Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vajramuni-Rajkumar: ಡಾಕ್ಟರ್ ರಾಜಕುಮಾರ್ಗೆ ಅತ್ಯಂತ ನೋವು ಕೊಟ್ಟ ಸಾವು ಯಾರದ್ದು ಗೊತ್ತಾ?? ಅದೊಂದು ದಿನ ಅಣ್ಣಾವ್ರು ಬಿಕ್ಕಿಬಿಕ್ಕಿ ಅತ್ತಿದ್ಯಾಕೆ?

ಪರದೆಯ ಮೇಲೆ ವಜ್ರಮುನಿಯವರಿಗೆ ಎಷ್ಟು ಕ್ರೂರತ್ವವನ್ನು ಮೈ ತುಂಬಿಕೊಂಡಂತೆ ಕಾಣುತ್ತಿದ್ದರೂ ನಿಜ ಜೀವನದಲ್ಲಿ ಒಂದು ಪರ್ಸೆಂಟ್ ಕೂಡ ಹಾಗೆ ಇರಲಿಲ್ಲ.

Vajramuni-Rajkumar: ಸ್ನೇಹಿತರೆ, ಅದೊಂದು ಕಾಲದಲ್ಲಿ ವಜ್ರಮುನಿ ಅವರು ಸುಮ್ಮನೆ ರಸ್ತೆಯಲ್ಲಿ ನಡೆದುಕೊಂಡು ಬಂದರು ಸಹ ಜನರು ಹೆದರುತ್ತಿದ್ದರು. ಅಷ್ಟರಮಟ್ಟಿಗೆ ಅವರ ಅಭಿನಯವನ್ನು ಜನರ ಮನಸ್ಸು ತುಂಬಿ ಕೊಂಡಿದ್ದರು. ಹೀಗೆ ಡಾಕ್ಟರ್ ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರ್ ನಾಗ್ ಸೇರಿದಂತೆ ಹಲವಾರು ನಾಯಕರ ಸಿನಿಮಾಗಳಲ್ಲೂ ಖಳನಾಯಕನಾಗಿ ಬಣ್ಣಹಚ್ಚಿದ ವಜ್ರಮುನಿಯವರ ಅಭಿನಯದಂತೆ ಮತ್ತೊಬ್ಬರು ಮಾಡಲು ಸಾಧ್ಯವೇ ಇಲ್ಲ ಬಿಡಿ.

ಪರದೆಯ ಮೇಲೆ ವಜ್ರಮುನಿಯವರಿಗೆ ಎಷ್ಟು ಕ್ರೂರತ್ವವನ್ನು ಮೈ ತುಂಬಿಕೊಂಡಂತೆ ಕಾಣುತ್ತಿದ್ದರೂ ನಿಜ ಜೀವನದಲ್ಲಿ ಒಂದು ಪರ್ಸೆಂಟ್ ಕೂಡ ಹಾಗೆ ಇರಲಿಲ್ಲ. ಬದಲಿಗೆ ಮಕ್ಕಳಂತೆ ಮೃದುತ್ವವನ್ನು ವಜ್ರಮುನಿಯವರ ಹೊಂದಿದ್ದರು. ಹೌದು ಸ್ನೇಹಿತರೆ ತಮ್ಮನ್ನು ಅರಸಿ ಯಾರಾದರೂ ಅವರ ಮನೆಗೆ ಹೋದರೆ, ಅವರನ್ನು ಸಂತೃಪ್ತಿ ಪಡಿಸಿ ಊಟ ಉಪಚಾರಗಳನ್ನು ಮಾಡಿಸಿ ಕಳಿಸುವವರೆಗೂ ವಜ್ರಮುನಿಯವರಿಗೆ ಸಮಾಧಾನ ಸಿಗುತ್ತಿರಲಿಲ್ಲ.

ಹೇಗೆ ಕೊಡುಗೈ ದಾನಿಯಾಗಿದ್ದಂತಹ ವಜ್ರಮುನಿಯವರನ್ನು ಕಂಡರೆ ರಾಜಕುಮಾರ್ ಅವರಿಗೆ ಎಲ್ಲಿಲ್ಲದಂತಹ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ. ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ವಜ್ರಮುನಿಯವರನ್ನೂ ಎಷ್ಟು ಪ್ರೀತಿಸುತ್ತಿದ್ದರೆ ಎಂಬುದಕ್ಕೆ ಉದಾಹರಣೆ ಎಂಬಂತೆ ಪ್ರತಿ ಸಿನಿಮಾದಲ್ಲೂ ವಜ್ರಮನಿ ಅವರಿಗೊಂದು ಪಾತ್ರ ಇದೆಯಾ ಎಂದು ನಿರ್ದೇಶಕ ನಿರ್ಮಾಪಕರನ್ನು ಅಣ್ಣಾವ್ರೇ ಬಾಯಿಬಿಟ್ಟು ಕೇಳುತ್ತಿದ್ದರಂತೆ, ಇಷ್ಟರಮಟ್ಟಿಗೆ ಇವರಿಬ್ಬರ ಬಾಂಧವ್ಯ ಬೆಳೆದಿತ್ತು.

ಹೀಗಿರುವಾಗ ವಜ್ರಮುನಿಯವರ ಅನಾರೋಗ್ಯಪೀಡಿತರಾಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಕೇಳುತ್ತಿದ್ದಂತೆ ಅಣ್ಣಾವ್ರು ಬೆಚ್ಚಿಬಿದ್ದರು. ಅಷ್ಟೇ ಅಲ್ಲದೆ ಬಿಕ್ಕಿ ಬಿಕ್ಕಿ ಅತ್ತರು. ತಮ್ಮ ಮನೆಯಲ್ಲಿನ ಒಬ್ಬ ಸದಸ್ಯನನ್ನು ಕಳೆದುಕೊಂಡು ಬಿಟ್ಟೆ ಎಂದು ಅಣ್ಣಾವ್ರು ವಜ್ರಮನಿ ಸ’ತ್ತಾ ಕರಾಳ ದಿನ ಗೋಳಾಡಿದರಂತೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Unknown facts about Vajramuni and Rajkumar

Leave a comment