Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕಷ್ಟದ ಪರಿಸ್ಥಿತಿಯಲ್ಲಿ ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದ ರಾಘವೇಂದ್ರ ಹಾಗೂ ಶ್ರೀಮುರಳಿ, ಆ ಸಮಯದಲ್ಲಿ ಇಬ್ಬರು ಸೊಸೆಯಂದಿರು ಇಂತಹ ತ್ಯಾಗ ಮಾಡಿದ್ದರು ಗೊತ್ತಾ.

Vijay Raghavendra and Sri Murali: ನಿಮಗೆಲ್ಲರಿಗೂ ಸಹ ತಿಳಿದಿರುವಂತೆ ಸ್ನೇಹಿತರ ಜೊತೆ ಬ್ಯಾಂಕ್ ಕಾಕ್ ತೆರಳಿದ್ದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನ ರಾಘವೇಂದ್ರ ಅವರು ಆಗಸ್ಟ್ 6ರಂದು ನಿಧನ ಹೊಂದಿದ್ದರು. ಬ್ಯಾಂಕ್ ಕಾಕ್ ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಎಲ್ಲಾ ರೀತಿಯ ಕಾನೂನು ವ್ಯವಸ್ಥೆಗಳನ್ನು ಮುಗಿಸಿ.

ಮಧ್ಯರಾತ್ರಿ ಎಂದು ಬೆಂಗಳೂರಿಗೆ ಕರೆತರಲಾಯಿತು ತಂದ ನಂತರ ಸಾರ್ವಜನಿಕ ಜನರಿಗೆ ನೋಡಲು ಅವಕಾಶ ಮಾಡಿಕೊಟ್ಟು ನಂತರ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಕೂಡ ಮಾಡಲಾಗಿದೆ. ಆದರೆ ಇದೀಗ ವಿಜಯ್ ಅವರ ಸಂಸಾರ ಮುಗಿದೇ ಹೋಯಿತು ಎಂದು ಹೇಳಲಾಗುತ್ತಿದೆ. ವಿಜಯ ರಾಘವೇಂದ್ರ ಅವರಿಗೆ ತಮ್ಮ ಪತ್ನಿಯ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವ ಎಲ್ಲಿಲ್ಲದ ಕಾಳಜಿ ಇತ್ತು. ಪತಿ-ಪತ್ನಿಯರು ಬಹಳ ಅನ್ಯೂನ್ಯವಾಗಿ 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು.

ಆದರೆ ತನ್ನ ಪತ್ನಿ ಆಕಸ್ಮಿಕ ಸಾವು ರಾಘವೇಂದ್ರ ಅವರಿಗೆ ತಲೆಯ ಮೇಲೆ ಸಿಡಿಲು ಬಡಿದಂತೆ ಆಯಿತು. ಅವರ ದುಃಖ ಹೇಳಿಕೊಳ್ಳಲಾಗದಷ್ಟು ಮುಗಿಲು ಮುಟ್ಟಿದೆ. ವಿಜಯ್ ಅವರಿಗೆ ಬಂದವರೆಲ್ಲಾ ಸಂತಾಪ ಮಾಡುವ ಕೆಲಸ ಮಾಡುತ್ತಿದ್ದಾರೆ ಆದರೆ ಯಾರು ಏನೇ ಹೇಳಿದರೂ ಏನೇ ಮಾಡಿದರು ಅವರಿಗೆ ಆರಗಿಸಿಕೊಳ್ಳಲು ಆಗದಷ್ಟು ಜೀವನಪರ್ಯಂತ ಈ ನೋವು ಇದ್ದೆ ಇರುತ್ತದೆ.

ಸ್ಪಂದನ ಅವರು ಎಂದರೆ ವಿಜಯ ರಾಘವೇಂದ್ರ ಅವರಿಗೆ ಪಂಚಪ್ರಾಣ. ಪತ್ನಿ ತನ್ನನ್ನು ಬಿಟ್ಟು ಹೋಗುತ್ತಿರುವುದನ್ನು ನೋಡಿ ಅದನ್ನು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಮಗುವಿನಂತೆ ಅತ್ತು ಅತ್ತು ಸುಸ್ತಾಗಿ ಹೋದರು. ಹೀಗೆ ಆಗುವುದಕ್ಕೆ ಕೂಡ ಒಂದು ಕಾರಣ ಇದೆ ವಿಜಯ ರಾಘವೇಂದ್ರ ಅವರು ಹೇಗೆ ಪತ್ನಿಯನ್ನು ದೇವತೆ ತರ ನೋಡಿಕೊಳ್ಳುತ್ತಿದ್ದರು ಅದೇ ರೀತಿ ಪತ್ನಿ ಸ್ಪಂದನ ಕೂಡ ವಿಜಯ ರಾಘವೇಂದ್ರ ಅವರನ್ನು ಮಗುವಿನಂತೆ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ಒಂದು ದಿನ ಕೂಡ ಗಂಡನನ್ನು ಬಿಟ್ಟು ಇರುತ್ತಿರಲಿಲ್ಲ ಪತಿ ಸೋತಾಗ ಅವರ ಬೆನ್ನಿಗೆ ಎನರ್ಜಿ ಯಾಗಿ ನಿಲ್ಲುತ್ತಿದ್ದರು.

ಎಷ್ಟೇ ಕಷ್ಟ ಬಂದರೂ ಕೂಡ ಪತಿಯ ಬೆಂಗಾವಲಾಗಿ ನಿಲ್ಲುತ್ತಿದ್ದರು ಅದರಲ್ಲಿ ಒಂದು ಕುಟುಂಬದ ಹಿರಿಯ ಸೊಸೆಗೆ ಇರಬೇಕಾದ ಎಲ್ಲಾ ಗುಣಲಕ್ಷಣಗಳು ಜವಾಬ್ದಾರಿಗಳು ಸ್ಪಂದನ ಅವರಲ್ಲಿ ಇತ್ತು. ಮನೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರು ಮನೆ ಮಾರುವ ಪರಿಸ್ಥಿತಿ ಬಂದಾಗಲೂ ಅವರು ಧೃತಿಗೆಡದೆ ಎಲ್ಲಾ ಜವಾಬ್ದಾರಿಗಳನ್ನು ಬಹಳ ಅರ್ಥಪೂರ್ಣವಾಗಿ ನಿಭಾಯಿಸಿದರು.

ಹೆಣ್ಣು ಮನಸು ಮಾಡಿದರೆ ಯಾವುದು ಕೂಡ ಆಶ್ಚರ್ಯವಲ್ಲ ಎನ್ನುವುದಕ್ಕೆ ಅದು ಸ್ಪಂದನ ಅವರ ಜೀವನದಲ್ಲಿ ನಿಜವಾಯಿತು. ವಿಜಯ ರಾಘವೇಂದ್ರ ಅವರು ಹೇಳಿಕೊಂಡಿರುವಂತೆ ಸ್ಪಂದನ ಅವರು ವಿಜಯ ಅವರ ಕಷ್ಟದ ಕಾಲದಲ್ಲಿ ಕೈ ಬಿಡಲಿಲ್ಲವಂತೆ. ಸಾಲು ಸಾಲು ಸಿನಿಮಾಗಳು ಶ್ರೀಮುರಳಿ ಹಾಗೂ ವಿಜಯ ರಾಘವೇಂದ್ರ ಅವರನ್ನು ಹುಡುಕಿಕೊಂಡು ಬಂದರು ಸಹ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗುವುದಿಲ್ಲ. ಒಂದು ಸಮಯದಲ್ಲಿ ಮನೆ ಮಾರುವ ಪರಿಸ್ಥಿತಿಯನ್ನು ಕೂಡ ದೇವರು ಚಿನ್ಹೆಗೌಡರ ಕುಟುಂಬಕ್ಕೆ ತಂದುಕೊಟ್ಟುಬಿಡುತ್ತಾನೆ.

ಆಗ ಮನೆಯಲ್ಲಿದ್ದ ಅತ್ತೆ ಸೊಸೆಯಂದಿರೋ ಪತಿಯರ ಬೆನ್ನಿಗೆ ನಿಂತಿದ್ದರೂ ಅದರಲ್ಲಿ ಸ್ಪಂದನ ಅವರ ಪಾತ್ರ ನಿಜಕ್ಕೂ ಬಹಳ ದೊಡ್ಡದು ಅಂತಾನೆ ಹೇಳಬಹುದು. ಮನೆ ಮಾರಿ ಬೇರೆ ಮನೆಗೆ ಹೋದರು ಕೂಡ ಆ ಮನೆಯನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಪತಿ ಮತ್ತು ಕುಟುಂಬದ ಜೊತೆಗೆ ಬಹಳ ಚೆನ್ನಾಗಿ ಹೊಂದಿಕೊಂಡು ಎಲ್ಲರ ಹೃದಯದಲ್ಲಿ ತುಂಬಿಕೊಂಡಿದ್ದ ಜೀವ ಇವತ್ತು ಎಲ್ಲರನ್ನೂ ದುಃಖದ ಸಮುದ್ರ ಕ್ಕೆ ತೂರಿ ಗಂಡ ಮತ್ತು ಪ್ರೀತಿಯ ಮಗನನ್ನು ಬಿಟ್ಟು ಇಂದು ಬಾರದ ಲೋಕಕ್ಕೆ ಸ್ಪಂದನ ಅವರು ಹೋಗಿಯೇ ಬಿಟ್ಟರು..

Vijay Raghavendra and Sri Murali
Image source – Vijaya Karnataka
Leave a comment