Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vishnuvardhan-Rajkumar: ಅಣ್ಣಾವ್ರು ಮತ್ತು ವಿಷ್ಣು ದಾದಾನ ಬಾಂಧವ್ಯ ಎಷ್ಟರಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿ ಈ ಮಧುರ ಕ್ಷಣಗಳು..!!

ಅಭಿಮಾನಿಗಳ ಒತ್ತಾಯದ ಮೇರೆಗೆ ಒಟ್ಟಾಗಿ ಒಂದೇ ಸಿನಿಮಾದಲ್ಲಿ ಅದರಲ್ಲೂ ಗಂಧದಗುಡಿ ಎಂಬ ಅತ್ಯದ್ಭುತ ಸಿನಿಮಾದಲ್ಲಿ ನಟಿಸಿದಂತಹ ರಾಜ್ ವಿಷ್ಣು ಮತ್ತೆ ಒಂದಾಗಿ ಸಿನಿಮಾ ಮಾಡಲೇ ಇಲ್ಲ

Vishnuvardhan-Rajkumar: ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಾದ್ದ ಡಾಕ್ಟರ್ ವಿಷ್ಣುವರ್ಧನ್ ಮತ್ತು ಡಾಕ್ಟರ್ ರಾಜಕುಮಾರ್ ಅವರ ಕುರಿತು ಪದಗಳಲ್ಲಿ ವರ್ಣಿಸಲು ಸಾಧ್ಯವೇ? ಅದರಲ್ಲೂ ನಮ್ಮ ಕನ್ನಡ ಚಿತ್ರಗಳಿಗೆ ಅವರಿಬ್ಬರ ಕೊಡುಗೆ ಅಪಾರ. ಇಬ್ಬರೂ ತಮ್ಮದೇ ಆದ ವಿಶೇಷ ಜಾನರ್ ಇರುವಂತಹ ಸಿನಿಮಾಗಳಲ್ಲಿ ಸಕ್ರಿಯರಾಗಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.

ಇತ್ತ ಡಾಕ್ಟರ್ ರಾಜಕುಮಾರ್ ಅವರನ್ನು ಕನ್ನಡಿಗರು ತಮ್ಮ ಆರಾಧ್ಯದೈವವಾಗಿ ಆರಾಧಿಸಿದರೆ, ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ. ಹೀಗೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಕೂಡ ಇವರಿಬ್ಬರ ಮಧುರ ಕ್ಷಣಗಳು ಹೇಗಿತ್ತು? ರಾಜವಿಷ್ಣು ರವರ ಬಾಂಧವ್ಯದ ಸಣ್ಣ ಝಲಕ್ ಹಾಕಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಡಾಕ್ಟರ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗ ವಿಷ್ಣುವರ್ಧನ್ ತಮ್ಮ ಅತ್ಯದ್ಭುತ ಸಿನಿಮಾ ನಾಗರಹಾವಿನ ಮೂಲಕ ಎಂಟ್ರಿ ನೀಡಿದರು. ಗೆಳೆಯನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಬೆನ್ನೆಲುಬಾಗಿನಿಂತ ರಾಜಕುಮಾರ್ ಅವರನ್ನು ವಿಷ್ಣುದಾದಾ ಎಂದೂ ಮರೆಯಲು ಸಾಧ್ಯವಿಲ್ಲ.

ಅಭಿಮಾನಿಗಳ ಒತ್ತಾಯದ ಮೇರೆಗೆ ಒಟ್ಟಾಗಿ ಒಂದೇ ಸಿನಿಮಾದಲ್ಲಿ ಅದರಲ್ಲೂ ಗಂಧದಗುಡಿ ಎಂಬ ಅತ್ಯದ್ಭುತ ಸಿನಿಮಾದಲ್ಲಿ ನಟಿಸಿದಂತಹ ರಾಜ್ ವಿಷ್ಣು ಮತ್ತೆ ಒಂದಾಗಿ ಸಿನಿಮಾ ಮಾಡಲೇ ಇಲ್ಲ ಎಂಬುದು ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಿರುವಂತಹ ಬೇಸರ ಇನ್ನು ವಿಷ್ಣುವರ್ಧನ ಮನೆಯಲ್ಲಿ ಯಾವುದೇ ರೀತಿಯಾದಂತಹ ಫಂಕ್ಷನ್ ಅಥವಾ ಕಾರ್ಯಕ್ರಮಗಳು ನಡೆದರೆ ತಪ್ಪದೇ ಮರೆಯದೆ ರಾಜ ಕುಟುಂಬದವರನ್ನು ವಿಷ್ಣುವರ್ಧನ್ ಮತ್ತು ಭಾರತೀಯವರು ಆಮಂತ್ರಿಸುತ್ತಿದ್ದರು.

ಅದರಂತೆ ಡಾಕ್ಟರ್ ರಾಜಕುಮಾರ್ ಅವರ ಮನಸ್ಸಿಗೆ ಬೇಸರವಾದಾಗ ತನ್ನ ಗೆಳೆಯನೊಂದಿಗೆ ಕುಳಿತು ಮಾತನಾಡಲು, ಸಂತೋಷ ಹಂಚಿಕೊಳ್ಳಲು ರಾಜಕುಮಾರ್ ಸದಾ ವಿಷ್ಣುದಾದರನ್ನು ನೆನಪಿಸಿಕೊಳ್ಳುತ್ತಿದ್ದರು. ಎಷ್ಟರಮಟ್ಟಿಗೆ ಇವರಿಬ್ಬರ ಸ್ನೇಹ ಬಾಂಧವ್ಯ ಬೆಸೆದುಕೊಂಡಿತ್ತು.

ಆದರೆ ಅಭಿಮಾನಿಗಳು ಮಾಡಿಕೊಳ್ಳುವಂತಹ ಕೆಲವು ಸಣ್ಣ ಪುಟ್ಟ ಜಗಳಗಳಿಂದ ದಿಗ್ಗಜ ಸ್ನೇಹಿತರ ಸ್ನೇಹ ಕೊಂಚಮಟ್ಟಿಗೆ ನೆಲಕಚ್ಚಿತ್ತು. ಅದೆಷ್ಟೋ ನಿರ್ದೇಶಕ-ನಿರ್ಮಾಪಕರು ಇವರಿಬ್ಬರನ್ನು ಮತ್ತೆ ತೆರೆಯ ಮೇಲೆ ತರಲೇಬೇಕು ಎಂದು ವಿಶೇಷ ರೀತಿಯಾದಂತಹ ಕಥೆಗಳನ್ನು ಸಹ ರೆಡಿ ಮಾಡಿಕೊಂಡಿದ್ದರು.

ಆದರೆ ಕಾರಣಾಂತರಗಳಿಂದ ಅವು ಯಾವು ಕಾರ್ಯರೂಪಕ್ಕೆ ಬರಲಿಲ್ಲ. ಈ ಎರಡು ದಿಗ್ಗಜರ ಕುರಿತು ನಿಮ್ಮ ಅನಿಸಿಕೆಯೇನು ಎಂಬುದು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

These sweet moments are proof of how close Annavru and Vishnu Daada were!!

Leave a comment