Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Deepa Sannidhi: ನಟಿ ದೀಪಾ ಸನ್ನಿಧಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತೇ?

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಇವರ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ, ಪರಮಾತ್ಮ ಸಿನಿಮಾವನ್ನು ಎಂದಾದರೂ ಮರೆಯಲು ಸಾಧ್ಯವೇ??

Get real time updates directly on you device, subscribe now.

Deepa Sannidhi: ಸ್ನೇಹಿತರೆ ಜಾನು, ಪರಮಾತ್ಮ, ಚಕ್ರವರ್ತಿ, ಸಾರಥಿಯಂತಹ ಸಿನಿಮಾಗಳನ್ನು ನೀಡಿದಂತಹ ದೀಪ ಸನ್ನಿಧಿ ಕಣ್ಮರೆಯಾಗಿರುವುದು ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಹೌದು ಸ್ನೇಹಿತರೆ ಸ್ಯಾಂಡಲ್ವುಡ್ನ ಅದ್ಭುತ ಸುಂದರಿ ಎಂದೇ ಕರೆಸಿಕೊಳ್ಳುತ್ತಿದ್ದ ದೀಪ ಸನ್ನಿಧಿ ತಮ್ಮ ಮುದ್ದು ಮುದ್ದು ಮಾತುಗಳಿಂದ ಹಾಗೂ ತುಂಟ ನಗುವಿನಿಂದ ಎಲ್ಲರ ಮನಸ್ಸನ್ನು ಕದ್ದಿದ್ದರು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಇವರ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ, ಪರಮಾತ್ಮ ಸಿನಿಮಾವನ್ನು ಎಂದಾದರೂ ಮರೆಯಲು ಸಾಧ್ಯವೇ?? ತೆರೆಯ ಮೇಲೆ ಈ ಜೋಡಿ ಮಾಡಿದ್ದಂತಹ ಮೂಡಿಗೆ ಅಭಿಮಾನಿಗಳು ಮನಸೋತು ಹೋಗಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಜಾನು ಸಿನಿಮಾದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿ, ನಂತರ ಚಕ್ರವರ್ತಿ ಸಿನಿಮಾದಲ್ಲಿ ಚಾಲೆಂಜ್ ಸ್ಟಾರ್ ದರ್ಶನ್ ಅವರ ಮುದ್ದಾದ ಮಡದಿಯಾಗಿ ಕಾಣಿಸಿಕೊಂಡ ದೀಪಾ ಸನ್ನಿಧಿ ಆಫರ್ಗಳ ಉತ್ತುಂಗದಲ್ಲಿ ಇರಬೇಕಾದರೆ ಸಿನಿಮಾರಂಗವನ್ನು ತೊರೆದಿದ್ದರು.

ಅತಿ ಕಡಿಮೆ ಅವಧಿಯಲ್ಲಿ ದೊಡ್ಡಮಟ್ಟದ ಸಕ್ಸಸ್ ಕಂಡ ನಟಿಯರ ಲಿಸ್ಟಿನಲ್ಲಿ ದೀಪ ಸನ್ನಿಧಿ ಕೂಡ ಒಬ್ಬರು. ಕನ್ನಡದ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದರೂ ಕನ್ನಡಿಗರ ಮನಧರಸಿಯಾಗಿ ಜಾಗ ಪಡೆದುಕೊಂಡಿದ್ದ ದೀಪ ಸನ್ನಿಧಿ ಇದ್ದಕ್ಕಿದ್ದಂತೆ ಸಿನಿಮಾ ಇಂಡಸ್ಟ್ರಿಯಿಂದ ದೂರ ಆಗೋಕೆ ಕಾರಣ ಅವರ ಲವ್ ವಿಚಾರ.

ಹೌದು ತಮಿಳಿನ ಖ್ಯಾತ ನಟ ಸಿದ್ದಾರ್ಥ ಜೊತೆ ರಿಲೇಷನ್ಶಿಪ್ನಲ್ಲಿದ್ದ ದೀಪ ಸನ್ನಿಧಿ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಕಾರಣ ತಿಳಿಯುತ್ತಿದ್ದಂತೆ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ತಮ್ಮ ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಕದ್ದಂತಹ ದೀಪಾ ಸನ್ನಿಧಿ ಮೂಲತಹ ಚಿಕ್ಕಮಂಗಳೂರಿನವರು.

ಈಕೆಯ ನಿಜವಾದ ಹೆಸರು ರಹಸ್ಯ, ಎಜುಕೇಶನ್ ಜೊತೆಗೆ ಮಾಡಲಿಂಗ್ ಲೋಕದಲ್ಲಿಯೂ ಕೂಡ ಗುರುತಿಸಿಕೊಂಡಿದ್ದ ದೀಪ ಸನ್ನಿಧಿ ಚಿಕ್ಕಂದಿನಿಂದಲೂ ಕೂಡ ನಟಿಯಾಗಬೇಕು ಎಂಬ ಆಸೆಯನ್ನು ಹೊತ್ತವರು. ಇದಕ್ಕೆ ಅದೃಷ್ಟವೆಂಬಂತೆ ತಮ್ಮ ಮೊದಲ ಸಿನಿಮಾದಲ್ಲೇ ನಟ ದರ್ಶನ್ ಅವರ ಜೊತೆ ಸಾರಥಿ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಹೀಗೆ ಸ್ಯಾಂಡಲ್ವುಡ್ನಲ್ಲಿ ಅವಕಾಶಗಳ ಸುರಿಮಳೆಯಿದ್ದರೂ ಕೂಡ ದೀಪ ಸನ್ನಿಧಿ ಅವರನ್ನು ಕುಗ್ಗಿಸಿದ್ದು ಸಿದ್ದಾರ್ಥರವರ ವಿಚಾರ. ನಟಿ ದೀಪ ಸನ್ನಿಧಿ ಸಿದ್ಧಾರ್ಥ್ ಅವರನ್ನು ಮನಃಸ್ಪೂರ್ತಿಯಾಗಿ ಪ್ರೀತಿಸುತ್ತಿದ್ದರು. ಆದ್ರೆ ಯಾವಾಗ ಸಿದ್ದಾರ್ಥ ಸಮಂತಾರೊಂದಿಗೆ ಕ್ಲೋಸ್ ಆಗಿ ವರ್ತಿಸಲು ಶುರು ಮಾಡಿದರೋ, ಆಗ ಕೊಂಚ ಬೇಸರ ದೀಪಾ ಸನ್ನಿಧಿ ಸಂಪೂರ್ಣ ಚಿತ್ರರಂಗದಿಂದ ದೂರ ಉಳಿದು ಬಿಡುವ ನಿರ್ಧಾರ ಮಾಡಿಬಿಡುತ್ತಾರೆ.

ಹೌದು ಖ್ಯಾತ ನಟಿ ಸಮಂತಾ ಸಿದ್ದಾರ್ಥ ಅವರ ಜೊತೆ ತುಂಬಾ ಕ್ಲೋಸ್ ಆಗಿದ್ದ ಕಾರಣ ದೀಪ ಸನ್ನಿಧಿ ಸಿದ್ದಾರ್ಥ್ ಅವರಿಂದ ದೂರ ಉಳಿಯುತ್ತಾರೆ. ಅಲ್ಲದೆ ಈ ಕಾರಣದಿಂದಾಗಿ ಕುಗ್ಗಿಹೋದ ದೀಪ ಸನ್ನಿಧಿ ಚಿತ್ರರಂಗದ ಬೇಡ ನಿರ್ಧಾರ ಮಾಡಿರಬಹುದು. ಏನೇ ಆಗಲಿ ಇಂತಹ ಅದ್ಭುತ ನಟಿಯ ಕಂಬ್ಯಾಕ್ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ.

Do you know where and how actress Deepa Sannidhi is now?

 

Get real time updates directly on you device, subscribe now.

Leave a comment