Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕೊನೆಗೂ ಬಯಲಾಯಿತು ವಿಷ್ಣುವರ್ಧನ್ ರವರ ಸಾವಿನ ಹಿಂದಿನ ರಹಸ್ಯ ಅದೇನು ಗೊತ್ತೇ??

ವಿಷ್ಣುವರ್ಧನ್ ರವರು ವಿಧಿವಶ ಆಗಿ 13 ವರ್ಷ ಕಳೆದರೂ ಸಹ ಅವರು ನಮ್ಮೊಂದಿಗೆ ಇಲ್ಲ ಎಂಬ ನಿಜವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗಲೂ ಸಹ ಅವರ ಅಭಿಮಾನಿಗಳು ಅವರ ಹುಟ್ಟು ಹಬ್ಬದ ದಿನ ಆಗಲಿ ಅಥವಾ ಅವರ ಮರಣ ಹೊಂದಿದ ದಿನ ಆಗಲಿ ಮರೆತಿಲ್ಲ. ಅವರ ಅಭಿಮಾನಿಗಳು ಇಂದಿಗೂ ಸಹ ವಿಷ್ಣುವರ್ಧನ್ ರವರು ಬದುಕಿಯೇ ಇದ್ದಾರೆ ನಮ್ಮ ನಡುವೆಯೇ ಇದ್ದಾರೆ ಎಂಬಂತೆಯೇ ವರ್ತಿಸುತ್ತಾರೆ.

ಹಾಗಾದರೆ ಯಾವುದೇ ರೀತಿಯ ಕಾಯಿಲೆ ಆಗಲಿ ಬೇರೆ ಚಟಗಳು ಇರುವುದಾಗಲಿ, ವಿಷ್ಣುವರ್ಧನ್ ರವರಲ್ಲಿ ಕಂಡು ಬರಲಿಲ್ಲ. ಆದರೂ ಸಹ ಯಾಕೆ ಅವರು ಇದ್ದಕ್ಕಿದ್ದಂತೆಯೇ ಮರಣವನ್ನು ಹೊಂದಿದರು ಎಂಬ ಒಂದು ಸಣ್ಣ ಯೋಚನೆ ನಿಮ್ಮ ತಲೆಯಲ್ಲೂ ಸಹ ಬಂದಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

Hindustan Prime Photo

ವಿಷ್ಣುವರ್ಧನ್ ರವರು ಆಪ್ತರಕ್ಷಕ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸ್ವಲ್ಪ ದಿನಗಳ ಹಿಂದೆ ಅವರು ತುಂಬಾ ದಪ್ಪವಾಗಿದ್ದರು. ನಂತರ ಅವರ ಅಭಿಮಾನಿಗಳು ತೋರಿಸುವ ಪ್ರೀತಿಯಿಂದ ಆಗಲಿ ಹಾಗೂ ಸಿನಿಮಾರಂಗಕ್ಕೆ ತಾವು ನೀಡಬೇಕಾಗಿದ್ದ ಕೊಡುಗೆಯಿಂದಾಗಿ ಅವರ ಸ್ನೇಹಿತರ ಮಾತಿನಂತೆ ಅವರು ಅಮೆರಿಕಾಗೆ ಹೋಗಿ ಸರ್ಜರಿಯನ್ನು ಮಾಡಿಸಿಕೊಂಡರು. ಇದೇ ಕಾರಣ ಅವರು ಈ ಸ್ಥಿತಿಗೆ ಬರಲು. ಹಾಗಾದರೆ ನಂತರ ಏನಾಯ್ತು ಎಂಬುದನ್ನು ತಿಳಿಯುತ್ತ ಹೋದರೆ

ಸರ್ಜರಿ ಮಾಡಿಸಿಕೊಂಡಂತಹ ಸ್ವಲ್ಪ ದಿನಗಳಿಗೆ ಅವರಿಗೆ ರಕ್ತದೊತ್ತಡ ಶುರುವಾಯಿತು. ಹೀಗೆ ರಕ್ತದ ಒತ್ತಡವನ್ನು ಅನುಭವಿಸುತ್ತ ಇರಬೇಕಾದರೆಯೇ ಹಿಂದೆಯೇ ಸಕ್ಕರೆ ಕಾಯಿಲೆ ಕೂಡ ಅವರು ಎದುರಿಸಬೇಕಾಗಿತ್ತು. ಮತ್ತು ಸ್ವಲ್ಪ ದಿನಗಳಲ್ಲಿಯೇ ಅವರಿಗೆ ಹೃದಯಕ್ಕೆ ಸಂಬಂಧಿಸಿದಂತಹ ಒಂದು ಕಾಯಿಲೆಯು ಅವರನ್ನು ಆವರಿಸಿತು. ನಂತರ ಸಕ್ಕರೆ ಖಾಲಿ ಕಾಯಿಲೆಯಿಂದ ಅವರ ಕಾಲುಗಳಲ್ಲಿ ಗಾಯಗಳು ಮತ್ತು ನೋವು ಕಾಣಲು ಶುರುವಾಯಿತು.

ಅಷ್ಟೇ ಅಲ್ಲದೆ ಅವರಿಗೆ ಹೃದಯ ಸಂಬಂಧಿತ ಕಾಯಿಲೆ ಇದ್ದದ್ದು ಅವರ ಕುಟುಂಬಕ್ಕೆ ಬಿಟ್ಟರೆ ಬೇರೆ ಯಾರಿಗೂ ಸಹ ತಿಳಿದಿರಲಿಲ್ಲ. ಇದನ್ನು ಸಹ ಅವರು ಮೈಸೂರಿಗೆ ಹೋಗಿ ತೆರಪಿ ಮಾಡಿಸಿಕೊಳ್ಳುವುದರ ಮೂಲಕ ಸರಿಪಡಿಸಿಕೊಂಡರು. ಆದರೆ ಸಕ್ಕರೆ ಕಾಯಿಲೆಯಿಂದ ಆದಂತಹ ನೋವು ಅವರನ್ನು ತುಂಬಾ ಹಿಂಬಾಲಿಸುತ್ತಿತ್ತು. ಹೀಗೆ ಒಂದರ ಮೇಲೊಂದು ಕಷ್ಟಗಳನ್ನು ಅವರು ಅನುಭವಿಸುತ್ತಿದ್ದರು.

ಅದೇ ಸಮಯದಲ್ಲಿ ಅವರ ಸಹೋದರಿಯರು ಮೂರು ಜನರು ಮರಣದಿಂದ ತುಂಬಾ ನೊಂದಿಕೊಂಡಂತಹ ವಿಷ್ಣುವರ್ಧನ್ ರವರಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಅವರು ಡಿಪ್ರೆಶನ್ ಗೆ ಹೋದರು. ಸಣ್ಣ ಸಣ್ಣ ವಿಷಯಕ್ಕೂ ಕೂಡ ಅವರು ತುಂಬಾ ಹೊತ್ತನ್ನು ನೀಡುತ್ತಿದ್ದರು ಅಷ್ಟೇ ಅಲ್ಲದೆ ಅವರು ಮರಣ ಹೊಂದುವ ಹಿಂದಿನ ದಿನ ಸಿ ಅಶ್ವಥ್ ರವರ ಮರಣ ಕೂಡ ಸಂಭವಿಸಿತು. ಅಂದಿನ ದಿನ ಅವರು ಕುಟುಂಬದೊಂದಿಗೆ ಸತ್ತರೆ ಈ ರೀತಿ ಸಾಯಬೇಕು ಎಲ್ಲರ ಹತ್ತಿರ ಹೊಗಳಿಸಿಕೊಂಡು ಸಾಯಬೇಕು ತಮ್ಮ ಕುಟುಂಬದೊಂದಿಗೆ ಹೇಳುತ್ತಿದ್ದರು.

ಇದಾದ ಮರುದಿನವೇ ವಿಷ್ಣುವರ್ಧನ್ ರವರು ಇನ್ನಿಲ್ಲ ಎಂಬ ಸುದ್ದಿ ಕರ್ನಾಟಕದ ಎಲ್ಲೆ ಆವರಿಸಿತು. ನಂತರ ಅವರ ಮೃತ ದೇಹವನ್ನು ಮೈಸೂರಿನಿಂದ ಬೆಂಗಳೂರಿಗೆ ತಂದು ಮಾಡಬೇಕಾದಂತಹ ಎಲ್ಲಾ ಸಂಪ್ರದಾಯಗಳನ್ನು ಸಹ ಮಾಡಲಾಯಿತು. ಏನೇ ಆಗಲಿ ಅವರು ಸತ್ತು 13 ವರ್ಷಗಳಾದರು ನಮ್ಮ ನಡುವೆಯೇ ಇದ್ದಾರೆ ಎಂಬ ಅನುಬೂತಿಯನ್ನು ವಿಷ್ಣುವರ್ಧನ್ ರವರು ನಮ್ಮೆಲ್ಲರಿಗೂ ಸಹ ನೀಡಿದ್ದಾರೆ.

Leave a comment