ ಸರಿಯಾಗಿ ಅಭಿನಯಿಸುವ ಕಲೆ ಇರಬೇಕು ಎಂಬ ಹೇಳಿಕೆ ನೀಡಿ ಬಿಟ್ಟಿದ್ದರು. ಈ ಮಾತುಗಳು ಬಹಳ ವೈರಲ್ ಕೂಡ ಆಗಿತ್ತು.
ಈ ಕಾರಣದಿಂದ ಮನಸ್ಸಿಗೆ ಬೇಸರ ಮಾಡಿಕೊಂಡಂತಹ ಅಣ್ಣಾವ್ರು ಮುಂದೆಂದೂ ದ್ವಾರಕೇಶ್ ಅವರೊಂದಿಗೆ ಸಿನಿಮಾ ಮಾಡಲು ಹೋಗುವುದಿಲ್ಲ. ಅನಂತರ ಸಾಹಸಸಿಂಹ ವಿಷ್ಣುವರ್ಧನ್ ಅವರೊಡನೆ ಕಿಟ್ಟುಪುಟ್ಟು, ಸಿಂಗಪುರದಲ್ಲಿ ರಾಜ ಕುಳ್ಳ ಸೇರಿದಂತೆ ಇನ್ನಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರೊಂದಿಗೆ ನಿರ್ದೇಶನ ನಿರ್ಮಾಣ ಕೂಡ ಮಾಡುತ್ತಾರೆ. ಈ ಕಾರಣದಿಂದ ಇವರಿಬ್ಬರ ಸ್ನೇಹ ಸಂಬಂಧ ಬಹು ಗಟ್ಟಿಯಾಗಿ ಬೆಳೆಯುತ್ತದೆ. ಆದರೆ ಇದ್ದಕ್ಕಿದ್ದ ಹಾಗೆ ಮಾಧ್ಯಮದ ಮುಂದೆ ಮಾತನಾಡುವಾಗ ಒಮ್ಮೆ ವಿಷ್ಣು ಇಷ್ಟೆಲ್ಲಾ ಸಕ್ಸಸ್ ಕಂಡಿದ್ದಾನೆ ಎಂದರೆ ಅದರಲ್ಲಿ ನನ್ನ ಪಾಲು ಹೇರಳವಾಗಿದೆ ಎಂಬ ಹೇಳಿಕೆ ನೀಡಿ ಬಿಟ್ಟಿರುತ್ತಾರೆ.
ಇದರಿಂದ ಬೇಸರಗೊಂಡಂತಹ ವಿಷ್ಣುವರ್ಧನ್ ಮುಂದೆಂದೂ ದ್ವಾರಕೇಶ್ ಅವರೊಂದಿಗೆ ಸಿನಿಮಾ ಮಾಡಲು ಬಯಸುವುದಿಲ್ಲ. ಆದ್ರೆ ದ್ವಾರ್ಕೇಶ್ ಚಿತ್ರರಂಗದಲ್ಲಿ ಸೋತಾಗ ಅವರ ಸಹಾಯಕ್ಕೆ ನಿಂತದ್ದು ವಿಷ್ಣು ದಾದಾ ಮಾತ್ರ. ಇದನ್ನು ಹಲವರು ಮಾಧ್ಯಮಗಳಲ್ಲಿ ನಮ್ಮ ಕನ್ನಡದ ಕುಳ್ಳನೆ ಹಂಚಿಕೊಂಡಿದ್ದಾರೆ. ಇನ್ನು ಶಂಕರ್ ನಾಗ್ ಅವರೊಟ್ಟಿಗೆ ಸಿನಿಮಾ ಮಾಡುವಾಗ ಅವರನ್ನು ದ್ವಾರಕೀಶ್ ಅವಮಾನ ಮಾಡಿಬಿಟ್ಟಿರುತ್ತಾರೆ. ಈ ಕಾರಣದಿಂದಾಗಿ ಕರಾಟೆ ಕಿಂಗ್ ಶಂಕರ್ ನಾಗ್ ಕೂಡಾ ದ್ವಾರಕೀಶ್ ಅವರೊಂದಿಗೆ ಸಿನಿಮಾ ಮಾಡಲು ನಿರಾಕರಿಸಿ ಬಿಡುತ್ತಾರೆ.
ಹೊಸದೇನಾದರೂ ಮಾಡಬೇಕಲ್ಲ ಎಂದು ಯೋಚಿಸಿ ಒಂದು ಒಳ್ಳೆ ಕಥೆ ರೆಡಿ ಮಾಡಿದಾಗ ದ್ವಾರಕೀಶ್ ಅವರ ಕಣ್ಣಿಗೆ ಬೀಳುವುದು ಲೀಲಾವತಿ ಅವರ ಮಗ ವಿನೋದ್. ಹೌದು ಆ ಕಾಲಘಟ್ಟದಲ್ಲಿ ವಿನೋದ್ ರಾಜ್ ಕೆಲವು ಸಿನಿಮಾಗಳ ಮೂಲಕ ಗುರುತಿಸಿ ಕೊಂಡಿರುತ್ತಾರೆ. ಜೊತೆಗೆ ಡ್ಯಾನ್ಸ್ ಮೂಲಕವೇ ಫೇಮಸ್ ಸಹ ಆಗಿರುತ್ತಾರೆ. ಹೀಗಾಗಿ ಅವರನ್ನು ಇಟ್ಟುಕೊಂಡು ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಸಿನಿಮಾ ತೆಗೆದ ದ್ವಾರಕೀಶ್ ಅವರು ವಿನೋದ್ ಎಂಬ ಹೆಸರನ್ನು ವಿನೋದ್ ರಾಜ್ ಎಂದು ಬದಲಿಸಿ ಬಿಡುತ್ತಾರೆ.
ಸಿನಿಮಾ ಸಕ್ಸಸ್ ಆಗುವುದರ ಜೊತೆಗೆ ಇವರ ಹೆಸರು ಕೂಡ ಬಾರಿ ವೈರಲ್ ಆಗುತ್ತದೆ. ಹೌದು ವಿನೋದ್ ಅವರು ಯಾಕೆ ರಾಜಣ್ಣನ ಹೆಸರನ್ನು ಸೇರಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಎಂಥದ್ದು ಲೀಲವತಿ ಅವರ ಗಂಡ ಯಾರು ಎಂಬ ಚರ್ಚೆ ಸಮಾಜದಲ್ಲಿ ಜೋರಾಗಿಯೇ ಶುರುವಾಗುತ್ತದೆ. ಅಲ್ಲದೆ ವಿನೋದ್ ರಾಜ್ ಅವರ ಸಿನಿಮಾ ಎಲ್ಲೆಲ್ಲಿ ಓಡುತ್ತಿತ್ತೋ, ಆ ಥಿಯೇಟರ್ಗಳನ್ನೆಲ್ಲ
ಮುಚ್ಚುವ ಕೆಲಸ ಕೂಡ ನಡೆಯುತ್ತದೆ. ಹೀಗೆ ದ್ವಾರಕೀಶ್ ಅವರು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ರಾಜ್ ಕುಟುಂಬದವರು ಹಾಗೂ ಲೀಲಾವತಿಯವರ ಮನೆಯವರು ಇರಿಸುಮುರಿಸನ್ನು ಅನುಭವಿಸಬೇಕಾಗುತ್ತದೆ. ಈ ಕಾರಣದಿಂದಲೇ ಲೀಲಾವತಿಯವರು ತನ್ನ ಮಗನ ತಂದೆ ಯಾರು ಎಂಬುದನ್ನು ಇಂದಿಗೂ ಕೂಡ ಎಲ್ಲಿಯೂ ರಿವಿಲ್ ಮಾಡಿಲ್ಲ. ಈ ಘಟನೆಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
Why did Dwarkeesh add “Raj” to Vinod’s name then?