Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vishnuvardhan-Manjula: ಒಮ್ಮೆಯಾದರು ವಿಷ್ಣುದಾದಾನೊಂದಿಗೆ ಅಭಿನಯಿಸಬೇಕು ಎಂದು ನಟಿಯರು ಪಟ್ಟುಹಿಡಿದು ಕೂರುತ್ತಿದ್ದ ಆ ಕಾಲದಲ್ಲಿ ಮಂಜುಳಾ ಮಾತ್ರ ಕಿಟ್ಟುಪುಟ್ಟು ಸಿನಿಮಾಗೆ ವಿಷ್ಣುವರ್ಧನ್ ನಾಯಕರಾಗುವುದು ಬೇಡವೇ ಬೇಡ ಎಂದು ಹೇಳಿದ್ಯಾಕೆ ಗೊತ್ತೇ??

ಆಗ ಕಿಟ್ಟುಪುಟ್ಟು ಎಂಬ ಸಿನಿಮಾದ ಶೀರ್ಷಿಕೆ ಇಬ್ಬರ ತಲೆಯಲ್ಲೂ ಹೊಳೆಯುತ್ತದೆ. ಅಲ್ಲದೆ ದ್ವಾರಕೀಶ್ ಅವರ ಆಪ್ತ ಮಿತ್ರ ವಿಷ್ಣುವರ್ಧನ್ ಹಾಗೂ ನಾಯಕಿ ಮಂಜುಳಾ

Get real time updates directly on you device, subscribe now.

Vishnuvardhan-Manjula: ಸ್ನೇಹಿತರೆ, ಸ್ಯಾಂಡಲ್ ವುಡ್ನಲ್ಲಿ ಬಾಯಿಬಡಕಿ, ಬಜಾರಿ ಎಂಬಂತಹ ಬಿರುದುಗಳನ್ನು ಪಡೆದು ತಮ್ಮದೇ ಆದ ವಿಶಿಷ್ಟ ಶೈಲಿಯ ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಕನ್ನಡಿಗರ ಮನಸ್ಸನ್ನು ಗೆದ್ದಂತಹ ನಟಿಯರಲ್ಲಿ ಮಂಜುಳ ಕೂಡ ಒಬ್ಬರು. ಇಂತಹ ನಟಿ ವಿಷ್ಣುವರ್ಧನ್ ಅವರು ನನ್ನ ಸಿನಿಮಾಗೆ ನಾಯಕರಾಗುವುದು ಬೇಡ ಎಂದು ಅದೊಂದು ದಿನ ಹಠಹಿಡಿದಿದ್ದ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಕನ್ನಡ ಚಿತ್ರರಂಗದಲ್ಲಿ ಅನೇಕ ಯಶಸ್ವಿ ಚಿತ್ರಗಳ ಪಟ್ಟಿಗಳಿವೆ. ಅದರಲ್ಲಿ ಡಾಕ್ಟರ್ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅಭಿನಯದ ಕಿಟ್ಟುಪುಟ್ಟು ಕೂಡ ಒಂದು. ಹೌದು ವಿಶೇಷ ಕಥಾಹಂದರ ಹೊಂದಿದಂತಹ ಈ ಸಿನಿಮಾ ಆಗಿನ ಕಾಲದಲ್ಲಿ ಹೊಸತರಹ ಸೆನ್ಸೇಷನಲ್ ಕ್ರಿಯೇಟ್ ಮಾಡಿತ್ತು. ಈ ಸಿನಿಮಾದ ನಾಯಕ ನಟಿ ಮಂಜುಳಾ ಅವರಿಗೆ ವಿಷ್ಣುವರ್ಧನ್ ಅವರಿಗಿಂತ ಮತ್ತೊಬ್ಬ ನಟರಿದ್ದಾರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿತಂತೆ.

ಅಲ್ಲದೆ ಅದೇ ನಾಯಕನನ್ನು ಆಯ್ಕೆ ಮಾಡಿ ಎಂದು ನಿರ್ಮಾಪಕ ದ್ವಾರಕೀಶ್ ಅವರ ಬಳಿಯೂ ಕೇಳಿಕೊಂಡಿದ್ದರು. ಮಂಜುಳಾರವರಿಗೆ ಹೀಗೆ ಅನ್ನಿಸಲು ಕಾರಣವಾದರೂ ಏನು ಎಂದು ನಿರ್ಮಾಪಕ ದ್ವಾರಕೀಶ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಂದು ಬಾರಿ ದ್ವಾರ್ಕೀಶ್ ಅವರು ತಮ್ಮ ಸ್ನೇಹಿತ ನಾಗರಾಜ್ ಎನ್ನುವವರ ಜೊತೆ ಗುರುರಾಘವೇಂದ್ರರನ್ನು ನೋಡುವುದಕ್ಕೆ ಮಂತ್ರಾಲಯಕ್ಕೆ ಹೋಗಿ ಅಲ್ಲಿಂದ ದರ್ಶನ ಪಡೆದು ಹಿಂತಿರುಗಿದಾಗ ಮುಂದಿನ ಸಿನಿಮಾ ಯಾವುದಾಗಬೇಕು ಎನ್ನುವ ಬಗ್ಗೆ ಅವರೊಂದಿಗೆ ದೀರ್ಘವಾದ ಚರ್ಚೆಯಲ್ಲಿ ತೊಡಗಿರುತ್ತಾರೆ.

ಆಗ ಕಿಟ್ಟುಪುಟ್ಟು ಎಂಬ ಸಿನಿಮಾದ ಶೀರ್ಷಿಕೆ ಇಬ್ಬರ ತಲೆಯಲ್ಲೂ ಹೊಳೆಯುತ್ತದೆ. ಅಲ್ಲದೆ ದ್ವಾರಕೀಶ್ ಅವರ ಆಪ್ತ ಮಿತ್ರ ವಿಷ್ಣುವರ್ಧನ್ ಹಾಗೂ ನಾಯಕಿ ಮಂಜುಳಾ ಅವರನ್ನು ಆಯ್ಕೆ ಮಾಡುವ ಆಲೋಚನೆ ಅವರದ್ದಾಗಿತ್ತು. ಹೀಗೆ ಮಂಜುಳಾ ಅವರು ಕೂಡ ಸಿನಿಮಾದಲ್ಲಿ ನಟಿಸಲು ಒಪ್ಪಿದರು.

ಆದರೆ ಒಂದು ಶರತ್ತನ್ನು ಮುಂದಿಟ್ಟರು, ಅದುವೇ ಕಿಟ್ಟುಪುಟ್ಟು ಸಿನಿಮಾಗೆ ನಾನು ನಾಯಕಿಯಾಗಿ ನಟಿಸಬೇಕೆಂದು ನಾಯಕನ ಪಾತ್ರದಲ್ಲಿ ವಿಷ್ಣುವರ್ಧನ್ ಅವರ ಬದಲಿಗೆ ಪ್ರಯಾಣ ರಾಜ ಶ್ರೀನಾಥ್ ಅವರನ್ನು ಹಾಕಬೇಕು ಎಂದು. ಆಕೆ ಹಾಗೆ ಹೇಳುವುದಕ್ಕೆ ಒಂದು ಕಾರಣವಿದೆ ಅದೇನೆಂದರೆ ಆ ಸಮಯದಲ್ಲಿ ಮಂಜುಳಾ ಹಾಗೂ ಶ್ರೀನಾಥ್ ಅವರ ಜೋಡಿ ತುಂಬಾನೇ ಯಶಸ್ವಿಯಾಗಿದ್ದು, ತೆರೆಮೇಲೆ ಉತ್ತಮ ಜೋಡಿ ಎಂದು ಕರೆಸಿಕೊಂಡಿದ್ದ ಈ ಇಬ್ಬರು ಹಲವು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದರು.

ಮೇಲಾಗಿ ಶ್ರೀನಾಥ್ ಅವರು ಮಂಜುಳಾ ಅವರಿಗೆ ಆಪ್ತರಾಗಿದ್ದರು. ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸುವುದಕ್ಕೆ ಯಾವುದೇ ತಕರಾರು ಇಲ್ಲದೆ ಇದ್ದರೂ ತಮ್ಮ ಒಂದು ಸಿನಿ ಹಾದಿಯ ಯಶಸ್ಸಿನ ಜೋಡಿ ಶ್ರೀನಾಥ್ ಎನ್ನುವುದು ಮಂಜುಳಾ ಅವರ ಅನಿಸಿಕೆಯಾಗಿತ್ತು. ಇದನ್ನು ಕೇಳಿದ ದ್ವಾರಕೀಶ್ ನೀವು ಹೇಳುವುದು ಸರಿಯೇ ಆದರೆ ಕಿಟ್ಟುಪುಟ್ಟುವಿನ ಆ ಪಾತ್ರಕ್ಕೆ ಶ್ರೀನಾಥ್ ಅವರು ಒಪ್ಪುವುದಿಲ್ಲ ವಿಷ್ಣುವರ್ಧನ್ ಅವರು ತುಂಬಾ ಚೆನ್ನಾಗಿ ಮಾಡುತ್ತಾರೆ.

ವಿಷ್ಣುವರ್ಧನ್ರವರನ್ನು ನಾಯಕನನ್ನಾಗಿ ಆಯ್ಕೆ ಮಾಡುವುದಕ್ಕೆ ಸಮ್ಮತಿ ಸೂಚಿಸಿ ಎಂದು ದ್ವಾರಕೀಶ್ ಕೇಳುತ್ತಾರೆ. ಇದಕ್ಕೆ ಮಂಜುಳಾ ಹೌದು ನೀವು ಹೇಳುತ್ತಿರುವುದು ಸರಿ ವಿಷ್ಣುವರ್ಧನ್ ಅವರೊಡನೆ ನಟಿಸುವುದಕ್ಕೆ ನನಗೆ ಬಹಳ ಇಷ್ಟ ಆದರೆ ನನ್ನ ಅಭಿಪ್ರಾಯ ನಿಮಗೆ ತಿಳಿಸಿದ್ದೆ ಅಷ್ಟೇ ಎಂದು ಹೇಳಿ ಮಂಜುಳಾ ವಿಷ್ಣು ಅವರೊಡನೆ ತೆರೆ ಹಂಚಿಕೊಂಡು ಸಿನಿಮಾ ಯಶಸ್ವಿಯಾಗುವುದಕ್ಕೆ ಕಾರಣಕರ್ತರಾಗುತ್ತಾರೆ.

Unknown facts about Vishnuvardhan and actress Manjula

Get real time updates directly on you device, subscribe now.

Leave a comment