Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Midnight Sleep: ಪ್ರತಿದಿನ ಮಧ್ಯರಾತ್ರಿ ವೇಳೆಯಲ್ಲೇ ನಿದ್ದೆ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ, ತಪ್ಪದೆ ತಿಳಿಯಿರಿ.

ನೈಟ್ ಶಿಫ್ಟ್ ಕೆಲಸಕ್ಕೆ ಹೋಗುವವರಿಗೆ ತಡರಾತ್ರಿ ಆದರೂ ನಿದ್ದೆ ಮಾಡಲು ಆಗುವುದಿಲ್ಲ, ಅಂಥವರಿಗೆ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಶುರುವಾಗುತ್ತದೆ,

Midnight Sleep: ಮನುಷ್ಯನ ಜೀವನದಲ್ಲಿ ನಿದ್ದೆ ಎನ್ನುವುದು ಬಹಳ ಮುಖ್ಯ, ನಿದ್ದೆ ಮಾಡುವುದರಿಂದ ಮನುಷ್ಯನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡು ರೀತಿಯಲ್ಲಿ ವಿಶ್ರಾಂತಿ ಸಿಗುತ್ತದೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆದರೆ ಹಲವಾರು ಜನರು ಸ್ಲೀಪ್ ಸೈಕಲ್ (Sleep Cycle) ಅನ್ನು ಚೆನ್ನಾಗಿ ಇಟ್ಟುಕೊಳ್ಳುವುದಿಲ್ಲ. ಪ್ರತಿದಿನ ಸರಿಯಾಗಿ ನಿದ್ದೆ ಮಾಡದೆ, ಮಧ್ಯರಾತ್ರಿ ವರೆಗು ಎಚ್ಚರವಿದ್ದು, ತಡವಾಗಿ ಮಲಗುತ್ತಾರೆ, ಹಾಗೆಯೇ ತಡವಾಗಿ ಏಳುತ್ತಾರೆ. ಇದು ಒಳ್ಳೆಯ ಅಭ್ಯಾಸ ಅಲ್ಲ.

ತಡವಾಗಿ ಮಲಗುವುದರಿಂದ ಏನಾಗುತ್ತದೆ?

ನೈಟ್ ಶಿಫ್ಟ್ ಕೆಲಸಕ್ಕೆ ಹೋಗುವವರಿಗೆ ತಡರಾತ್ರಿ ಆದರೂ ನಿದ್ದೆ ಮಾಡಲು ಆಗುವುದಿಲ್ಲ, ಅಂಥವರಿಗೆ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಶುರುವಾಗುತ್ತದೆ, ಬಹಳ ಸಮಯ ಇರುವಂಥ ಸಮಸ್ಯೆಗಳಿಗೂ ಈ ಅಭ್ಯಾಸ ಕಾರಣ ಆಗಬಹುದು. ವೈದ್ಯರು ಹೇಳುವ ಪ್ರಕಾರ ಪ್ರತಿದಿನ ತಡವಾಗಿ ನಿದ್ದೆ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ, ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ಆಗುವುದಿಲ್ಲ, ಇದೆಲ್ಲವೂ ಬೈಪೋಲಾರ್ ಡಿಸಾರ್ಡರ್( Bipolar disorder), ಮಾನಸಿಕ ಖಿನ್ನತೆ, Anxiety ಇಂಥ ಸಮಸ್ಯೆಗಳು ಬರುವ ಹಾಗೆ ಮಾಡಬಹುದು. ಎಂದು ವೈದ್ಯರು ಹೇಳುತ್ತಾರೆ.

ಪ್ರತಿ ದಿನ ರಾತ್ರಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಿದರೆ, ನಿಮ್ಮ ದೇಹದ ಎಲ್ಲ ಅಂಗಗಳಿಗೆ ಮತ್ತು ಮನಸ್ಸಿಗೆ ಎರಡಕ್ಕೂ ಕೂಡ ವಿಶ್ರಾಂತಿ ಸಿಗುತ್ತದೆ. ತಡರಾತ್ರಿ ವರೆಗು ಎಚ್ಚರವಿದ್ದು ಮಲಗುವವರಿಗೆ ಆಯುಷ್ಯ ಕೂಡ ಕಮ್ಮಿ ಆಗುತ್ತದೆ ಎನ್ನುವ ಮಾತಿದೆ. ಒಂದು ವೇಳೆ ನಿಮಗೂ ಈ ಥರದ ಅಭ್ಯಾಸ ಇದ್ದರೆ ನಿಮಗೆ ಏನೆಲ್ಲಾ ತೊಂದರೆಗಳು ಬರಬಹುದು ಎಂದು ಈಗ ತಿಳಿಯೋಣ..

ತಡವಾಗಿ ಮಲಗುವುದರಿಂದ ಆಗಬಹುದಾದ ಸಮಸ್ಯೆಗಳು:

1. ನಮ್ಮ ದೇಹದಲ್ಲಿರುವ ನ್ಯಾಚುರಲ್ ಸಿರ್ಕಾಡಿಯನ್ ಚಲನೆಯನ್ನು (Natural Circadian Cycle) ಅವಾಯ್ಡ್ ಮಾಡುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಸರಿಯಾಗಿ ಆಗುವುದಿಲ್ಲ, ದೇಹದಲ್ಲಿ ಹೀಟ್ ಜಾಸ್ತಿ ಆಗುವ ಹಾಗೆ ಮಾಡುತ್ತದೆ.

2. ಬಹಳ ದಿನಗಳು ತಡವಾಗಿ ನಿದ್ದೆ ಮಾಡಿದರೆ ಅದರಿಂದ ನಿಮ್ಮ ಬುದ್ಧಿ ಶಕ್ತಿ ಕ್ಷೀಣಿಸುತ್ತದೆ, ಇದರಿಂದ ಕಾನ್ಸಟ್ರೇಷನ್ ಕಡಿಮೆ ಆಗುತ್ತದೆ. ಸ್ಟ್ರೆಸ್, ದೇಹದ ತೂಕದ ಮೇಲೆ ಇದೆಲ್ಲವೂ ಪರಿಣಾಮ ಬೀರಬಹುದು.

3. ಬಹಳ ಸಮಯ ನಿದ್ದೆ ಸರಿಯಾಗಿ ಆಗಲಿಲ್ಲ ಎಂದರೆ ಡಿಫೆನ್ಸ್ ಮೆಕ್ಯಾನಿಸಮ್ (Defense Mechanism) ವೀಕ್ ಆಗುತ್ತದೆ. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ.

4. ತಡರಾತ್ರಿ ಮಲಗುವುದರಿಂದ ಚಯಾಪಚಯ ಕ್ರಿಯೆಯಲ್ಲಿ ಸಮಸ್ಯೆ ಉಂಟಾಗಿ, ಅದರಿಂದ ದೇಹದ ತೂಕ ಜಾಸ್ತಿ ಆಗಬಹುದು, ಇನ್ಸುಲಿನ್ ಉತ್ಪಾದನೆಯಲ್ಲಿ ಸಮಸ್ಯೆ ಉಂಟಾಗಬಹುದು.

5. ರಾತ್ರಿ ಲೇಟ್ ಆಗಿ ಮಲಗುವುದರಿಂದ ಬೆಳಗಿನ ಜಾವ ಸೂರ್ಯನ ಬೆಳಕನ್ನು ದೇಹ ಪಡೆಯುವುದು ಕಡಿಮೆ ಆಗುತ್ತದೆ. ಇದೆಲ್ಲವೂ ಮನುಷ್ಯನ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬಿಪಿ ಕೊಲೆಸ್ಟ್ರಾಲ್ ಕೂಡ ಜಾಸ್ತಿಯಾಗುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಿ.

Do you sleep at midnight every day? Then this news is for you.

Leave a comment