Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Srinivas Prabhu: 80-90ರ ದಶಕದಲ್ಲಿ ರವಿಚಂದ್ರನ್ ಕ್ರೇಜಿಸ್ಟಾರ್ ಆಗಿ ಮೆರೆಯಲು ಈ ಖ್ಯಾತ ನಟರೇ ಕಾರಣ! ತಮ್ಮ ಧ್ವನಿಯ ಮೂಲಕವೇ ಕನ್ನಡಿಗರ ಹೃದಯ ಗೆದ್ದಂತಹ ಆ ನಟನಾದರು ಯಾರು ಗೊತ್ತಾ..?

ರವಿಚಂದ್ರನ್ ಅವರು ಮೊದಮೊದಲು ಸಿನಿಮಾರಂಗಕ್ಕೆ ಬಂದದ್ದು, ಖಳನಾಯಕರಾಗಿ ಆನಂತರ ನಾಯಕರಾಗಿ ಖ್ಯಾತಿ ಪಡೆದು ನಿರ್ಮಾಪಕರಾಗಿ ಹಲವಾರು ಸಿನಿಮಾಗಳನ್ನು ನಿರ್ಮಿಸಿದರು

Get real time updates directly on you device, subscribe now.

Srinivas Prabhu: ಸ್ನೇಹಿತರೆ, ರವಿಚಂದ್ರನ್ ಅವರು ನೋಡುವುದಕ್ಕೆ ಎಷ್ಟು ಸುಂದರವೋ ಅವರ ಧ್ವನಿಯೂ ಅಷ್ಟೇ ಸುಮಧುರ. ಅವರ ಮಾತಿನ ಶೈಲಿಗೆ ಮರುಳಾಗದ ಅಭಿಮಾನಿಗಳೇ ಇಲ್ಲ, ಅವರ ಧ್ವನಿಯನ್ನು ಅನುಕರಿಸುವ ಅನುಸರಿಸುವ ಸಂವಹಿಸುವ ಲಕ್ಷಾಂತರ ಜನರಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳಿಗೆ ರವಿಚಂದ್ರನ್ ಅವರಿಗೆ ಹೆಣ್ಣುಮಕ್ಕಳ ಧ್ವನಿ ಎಂದರೆ ಅಚ್ಚುಮೆಚ್ಚು. ಹಾಗಿದ್ದರೂ ನಾವು ರವಿಚಂದ್ರನ್ ಅವರ ಆರಂಭದ ಸಿನಿಮಾಗಳನ್ನು ನೋಡುವುದಾದಲ್ಲಿ ಅಲ್ಲಿ ಅವರ ನಟನೆ ಮಾತ್ರ ಕಾಣುತ್ತದೆ ವಿನಹ ಅವರ ನೈಜ ಧ್ವನಿಯ ಪರಿಚಯ ಆಗುವುದಿಲ್ಲ.

ರವಿಚಂದ್ರನ್ ಅವರು ಮೊದಮೊದಲು ಸಿನಿಮಾರಂಗಕ್ಕೆ ಬಂದದ್ದು, ಖಳನಾಯಕರಾಗಿ ಆನಂತರ ನಾಯಕರಾಗಿ ಖ್ಯಾತಿ ಪಡೆದು ನಿರ್ಮಾಪಕರಾಗಿ ಹಲವಾರು ಸಿನಿಮಾಗಳನ್ನು ನಿರ್ಮಿಸಿದರು ಕೂಡ ಅವರೊಳಗಡೆ ಅಳುಕು ಇದ್ದದ್ದು ನಿಜ. ಹೌದು ರವಿಚಂದ್ರನ್ ಅವರು ಅವರದೇ ಸಿನಿಮಾಗೆ ದ್ವನಿ ನೀಡುತ್ತಿರಲಿಲ್ಲ ಎನ್ನುವುದು ಅಷ್ಟೇ ಸತ್ಯ. ರವಿಚಂದ್ರನ್ ಅವರಿಗೆ ಡಬ್ಬಿಂಗ್ ಮಾಡುತ್ತಿದ್ದವರು ಹಿರಿಯ ರಂಗಕರ್ಮಿ ಹಿರಿಯ ನಟ ಮತ್ತು ಗಡಸು ಹಾಗೂ ಅತಿ ಆಕರ್ಷಕ ಧ್ವನಿಯನ್ನು ಹೊಂದಿರುವಂತಹ ಶ್ರೀನಿವಾಸ್ ಪ್ರಭು ಅವರು.

ರವಿಚಂದ್ರನ್ ಅವರ ಪ್ರೇಮಲೋಕ, ರಣಧೀರ, ನಾನು ನನ್ನ ಹೆಂಡತಿ, ಸಂಗ್ರಾಮ, ಪ್ರಳಯಾಂತಕ, ಸ್ವಾಭಿಮಾನ, ಕಿಂದರಿಜೋಗಿ, ಅಸಂಭವ, ಅಭಿಮನ್ಯು ಹೀಗೆ ರವಿಚಂದ್ರನ್ ಅವರ ಆರಂಭದ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಮಾಡಿರುವುದು ಶ್ರೀನಿವಾಸ್ ಪ್ರಭುಗಳು. ಶ್ರೀನಿವಾಸ್ ಪ್ರಭು (Srinivas Prabhu) ಅವರ ಧ್ವನಿ ಒಂದಕ್ಕೆ ಆದಷ್ಟೋ ಬೇರೆ ಯಾವ ನಟರ ಮತ್ತು ಯಾವ ಡಬ್ಬಿಂಗ್ ಆರ್ಟಿಸ್ಟ್ಗಳು ಕೂಡ ರವಿಚಂದ್ರನ್ ಅವರಿಗೆ ಹೊಂದಿಕೆಯಾಗುತ್ತಿರಲಿಲ್ಲ.

ರವಿಚಂದ್ರನ್ ಅವರು ಮೊದಲೇ ಸವಾಲನ್ನು ಸ್ವೀಕರಿಸುವವರು ಹೀಗೆ ರವಿಚಂದ್ರನ್ ಅವರಿಗೆ ನಿರಂತರವಾಗಿ ಶ್ರೀನಿವಾಸ್ ಪ್ರಭುಗಳು ಡಬ್ಬಿಂಗ್ ಮಾಡುವಾಗ ರವಿಚಂದ್ರನ್ ಅವರಿಗೆ ನಾನ್ಯಾಕೆ ನನ್ನ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡಬಾರದು ಎಂದೆನಿಸಿತು. ಮೊದಲಿಗೆಲ್ಲ ರವಿಚಂದ್ರನ್ ಅವರಿಗೆ ಕನ್ನಡದ ಮೇಲೆ ಹಾಗೂ ಡಬ್ಬಿಂಗ್ ಮಾಡುವಾಗ ಡೈಲಾಗ್ಗಳ ಮೇಲೆ ಅಷ್ಟು ಸ್ಪಷ್ಟವಾದ ಹಿಡಿತವಿರಲಿಲ್ಲ. ಅಂದರೆ ಒತ್ತಕ್ಷರಗಳು ರವಿಚಂದ್ರನ್ ಅವರಿಗೆ ಅಷ್ಟು ಸುಲಭವಾಗಿ ಹಾಗೂ ವೇಗವಾಗಿ ಬರುತ್ತಿರಲಿಲ್ಲ.

Srinivas Prabhu - Ravichandran
Srinivas Prabhu was a voice-dubbed actor who gave voice to Ravi Chandran.

ನಂತರ ಅಪಾರ್ಥವಾಗುವುದಿಲ್ಲ ಎಂಬುದನ್ನು ಮನನವಾಗಿಟ್ಟುಕೊಂಡು ಅವರು ಡಬ್ಬಿಂಗ್ಗೆ ಇಳಿದದ್ದು, ಹೀಗೆ ರವಿಚಂದ್ರನ್ ಅವರೆ ಡಬ್ಬಿಂಗ್ ಮಾಡಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಚಿತ್ರ ರಾಮಾಚಾರಿ ಅನಂತರ ತಮ್ಮ ಸಿನಿಮಾಗಳಿಗೆ ತಾವೇ ಡಬ್ಬಿಂಗ್ ಮಾಡಿ ಚಿತ್ರಕ್ಕೆ ಮೆರುಗನ್ನು ನೀಡಲು ಪ್ರಯತ್ನಿಸುತ್ತಿದ್ದರು. ಒಟ್ಟಿನಲ್ಲಿ ಶ್ರೀನಿವಾಸ್ ಪ್ರಭು ಅವರ ಶಾರೀರ ಮತ್ತು ರವಿಚಂದ್ರನ್ ಅವರ ಶರೀರ ಎರಡು ಕೂಡ ಅದೆಷ್ಟೋ ಒಂದಿಕೆಯಾಗಿದ್ದು ಎನ್ನುವುದಕ್ಕೆ ಅವರ ಹಿಂದಿನ ಸಿನಿಮಾಗಳೇ ಉದಾಹರಣೆ.

Srinivas Prabhu was a voice-dubbed actor who gave voice to Ravi Chandran.

Get real time updates directly on you device, subscribe now.

Leave a comment