Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Head ache: ಎಲ್ಲ ತರಹದ ತಲೆನೋವಿಗೆ ಅಡುಗೆ ಮನೆಯಲ್ಲೇ ಪರಿಹಾರ, ಈ ಒಂದೇ ಒಂದು ಪದಾರ್ಥ ನಿಮ್ಮ ಅಡುಗೆಯಲ್ಲಿ ಬಳಸಿ ಸಾಕು ತಲೆನೋವು ಮಂಗಮಾಯ!!

ಇತ್ತೀಚಿನ ದಿನಗಳಲ್ಲಿ ಒತ್ತಡದಿಂದಾಗುವ ತಲೆನೋವು ಹೆಚ್ಚಿರುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ದಾಳಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ

Head ache: ಸ್ನೇಹಿತರೇ, ಇವಾಗಿನ ಲೈಫ್ ಸ್ಟೈಲ್ ನಲ್ಲಿ ತುಂಬಾ ಜನರಿಗೆ ಕಾಡುತ್ತಿರುವಂತಹ ಸಮಸ್ಯೆ ಎಂದರೆ ತಲೆನೋವು. ಈ ತಲೆ ನೋವಿನಲ್ಲಿ ಬೇರೆಬೇರೆಯಾದಂತಹ ವಿಧಾನಗಳಿವೆ. ಸ್ಟ್ರೆಸ್ಯಿಂದ ಬರುವಂತಹ ತಲೆನೋವು ಮೈಗ್ರೇನ್ನಿಂದ ಬರುವಂತಹ ತಲೆನೋವು, ಇನ್ನು ಕೆಲವೊಬ್ಬರಿಗೆ ಸೈನಸ್ ನಿಂದ ತಲೆನೋವು ಬರುತ್ತದೆ.

ಇನ್ನು ಕೆಲವರಿಗೆ ಹಿಂಭಾಗದ ತಲೆನೋವು, ಎದುರುಗಡೆಯ ತಲೆನೋವು, ತಲೆಯ ಸೈಡ್ಗಳಲ್ಲಿ ಮಾತ್ರ ತಲೆನೋವು ಹೆಚ್ಚಾಗಿ ಕಾಡುತ್ತದೆ. ಕೆಲವೊಮ್ಮೆ ಈ ತಲೆನೋವುಗಳು ಒಂದೆರಡು ದಿನವಾದರೂ ಕಡಿಮೆಯಾಗುವುದಿಲ್ಲ. ತುಂಬಾ ದಿನದವರೆಗೆ ಹಾಗೆ ಕಂಟಿನ್ಯೂ ಆಗುತ್ತಿರುತ್ತದೆ. ಆಸ್ಪತ್ರೆಗೆ ಪದೇ ಪದೇ ಹೋಗುವುದು ಸಹ ಕಷ್ಟವೇ ಮನೆಯಲ್ಲಿ ತಲೆನೋವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಒತ್ತಡದಿಂದಾಗುವ ತಲೆನೋವು ಹೆಚ್ಚಿರುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ದಾಳಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ವಾರದ ತನಕ ಕುಡಿಯುತ್ತಾ ಬಂದರೆ ಸ್ಪ್ರೆಸ್ ನಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಕೆಲವೊಮ್ಮೆ ತಲೆಯ ಪೂರ್ಣ ಭಾಗ ನೋವಿರುವುದಿಲ್ಲ ಬರಿ ಅರ್ಧ ತಲೆನೋವು ಹೆಚ್ಚಾಗಿ ಕಾಡುತ್ತದೆ. ಈ ಸಮಸ್ಯೆ ಇರುವವರು ಒಂದು ಗೋಲಿ ಎಷ್ಟು ಗಾತ್ರದ ಬೆಲ್ಲವನ್ನು ಹಸುವಿನ ತುಪ್ಪದ ಜೊತೆ ಸೇರಿಸಿ ಬರಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ದಿನ ತಿನ್ನಬೇಕು.

ಬಾರ್ಲಿ ಗಂಜಿ ಪ್ರತಿದಿನ ತಪ್ಪದೆ ಕುಡಿಯುವುದರಿಂದ ನಮ್ಮ ದೇಹದಲ್ಲಿನ ಉಷ್ಣದಿಂದ ಆಗುವ ತಲೆ ನೋವು ಕಡಿಮೆ ಆಗುತ್ತದೆ. ನುಗ್ಗೆ ಸೊಪ್ಪನ್ನು ಜಜ್ಜಿ ಅದನ್ನು ಹಿಂಡಿದಾಗ ಬರುವ ರಸವನ್ನು ಕುಡಿದರೆ ತಲೆನೋವು ಕಡಿಮೆಯಾಗುತ್ತದೆ.

ಕಾಳುಮೆಣಸನ್ನು ತ್ಯೈದು ಅದರಿಂದ ಬರುವಂತಹ ಗಂಧವನ್ನು ತಲೆಗೆ ಹಚ್ಚಿಕೊಳ್ಳಬೇಕು ತಲೆ ನೋವು ಕಮ್ಮಿಯಾಗುತ್ತದೆ. ಪಿತ್ತದಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಒಂದು ಲೋಟದಷ್ಟು ಟೀಗೆ ಒಂದು ಚಮಚದಷ್ಟು ನಿಂಬೆರಸವನ್ನು ಹಿಂಡು ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು.

ಇದರಿಂದ ಪಿತ್ತ ಕಡಿಮೆಯಾಗಿ ತಲೆನೋವು ಕೂಡ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ತಲೆನೋವು ಬಿಡದೆ ಯಾವಾಗಲೂ ಕಾಡುತ್ತಿರುತ್ತದೆ ಇಂತಹವರು ನುಗ್ಗೆ ಸೊಪ್ಪನ್ನು ನೀರಲ್ಲಿ ಚೆನ್ನಾಗಿ ಬೇಯಿಸಿ ಅದನ್ನು ಸೋರಿಸಿ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತಾ ಬರುತ್ತದೆ.

ಹಸಿಶುಂಠಿಯನ್ನು ಸ್ವಲ್ಪ ತ್ಯೈದು ಅದರಿಂದ ಬರುವ ಗಂಧವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ನಮ್ಮ ತಲೆನೋವು ದೂರವಾಗುತ್ತದೆ. ಆಪಲ್ನ್ನು ಚಿಕ್ಕ ಚಿಕ್ಕ ಪೀಸ್ ಕಟ್ ಮಾಡಿಕೊಂಡು ಅದಕ್ಕೆ ಉಪ್ಪನ್ನು ಹಾಕಿ ತಿನ್ನುವುದರಿಂದ ಅರ್ಧ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

Home remedies for head aches explained in Kannada

Leave a comment