Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ambarish -Vishnuvardhan: ವಿಷ್ಣುವರ್ಧನ್ ಮತ್ತು ಅಂಬರೀಷ್ ಕ್ಲೋಸ್ ಆಗಿದ್ದು ಯಾವಾಗ?? ತನ್ನ ಕಟ್ಟಕಡೆಯ ಸಿನಿಮಾದಲ್ಲಿ ಅಂಬಿ ಪ್ರಾಣ ಸ್ನೇಹಿತನಾದ ವಿಷ್ಣುವರ್ಧನ್ ಕುರಿತು ಹೇಳಿದ್ದಾದರೂ ಏನು??

ಅಲ್ಲದೆ ಅವನು ನನಗೆ ನನ್ನೊಳಗಿರುವ ವ್ಯಕ್ತಿತ್ವವನ್ನು ಹೊರತರಲು ಸಹಾಯ ಮಾಡಿದ. ಮುಂದಿನ ದಿನದಲ್ಲಿ ನೀನು ವಿಶಿಷ್ಟ ರೀತಿಯಲ್ಲಿ ಬೆಳೆಯುತ್ತೀಯಾ ಎಂದು ಕೂಡ ಹೇಳಿದ್ದ, ಅದರಂತೆ ನಾನೀಗ ಸಾಧಿಸಿ ತೋರಿಸಿದ್ದೇನೆ.

Ambarish -Vishnuvardhan: ಸ್ನೇಹಿತರೆ, ಸ್ನೇಹಕ್ಕೆ ಇನ್ನೊಂದು ಹೆಸರಿದ್ದರೆ ಅದು ದುರ್ಯೋಧನ ಮತ್ತು ಕರ್ಣ. ಇವರಿಬ್ಬರಂತೆ ನಮ್ಮ ಸ್ಯಾಂಡಲ್ವುಡ್ನಲ್ಲಿ ಕೂಡ ಅಂಬರೀಶ್ ಮತ್ತು ವಿಷ್ಣುವರ್ಧನ್ ಎಂಬ ಸ್ನೇಹಜೀವಿಗಳು ಇದ್ದರು. ಇಂದಿಗೂ ಕೂಡ ಅದೆಷ್ಟೋ ಅಭಿಮಾನಿಗಳು ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರನ್ನು ಮಾರ್ಗದರ್ಶನವಾಗಿ ಇಟ್ಟುಕೊಂಡು ತಮ್ಮ ಅಮೂಲ್ಯವಾದ ಸ್ನೇಹ ಬಾಂಧವ್ಯವನ್ನು ಗಟ್ಟಿಯಾಗಿ ಉಳಿಸಿಕೊಂಡು ಹೋಗುತ್ತಿದ್ದಾರೆ.

ಎಷ್ಟರಮಟ್ಟಿಗೆ ಇವರಿಬ್ಬರ ಸ್ನೇಹ ಹೆಸರು ಪಡೆದಿತ್ತು ಹಾಗೂ ಬಾಂಧವ್ಯ ಬೆಸೆದುಕೊಂಡಿತ್ತು. ಹಾಗಾದ್ರೆ ವಿಷ್ಣುವರ್ಧನ್ ಮತ್ತು ಅಂಬರೀಷ್ ಕ್ಲೋಸ್ ಆಗಿದ್ದು ಯಾವಾಗ? ಅಂಬಿ ತಮ್ಮ ಕಟ್ಟಕಡೆಯ ಸಿನಿಮಾದಲ್ಲಿ ವಿಷ್ಣುದಾದ ಕುರಿತು ಹೇಳಿದ್ದಾದರೂ ಏನು ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಜನರು ನನ್ನನ್ನು ಗುರುತಿಸುವಂತೆ ಮಾಡಿದ್ದು ವಿಷ್ಣು ಅಭಿನಯದ ನಾಗರಹಾವು ಸಿನಿಮಾದ ಜಲೀಲ ಪಾತ್ರದಿಂದ. ಅದು ನನ್ನ ಮೊದಲ ಸಿನಿಮಾವಾಗಿತ್ತು ಅದರ ವಿಷ್ಣು ಅದಾಗಲೇ ಒಂದು ಸಿನಿಮಾವನ್ನು ಮಾಡಿ ಎರಡನೇ ಸಿನಿಮಾದ ನಾಗರಹಾವಿನಲ್ಲಿ ಬಹಳ ಪ್ರಮುಖ ಪಾತ್ರವನ್ನು ಗಿಟ್ಟಿಸಿಕೊಂಡಿದ್ದ. ನಾವಿಬ್ಬರು ಸಿನಿಮಾ ಶೂಟಿಂಗ್ ಆಗುವಾಗ ಬೇರೆಬೇರೆ ಕಡೆ ಇರುತ್ತಿದ್ದೇವು. ಶೂಟಿಂಗ್ ಮುಗಿಸಿದ ನಂತರ ನಮ್ಮಿಬ್ಬರನ್ನು ಒಂದೇ ರೂಮಿನಲ್ಲಿ ಇರಿಸಲಾಗುತ್ತಿತ್ತು. ವಿಷ್ಣುವಿನ ಗುಣ ಎಂತದ್ದು? ಆತನಲ್ಲಿರುವ ಮನುಷ್ಯ ಯಾರು? ಎಂಬ ಎಲ್ಲವನ್ನು ನಾನು ಒಂದೊಂದಾಗೆ ಕಂಡುಕೊಂಡೆ.

ಇದನ್ನು ಓದಿ:- Cinema: ಕನ್ನಡ ಸೀರಿಯಲ್ ಕಲಾವಿದರ ಮಕ್ಕಳು ಹೇಗಿದ್ದಾರೆ ಗೊತ್ತಾ?? ನೋಡಿ ಎಷ್ಟು ಸುಂದರವಾಗಿದ್ದಾರೆ, ಅಪ್ಪ ಅಮ್ಮರನ್ನೆ ಮೀರಿಸುತ್ತಾರೆ !!

ಅಲ್ಲದೆ ಅವನು ನನಗೆ ನನ್ನೊಳಗಿರುವ ವ್ಯಕ್ತಿತ್ವವನ್ನು ಹೊರತರಲು ಸಹಾಯ ಮಾಡಿದ. ಮುಂದಿನ ದಿನದಲ್ಲಿ ನೀನು ವಿಶಿಷ್ಟ ರೀತಿಯಲ್ಲಿ ಬೆಳೆಯುತ್ತೀಯಾ ಎಂದು ಕೂಡ ಹೇಳಿದ್ದ, ಅದರಂತೆ ನಾನೀಗ ಸಾಧಿಸಿ ತೋರಿಸಿದ್ದೇನೆ. ನವಿಬ್ಬರು ಕೂಡ ಒಬ್ಬರನ್ನೊಬ್ಬರ ಸಿನಿಮಾಗಳಿಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದೆವು. ಇಬ್ಬರಲ್ಲಿ ಯಾರಿಗೆ ತೊಂದರೆಯಾದರೂ ಬಿಟ್ಟುಕೊಡುತ್ತಿರಲಿಲ್ಲ. ನಮ್ಮಿಬ್ಬರ ನಡುವೆ ಸ್ಟಾರ್ ವಾರ್ ಎಂಬ ಹುಳು ಹುಟ್ಟುಕೊಳ್ಳಲೇ ಇಲ್ಲ. ಅಲ್ಲದೆ ಅದೆಷ್ಟೋ ಬಾರಿ ನಿನ್ನೊಳಗೆ ಇರುವಂತಹ ರೂಢ ತನವನ್ನು ಬಿಟ್ಟುಬಿಡು ಎಂದು ವಿಷ್ಣು ನನಗೆ ಹೇಳಿದ್ದಾನೆ. ನನಗೆ ಅದು ಅರಿವಾಗಿದ್ದೇ 2009ರಲ್ಲಿ ವಿಷ್ಣು ನನ್ನನ್ನು ಅಗಲಿದಾಗ..

ನಾನು ವಿಷ್ಣುನ ಯಾವಾಗಲೂ ನೆನಸಿಕೊಳ್ಳುವುದು ನನಗೆ ನೆಗೆಟಿವ್ ಯೋಚನೆಗಳು ಬಂದಾಗ, ಹೌದು ವಿಷ್ಣು ಅವನಲ್ಲಿ ಕೇವಲ ಪಾಸಿಟಿವ್ ಗುಣಗಳು ಅಡಕವಾಗಿತ್ತು. ನನಗೆ ಕೆಟ್ಟ ರೀತಿಯಾದಂತಹ ಯೋಚನೆಗಳು ಬಂದಾಗ ನಾನು ಅವನನ್ನು ನೋಡಿ ಸಮಾಧಾನ ತಂದುಕೊಳ್ಳುತ್ತಿದ್ದೆ. ಈಗ ಆತನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅಂಬರೀಶ್ ತಮ್ಮ ಕಟ್ಟಕಡೆಯ ಸಿನಿಮಾದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದರು.

When did Vishnuvardhan and Ambareesh get close?

Leave a comment