Actress Bhanupriya: ನಟಿ ಭಾನುಪ್ರಿಯ ಅವರ ಸಹೋದರಿ ಯಾರು ಗೊತ್ತಾ ಈಕೆ ಕೂಡ ನಟಿ.
ಇನ್ನೂ ನಟಿ ಭಾನುಪ್ರಿಯ ಅವರಿಗೆ ಪ್ರಸ್ತುತ 56 ವರ್ಷಗಳಾಗಿವೆ. ನಟಿ ಭಾನುಪ್ರಿಯ ಅವರು ಮೊದಲನೆಯದಾಗಿ ತಮಿಳುನಲ್ಲಿ 1983 ರಲ್ಲಿ ನಲ್ಲ ಪೆಸುಂಗಲ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿ ಕೆರಿಯರನ್ನು ಶುರು ಮಾಡಿಕೊಂಡರು.
Actress Bhanupriya: ಖ್ಯಾತ ನಾಯಕಿ ಮತ್ತು ಪೋಷಕ ಪಾತ್ರಗಳಲ್ಲಿ ಫೇಮಸ್ ಆಗಿರುವ ಭಾನುಪ್ರಿಯ ಅವರು ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಜನವರಿ 15 1967 ರಂದು ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಯಲ್ಲಿ ಜನಿಸಿದ್ದಾರೆ. ಇನ್ನು ಇವರ ಮೊದಲಿನ ಹೆಸರು ಮಂಗ ಬಾನು ಎಂದು. ಹಾಗೆಯೇ ಇವರು ತೆಲುಗು ತಮಿಳು ಮಲಯಾಳಂ ಕನ್ನಡ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನೂ ನಟಿ ಭಾನುಪ್ರಿಯ ಅವರಿಗೆ ಪ್ರಸ್ತುತ 56 ವರ್ಷಗಳಾಗಿವೆ. ನಟಿ ಭಾನುಪ್ರಿಯ ಅವರು ಮೊದಲನೆಯದಾಗಿ ತಮಿಳುನಲ್ಲಿ 1983 ರಲ್ಲಿ ನಲ್ಲ ಪೆಸುಂಗಲ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿ ಕೆರಿಯರನ್ನು ಶುರು ಮಾಡಿಕೊಂಡರು. ಇನ್ನು ನಮ್ಮ ಕನ್ನಡದಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕನ್ನಡ ಇಂಡಸ್ಟ್ರಿಯಲ್ಲೂ ಕೂಡ ಒಂದು ಗುರುತನ್ನು ಸಾಧಿಸಿಕೊಂಡಿದ್ದಾರೆ.
ಹೌದು ನಟಿ ಭಾನುಪ್ರಿಯ ಅವರು 1994 ರಲ್ಲಿ ರಸಿಕ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಇದಾದ ಮೇಲೆ ದೇವರ ಮಗ, ಸಿಂಹಾದ್ರಿಯ ಸಿಂಹ, ಕದಂಬ, ಮೇಷ್ಟ್ರು ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಗೆಯೇ ಭಾನುಪ್ರಿಯ ಅವರು ಕೆಲ ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ.
ಇನ್ನು ಇವರು 1998 ರಲ್ಲಿ ಆದರ್ಶ್ ಕೌಶಲ್ ಎನ್ನುವವರ ಜೊತೆ ವಿವಾಹ ಮಾಡಿಕೊಂಡರು. ಆದರೆ ಕೆಲ ಅನಾರೋಗ್ಯ ಸಮಸ್ಯೆಗಳಿಂದ ಕೌಶಲ್ ಅವರು ಸಾವನ್ನಪ್ಪಿದರು. ಇವರಿಗೆ ಅಭಿನಯ ಎನ್ನುವ ಮಗಳು ಸಹ ಇದ್ದಾರೆ. ಇನ್ನು ನಟಿ ಬಾನುಪ್ರಿಯ ಅವರಿಗೆ ನಟಿ ಶಾಂತಿಪ್ರಿಯ ಅವರು ಸಹೋದರಿಯಾಗಬೇಕು. ಆದರೆ ಈ ವಿಷಯ ಸಾಕಷ್ಟು ಜನರಿಗೆ ಗೊತ್ತೇ ಇರುವುದಿಲ್ಲ.
ಹೌದು ಶಾಂತಿಪ್ರಿಯ ಅವರು ಕೂಡ ತೆಲುಗು ತಮಿಳು ಮತ್ತು ಹಿಂದಿ ಭಾಷೆಗಳ ಚಿತ್ರಗಳಲ್ಲಿ ಖ್ಯಾತಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ತಮಿಳಿನಲ್ಲಿ ಮೊದಲನೆಯದಾಗಿ 1987 ರಲ್ಲಿ ಎಂಗ ವೂರು ಪಟ್ಟುಕರಣ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿ ಪಯಣವನ್ನು ಶುರು ಮಾಡಿಕೊಂಡರು. ಹಾಗೆ ನಮ್ಮ ಕನ್ನಡದಲ್ಲಿ 1989 ರಲ್ಲಿ ಅಂತಿಂಥ ಗಂಡು ನಾನಲ್ಲ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.
Do you know who is the sister of actress Bhanupriya, she is also an actress.
ಇವರ ನಟನೆ ಎಂದಿಗೂ ಮರೆಯಲು ಸಾಧ್ಯವಿಲ್ಲ ನಟರಷ್ಟೇ ಜನಪ್ರಿಯರಾದ ಪೋಷಕ ನಟರು..!!
ಸ್ಯಾಂಡಲ್ ವುಡ್ ನಲ್ಲಿ ಮರೆಯಲಾಗದ ದೈತ್ಯ ಪೋಷಕ ನಟರು, ಯಾರ್ ಯಾರು ಗೊತ್ತೇ ?? ಅದರಲ್ಲಿ ನಂಬರ್ ಒನ್ ಯಾರು ??
Job Offer: ಈ ಕೆಲಸಕ್ಕೆ ಒಂದಲ್ಲ ಎರಡಲ್ಲ ಬರೋಬ್ಬರಿ 54 ಸಾವಿರ ಸಂಬಳ ಈಗಲೇ ಇಲ್ಲಿರುವ ವಿಳಾಸಕ್ಕೆ ಅರ್ಜಿ ಕಳುಯಿಸಿ.