Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vishnuvardhan Remuneration: ಸಾಲು ಹಿಟ್ ಸಿನಿಮಾಗಳನ್ನೇ ನೀಡುತ್ತಿದ್ದ ವಿಷ್ಣುದಾದಾ ಒಂದು ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೆ??

ತಮ್ಮದೇ ಆದಂತಹ ವಿಶೇಷ ಕಥಾಹಂದರಗಳನ್ನು ಹೊಂದಿರುವಂತಹ ಹಾಗೂ ತಮಗೆ ಸೂಕ್ತವೆನಿಸುವ ಪಾತ್ರಗಳನ್ನು ಮಾಡುವ ಮೂಲಕ ವಿಷ್ಣು ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಸಾಹಸಸಿಂಹನಾಗಿ ಉಳಿದಿದ್ದಾರೆ.

Vishnuvardhan Remuneration: ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗವನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ಪಾತ್ರ ಬಹುಮುಖ್ಯವಾದದ್ದು ಎಂದರೆ ತಪ್ಪಾಗಲಾರದು. ಇಬ್ಬರು ಕನ್ನಡದ ಮೇರು ನಟರು, ತಮ್ಮದೇ ಆದ ವಿಶೇಷ ಶೈಲಿ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದ ಡಾಕ್ಟರ್ ರಾಜಕುಮಾರ್ ಮತ್ತು ಡಾಕ್ಟರ್ ವಿಷ್ಣುವರ್ಧನ್ ಕನ್ನಡಿಗರ ಹೃದಯದಲ್ಲಿ ಸದಾ ಅಜರಾಮರ.

ಹೀಗೆ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡಿದ ವಿಷ್ಣುವರ್ಧನ್ ಅವರ ಜೀವನದ ಕುರಿತು ಇಲ್ಲಿದೆ ನೋಡಿ ಸಣ್ಣ ಝಲಕ್. ಹೌದು ಫ್ರೆಂಡ್ಸ್ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡ ಚಿತ್ರರಂಗವನ್ನು ಬೇರೊಂದು ಎತ್ತರಕ್ಕೆ ಕೊಂಡೊಯ್ದಂತಹ ಹಲವಾರು ನಟರಲ್ಲಿ ನಟ ವಿಷ್ಣುವರ್ಧನ್ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ.

ತಮ್ಮದೇ ಆದಂತಹ ವಿಶೇಷ ಕಥಾಹಂದರಗಳನ್ನು ಹೊಂದಿರುವಂತಹ ಹಾಗೂ ತಮಗೆ ಸೂಕ್ತವೆನಿಸುವ ಪಾತ್ರಗಳನ್ನು ಮಾಡುವ ಮೂಲಕ ವಿಷ್ಣು ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಸಾಹಸಸಿಂಹನಾಗಿ ಉಳಿದಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ಜನರಿಗೆ ಏನಾದರೊಂದು ಹೊಸತನ್ನು ಹಾಗೂ ನೀತಿ ಪಾಠವನ್ನು ತಿಳಿಸುತ್ತಿದ್ದ ವಿಷ್ಣು ಸಿನಿಮಾಗಳನ್ನು ಇಷ್ಟಪಡದ ಅಭಿಮಾನಿಗಳೇ ಇಲ್ಲ.

ಇಂತಹ ಅದ್ಭುತ ನಟ ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..ಖಾಸಗಿ ಸಂದರ್ಶನವೊಂದರಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಕುರಿತು ಮಾತನಾಡುವಾಗ ಸೂರಪ್ಪ ಬಾಬುರವರು ಅವರ ಜೊತೆ ಕೆಲಸ ಮಾಡಲು ನನಗೆ ತುಂಬಾ ಇಷ್ಟವಾಗುತ್ತಿತ್ತು. ಏಕೆಂದರೆ ಅವರು ಕಥೆಯನ್ನು ಕೇಳಿ ಅದನ್ನು ತಮ್ಮ ಜೀವನಕ್ಕೆ ಅರ್ಥೈಸಿಕೊಂಡು ಅನಂತರ ಅದಕ್ಕೆ ಜೀವ ತುಂಬುತ್ತಿದ್ದರು.

ಅಲ್ಲದೆ ಪಾತ್ರೆ ಎಷ್ಟೇ ವಿಭಿನ್ನವಾಗಿದ್ದರೂ ಕೂಡ ಅದರೊಳಗೆ ಪರಕಾಯ ಪ್ರವೇಶ ಮಾಡುವ ಮೂಲಕ ಅದನ್ನು ಗೆಲ್ಲಿಸಿ ಕೊಡುವಂತಹ ಶಕ್ತಿ ವಿಷ್ಣುದಾದನಿಗಿತ್ತು. ಯಜಮಾನ, ಹೃದಯವಂತ, ಸಿಂಹಾದ್ರಿ ಸಿಂಹ, ವೀರಪ್ಪನಾಯಕ, ಸೂರಪ್ಪ, ಮೋಜುಗಾರ ಸೊಗಸುಗಾರ ಸೇರಿದಂತೆ ವಿಭಿನ್ನ ಹಾಗೂ ವಿಶಿಷ್ಟ ಕಥೆಯುಳ್ಳಂತಹ ಸಿನಿಮಾಗಳನ್ನು ವಿಷ್ಣುವರ್ಧನ್ ಅವರು ಮಾಡಿದ್ದಾರೆ. ಪಾತ್ರೆ ಎಷ್ಟೇ ದೊಡ್ಡದಿದ್ದರು ಹಾಗೂ ಎಷ್ಟೇ ಕಷ್ಟದಿಂದ ಮಾಡಿದ್ದರು ಕೂಡ ಅವರು 65 ಲಕ್ಷಕ್ಕಿಂತ ಹೆಚ್ಚಾಗಿ ಒಂದು ರೂಪಾಯಿ ಕೂಡ ಪಡೆಯುತ್ತಿರಲಿಲ್ಲ ಎಂಬ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.

Do you know how much Vishnuvardhan was getting for a film?

Leave a comment