Shankarnag Daughter: ಆಟೋ ರಾಜ ಶಂಕರ್ ನಾಗ್ ಅವರ ಮಗಳು ಮತ್ತು ಅಳಿಯ ಯಾರು ಗೊತ್ತೇ?? ಅಬ್ಬಬ್ಬಾ ಇವರು ಮಾಡುತ್ತಿರುವ ಕೆಲಸ ದೇವರ ಮೆಚ್ಚುವಂತದ್ದು!!
ವೈಲ್ಡ್ಲೈಫ್ ಬಯೋಲಜಿ ವ್ಯಾಸಂಗ ಮಾಡಿರುವ ಕಾವ್ಯರವರಿಗೆ ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿರುವ ಕಾವ್ಯ ನಾಗ್ ಅಪಾರ ಆಸಕ್ತಿ ಇದ್ದು
Shankarnag Daughter: ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷ ರೀತಿಯ ಛಾಪನ್ನು ಮೂಡಿಸಿದಂತಹ ಕರಾಟೆ ಕಿಂಗ್ ಶಂಕರ್ ನಾಗ್ ನಮ್ಮ ಸ್ಯಾಂಡಲ್ವುಡ್ಗೆ ನೀಡಿರುವ ಕೊಡುಗೆ ಅಪಾರ. ಹೌದು ಸ್ನೇಹಿತರೆ ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶನದ ಕ್ಯಾಪ್ಸ್ ಹಾಕಿಯು ಕೂಡ ಅತ್ಯದ್ಭುತ ಸಿನಿಮಾಗಳನ್ನು ನೀಡಿದ್ದಾರೆ.
ಹೀಗೆ ಕ್ರಿಯಾಶೀಲ ಚಿತ್ರಗಳಿಂದ ಜನರ ಮನಸ್ಸನ್ನು ಗೆದ್ದಿದ್ದ ಶಂಕರ್ ನಾಗ್ ಅವರು ಈಗಲೂ ಕೂಡ ಅವರ ಹೃದಯ ಸಿಂಹಾಸನದಲ್ಲಿ ಮೆರೆಯುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಅಭಿಮಾನಿಗಳ ಪಾಲಿನ ಶಂಕ್ರಣ್ಣ ಅವರ ಮಗಳು ಕಾವ್ಯ ನಾಗ್ ಕೂಡ ತಂದೆ ರೀತಿಯಲ್ಲಿ ತನ್ನ ಕ್ರಿಯಾತ್ಮಕ ಕೆಲಸಗಳಿಂದ ಮೆಚ್ಚಿಗೆಯನ್ನು ಗಳಿಸಿಕೊಳ್ಳುತ್ತಿದ್ದಾರೆ.
ಹೌದು ಫ್ರೆಂಡ್ಸ್ ಶಂಕರ್ ನಾಗ್ ಅವರ ಪುತ್ರಿ ಕಾವ್ಯ ನಾಗ್ ಸದ್ಯ ತೆಂಗಿನ ಎಣ್ಣೆ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೌದು ಶಂಕರನಾಗ್ ಮಗಳು ಕೋಕನಸ್ ಎಂಬ ಸಂಸ್ಥೆಯ ಮೂಲಕ ಪರಿಶುದ್ಧ ತೆಂಗಿನ ಹಾಲಿನ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ತಂದೆಯ ಜಮೀನಿನಲ್ಲಿ ರಾಸಾಯನಿಕ ರಹಿತ ಸೋಪ್ ಹಾಗೂ ತೆಂಗಿನ ಎಣ್ಣೆಯನ್ನು ಉತ್ಪಾದನೆ ಮಾಡುವ ಕೋಕನಸ್ ಎಂಬ ಕಂಪನಿ ಹುಟ್ಟುಹಾಕಿ, ಕೆಮಿಕಲ್ ಮುಕ್ತ ಸಾಬೂನು ಮತ್ತು ಎಣ್ಣೆ ಉತ್ಪಾದನೆ ಮಾಡಿ ಮಾರುತ್ತಿದ್ದಾರೆ.
ವೈಲ್ಡ್ಲೈಫ್ ಬಯೋಲಜಿ ವ್ಯಾಸಂಗ ಮಾಡಿರುವ ಕಾವ್ಯರವರಿಗೆ ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿರುವ ಕಾವ್ಯ ನಾಗ್ ಅಪಾರ ಆಸಕ್ತಿ ಇದ್ದು, ಜನರಲ್ಲಿ ವಿದೇಶಿ ಪ್ರಾಡಕ್ಟ್ ಗಳ ಮೇಲಿನ ವ್ಯಾಮೋಹದಿಂದ ಹೊರಬರುವಂತೆ ಮಾಡಲು ದೇಶಿಯ ರಾಸಾಯನಿಕ ಮುಕ್ತ ತೆಂಗಿನ ಎಣ್ಣೆಯನ್ನು ಉತ್ಪಾದಿಸುವ ಕಂಪನಿಯನ್ನು ಶುರುಮಾಡಿದ್ದಾರೆ.
ದೇಶಿಯ ತೆಂಗಿನ ಎಣ್ಣೆಯನ್ನು ತಯಾರಿಸುವ ಬೇಕು ಎಂಬ ಉದ್ದೇಶದಲ್ಲಿ ಇರುವಂತಹ ಕಾವ್ಯ ಅವರ ಈ ಕೆಲಸಕ್ಕೆ ಅವರ ಪತಿ ಕೂಡ ಸಾಥ್ ನೀಡುತ್ತಿದ್ದು, ಹಲವಾರು ಗಣ್ಯ ನಟ-ನಟಿಯರಿಂದ ಕಾವ್ಯ ನಾಗ್ ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರಿಂದ ಅದೆಷ್ಟೋ ಜನ ರೈತರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಅಷ್ಟೇ ಅಲ್ಲದೆ ಇದರಿಂದ ಬಂದಂತಹ ಅರ್ಧದಷ್ಟು ಲಾಭವನ್ನು ಸಮಾಜಸೇವೆಗಾಗಿ ಕಾವ್ಯ ನಾಗ್ ಬಳಸುತ್ತಿದ್ದಾರೆ. ಶಂಕ್ರಣ್ಣನ ಮಗಳು ಕಾವ್ಯ ಅವರ ಕೆಲಸದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.