Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sindhu Menon: ನಟಿ ಸಿಂಧು ಮೆನನ್ ಈಗ ಎಲ್ಲಿದ್ದಾರೆ ಮತ್ತು ಹೇಗಿದ್ದಾರೆ, ಚಿತ್ರರಂಗವನ್ನು ಏಕೆ ತೊರೆದಿದ್ದಾರೆ?

ಈ ಸಿನಿಮಾದಲ್ಲಿ ನಟಿಸುವಾಗ ಸಿಂಧುಗೆ ಕೇವಲ 13 ವರ್ಷ ವಯಸ್ಸಾಗಿತ್ತು ಅಷ್ಟೇ. ಹೀಗೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರಂತಹ ದಿಗ್ಗಜರೊಂದಿಗೆ ಅಭಿನಯಿಸಿ ಸಾಲು ಸಾಲು ಹಿಟ್ ಸಿನಿಮಾಗಳನ್ನು

Sindhu Menon: ಸ್ನೇಹಿತರೆ ಅದೊಂದು ದಶಕದಲ್ಲಿ ಸಿಂಧು ಮೆನನ್ ದಕ್ಷಿಣ ಭಾರತ ಕಂಡ ಅದ್ಭುತ ಸುಂದರಿಯರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ರಶ್ಮಿ ಚಿತ್ರದಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಈಕೆ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ಅದ್ಭುತವಾಗಿ ನಟಿಸುವ ಮೂಲಕ ಹಲವಾರು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

ಸಿನಿಪ್ರಿಯರಿಂದ, ವಿಮರ್ಶಕರಿಂದ ಪ್ರಶಂಸೆ ಗಳಿಸಿದರು. ಅತಿ ಚಿಕ್ಕ ವಯಸ್ಸಿನಲ್ಲೇ ಹೋದಲೆಲ್ಲಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸಿಂಧು ಮೆನನ್ ಭರತನಾಟ್ಯ ವ್ಯಾಸಂಗ ಮಾಡುತ್ತಿದ್ದ ವೇಳೆ ಆಕೆಗೆ ಸಿನಿಮಾದ ಆಫರ್ ಬಂತು. ಹೌದು 1994ರಲ್ಲಿ ಆಕೆಯೇ ಕನ್ನಡದ ರಶ್ಮಿ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚುವ ಅವಕಾಶ ದೊರೆಯುತ್ತದೆ.

ಹೀಗೆ ಸಾಲು ಸಾಲು ಸಿನಿಮಾಗಳ ಆಫರ್ ಕೈಯಲ್ಲಿ ಇರಬೇಕಾದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಧುಮೆನನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ? ಇವರ ಜೀವನಚರಿತ್ರೆ ಹೇಗಿದೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ, 1999ರಲ್ಲಿ ಪ್ರೇಮ ಪ್ರೇಮ ಪ್ರೇಮ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ದೊರೆಯುತ್ತದೆ.

ಈ ಸಿನಿಮಾದಲ್ಲಿ ನಟಿಸುವಾಗ ಸಿಂಧುಗೆ ಕೇವಲ 13 ವರ್ಷ ವಯಸ್ಸಾಗಿತ್ತು ಅಷ್ಟೇ. ಹೀಗೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರಂತಹ ದಿಗ್ಗಜರೊಂದಿಗೆ ಅಭಿನಯಿಸಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ಸಿಂಧು 2010ರಲ್ಲಿ ಸಿಂಧು ಪ್ರಭು ಎಂಬ ಉದ್ಯಮಿಯನ್ನು ಮದುವೆಯಾದರು ಮದುವೆಯಾದ ಬಳಿಕ ತಾನೆಂದೂ ನಟನೆ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡುವ ಮೂಲಕ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು.

ಸದ್ಯ ಸಿಂಧು ಗಂಡನೊಂದಿಗೆ ಲಂಡನ್ನಲ್ಲಿ ನೆಲೆಸಿದ್ದು, ಇಬ್ಬರಿಗೂ ಸ್ವೆಟ್ಲಾನಾ ಎಂಬ ಮುದ್ದಾದ ಹೆಣ್ಣು ಮಗುವಿದೆ. ಗಂಡ ಮಗುವಿನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿರುವ ಸಿಂಧುಮೆನನ್ ನೂರು ಕಾಲ ಹೀಗೆ ಸಂತೋಷದಿಂದಿರಲಿ ಎಂದು ಹಾರೈಸೋಣ.

Where and how is actress Sindhu Menon now, and why did she leave the film industry?

Leave a comment