SP Balasubramaniam Family: ಎಸ್ ಪಿ ಬಾಲಸುಬ್ರಮಣ್ಯಂ ಹೆಂಡತಿ ಇಬ್ಬರು ಮಕ್ಕಳು ಹೇಗಿದ್ದಾರೆ ನೋಡಿ.
ಎಸ್‌ಪಿಬಿ ಅವರು ಮೊದಲನೇದಾಗಿ 1966 ರಲ್ಲಿ ಶ್ರೀ ಶ್ರೀ ಮರ್ಯಾಧ ರಾಮಣ್ಣ ಎನ್ನುವ ಚಿತ್ರದ ಮೂಲಕ ಇವರು ಗಾಯಕರಾಗಿ ಮೊದಲನೆಯದಾಗಿ ಹಾಡನ್ನು ಹಾಡಿ ಸಿನಿಮಾ ಫೀಲ್ಡ್ ಗೆ ಎಂಟ್ರಿ ನೀಡಿದರು.
SP Balasubramaniam Family: ಎಸ್ ಪಿ ಬಿ ಬಾಲಸುಬ್ರಹ್ಮಣ್ಯಂ ಅವರನ್ನು ಗಾಯನದ ಕೋಗಿಲೆ ಎಂದು ಹೇಳಬಹುದು. ಹೌದು ಇವರು ಹಾಡಿರುವ ಹಾಡುಗಳ ಒಂದ ಎರಡ. ಇನ್ನು ಇವರ ಪೂರ್ತಿ ಹೆಸರು ಶ್ರೀಪತಿ ಪಂಡಿತರಾದೂಲ ಬಾಲಸುಬ್ರಮಣ್ಯಂ ಎಂದು. ಇನ್ನು ಇವರನ್ನು ಶಾರ್ಟ್ ಫಾರ್ಮ್ ಆಗಿ ಎಸ್‌ಪಿಬಿ, ಎಸ್ ಪಿ ಬಾಲು, ಬಾಲು ಎನ್ನುವ ಹೆಸರುಗಳಲ್ಲಿ ಕರೆಯುತ್ತಿದ್ದರು.
ಇವರು ಕೇವಲ ಗಾಯಕ ಮಾತ್ರ ಅಲ್ಲ ನಟ, ಸಂಗೀತ ನಿರ್ದೇಶಕರು, ಡಬ್ಬಿಂಗ್ ಆರ್ಟಿಸ್ಟ್ ಮತ್ತು ಸಿನಿಮಾ ನಿರ್ಮಾಪಕರು ಕೂಡ ಹೌದು. ಇವರನ್ನು ಗ್ರೇಟೆಸ್ಟ್ ಇಂಡಿಯನ್ ಸಿಂಗರ್ಸ್ ಆಫ್ ಆಲ್ ದಿ ಟೈಮ್ ಎಂದು ಗುರುತಿಸಿದ್ದರು. ಇನ್ನು ಎಸ್ ಪಿ ಬಿ ಅವರು ಜೂನ್ 4 1946 ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಜನಿಸಿದ್ದರು.

ಎಸ್‌ಪಿಬಿ ಅವರು ಮೊದಲನೇದಾಗಿ 1966 ರಲ್ಲಿ ಶ್ರೀ ಶ್ರೀ ಮರ್ಯಾಧ ರಾಮಣ್ಣ ಎನ್ನುವ ಚಿತ್ರದ ಮೂಲಕ ಇವರು ಗಾಯಕರಾಗಿ ಮೊದಲನೆಯದಾಗಿ ಹಾಡನ್ನು ಹಾಡಿ ಸಿನಿಮಾ ಫೀಲ್ಡ್ ಗೆ ಎಂಟ್ರಿ ನೀಡಿದರು. ಇದಾದ ಮೇಲೆ ಇವರು ತೆಲುಗು ಕನ್ನಡ ತಮಿಳು ಮಲಯಾಳಂ ಹಿಂದಿ ಇನ್ನು ಸಾಕಷ್ಟು ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿ ಉತ್ತಮ ಗಾಯಕರಾಗಿ ಹೆಸರು ಮಾಡಿದರು.
ಇನ್ನೂ ಇವರು 5 ವರ್ಷದಲ್ಲಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಸುಮಾರು ಆರು ನ್ಯಾಷನಲ್ ಫಿಲಂ ಅವಾರ್ಡ್ ಗಳನ್ನು ಗಳಿಸಿದರು. ಹಾಗೆ 25 ಆಂಧ್ರಪ್ರದೇಶ ರಾಜ್ಯದ ನಂದಿ ಅವಾರ್ಡ್ ಗಳನ್ನು ಗಳಿಸಿದರು ಜೊತೆಗೆ ಕರ್ನಾಟಕ ತಮಿಳುನಾಡು ರಾಜ್ಯ ಪ್ರಶಸ್ತಿಗಳನ್ನು ಸಹ ಗಳಿಸಿ ಆರು ಫಿಲಂ ಫೇರ್ ಅವಾರ್ಡ್ ಗಳನ್ನು ಸಹ ಗಳಿಸಿದ್ದಾರೆ. ಹೀಗೆ ಸಾಕಷ್ಟು ಅವಾರ್ಡ್ ಗಳನ್ನು ಗಳಿಸಿರುವ ಏಕೈಕ ಗಾಯಕ ಎಂದು ಹೇಳಬಹುದು.
ಇನ್ನು ಇವರು ಸುಮಾರು 16 ಭಾಷೆಗಳಲ್ಲಿ 40,000 ಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಹಾಗೆ ಈ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪಟ್ಟವನ್ನು ಕೂಡ ಸಾಧಿಸಿದರು. ಹಾಗೆ ಇವರಿಗೆ ಎನ್ ಟಿ ಆರ್ ನ್ಯಾಷನಲ್ ಅವಾರ್ಡ್ ಕೂಡ ದೊರಕಿದೆ ಜೊತೆಗೆ ಇಂಡಿಯನ್ ಫಿಲಂ ಪರ್ಸನಾಲಿಟಿ ಆಫ್ ದ ಇಯರ್ ಅವಾರ್ಡ್ ಕೂಡ ದೊರಕಿದೆ. ಹಾಗೆಯೇ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಕೂಡ ಭಾರತದ ಸರ್ಕಾರದಿಂದ ದೊರಕಿದೆ.
ಇನ್ನು ಬಾಲಸುಬ್ರಮಣ್ಯಂ ಅವರು 1969 ರಲ್ಲಿ ಸಾವಿತ್ರಿ ಎನ್ನುವವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಪಲ್ಲವಿ ಮತ್ತು ಎಸ್ ಪಿ ಚರಣ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇದರಲ್ಲಿ ಎಸ್ ಪಿ ಚರಣ್ ಅವರು ಸಿನಿಮಾ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಜೊತೆಗೆ ಇವರು ಕೂಡ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ನಾವೆಲ್ಲರೂ ಬಾಲಸುಬ್ರಹ್ಮಣ್ಯಂ ಅವರನ್ನು 25 ಸಪ್ಟಂಬರ್ 2020 ರಂದು ಕಳೆದುಕೊಂಡೆವು. ಇಲ್ಲಿ ನೀವು ಎಸ್ ಪಿ ಬಿ ಬಾಲಸುಬ್ರಹ್ಮಣ್ಯಂ ಅವರ ಕುಟುಂಬದ ಸುಂದರ ಫೋಟೋಗಳನ್ನು ನೋಡಬಹುದು.
See how SP Balasubramaniam’s wife and two children are doing.
ಯಾವ ಕಾರ್ಯಕ್ರಮದಲ್ಲಿ ಕಾಣದ, ಎಸ್ ಪಿ ಬಾಲಸುಬ್ರಮಣ್ಯಂ ಹೆಂಡತಿ ಮತ್ತು ಇಬ್ಬರು ಮಕ್ಕಳು ಹೇಗಿದ್ದಾರೆ ನೋಡಿ..!!
ಸ್ಯಾಂಡಲ್ ವುಡ್ ನ ಕೆಲ ನಟ ನಟಿಯರಲ್ಲಿ ಯಾರ್ ಯಾರು ಗಾಯಕರು ಇದ್ದಾರೆ ಗೊತ್ತೇ ?? ನೀವು ನಂಬಲು ಸಾಧ್ಯವಿಲ್ಲ ಬಿಡಿ !
ಎದೆ ತುಂಬಿ ಹಾಡುವೆನು ಸೂರ್ಯಕಾಂತ್ ಹಾಡು ಕೇಳಿದರೆ ಕಣ್ಣೀರು ಬರುತ್ತೆ, ಅದಕ್ಕಾಗಿ ಇವರಿಗೆ ಸಿಕ್ಕ ಹಣವೇಷ್ಟು ಗೊತ್ತೇ ??
