Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Abhimanyu in Chakravyuha: ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸಲು ಸಾಧ್ಯವಿಲ್ಲ ಎಂಬ ಭವಿಷ್ಯ ಕೃಷ್ಣನಿಗೆ ತಿಳಿದಿದ್ದರೂ ತನ್ನ ಪ್ರಿಯ ಶಿಷ್ಯನನ್ನು ಆತ ಏಕೆ ರಕ್ಷಿಸಲಿಲ್ಲ ಗೊತ್ತೇ??

ಹೀಗಾಗಿ ಆತನನ್ನು ಬೇಗ ಕಳುಹಿಸುವಂತೆ ಕೃಷ್ಣನ ಬಳಿ ಚಂದ್ರದೇವನು ಬೇಡಿಕೊಂಡಾಗ ಶ್ರೀಕೃಷ್ಣ ಈ ರೀತಿಯಾದಂತಹ ಉಪಾಯ ಮಾಡಿದ್ದಾನೆ ಎಂದು ಪುರಾಣ ಶಾಸ್ತ್ರವು ತಿಳಿಸುತ್ತದೆ.

Get real time updates directly on you device, subscribe now.

Abhimanyu in Chakravyuha: ಸ್ನೇಹಿತರೆ, ಮಹಾಭಾರತ ಕಾಲದಲ್ಲಿ ನಡೆದ ಕುರುಕ್ಷೇತ್ರ ಯುದ್ಧವನ್ನು ಎಂದಾದರೂ ಮರೆಯಲು ಸಾಧ್ಯವೇ? ಜಗತ್ತಿಗೆ ಸರಿಯಾದ ನೀತಿ ಕಲಿಸಬೇಕು ಎಂಬ ಕಾರಣದಿಂದಲೇ ನಮ್ಮ ಪೌರಾಣಿಕ ಧರ್ಮದಲ್ಲಿ ಮಹಾಯುದ್ಧವಾದ ಕುರುಕ್ಷೇತ್ರ ಸಂಭವಿಸಿದೆ. ಲಕ್ಷಾಂತರ ಜನರ ನೆತ್ತರು ಭೂಮಿಯ ತುಂಬಾ ಹರಿದು ಕಾಲಿಡಲು ಜಾಗವಿಲ್ಲದಷ್ಟು ಹೆಣಗಳ ರಾಶಿ..

ಬಿಲ್ಲಿನಿಂದ ಹೊರಬಂದ ಬಾಣದ ಗುರಿ ಏಟಿಗೆ ತುತ್ತಾದ ಸೈನಿಕರ ಒದ್ದಾಟ, ಎಷ್ಟು ಜನ ರಾಜರುಗಳ ತಲೆ ಛಿದ್ರ ಛಿದ್ರವಾದ ಕಥೆಗಳನ್ನು ನಾವೆಲ್ಲರೂ ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಇನ್ನೂ ಸಾಮಾನ್ಯವಾಗಿ ಎಲ್ಲರೂ ಮೆಚ್ಚುವಂತಹ ಪಾತ್ರವೆಂದರೆ ಅದು ಅರ್ಜುನನ ಮತ್ತು ಸುಭದ್ರೆಯ ವೀರಪುತ್ರ ಅಭಿಮನ್ಯು. ಹೌದು ಸ್ನೇಹಿತರೆ ದ್ರೋಣಾಚಾರ್ಯರು ಹೆಣೆದಿದ್ದ ಚಕ್ರವ್ಯೂಹವನ್ನು ಭೇದಿಸಲು ಹೊರಟ ಅಭಿಮನ್ಯು ವಾಪಸ್ ಹೊರಬರಲಿಲ್ಲ.

ಹೀಗೆ ಯುದ್ಧದ ಸಂಪೂರ್ಣ ಮಾಹಿತಿ ಕುರಿತು ಅರಿವಿದ್ದಂತಹ ಶ್ರೀಕೃಷ್ಣ ಪರಮಾತ್ಮನು ತನ್ನ ಪ್ರಿಯ ಶಿಷ್ಯನನ್ನು ರಕ್ಷಿಸದಿರಲು ಕಾರಣವೇನು ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಫ್ರೆಂಡ್ಸ್ ಮೊದಲನೇದಾಗಿ ಕೌರವರ ಭಾವನಾದ ಜಯದ್ರಥನು ಪಾಂಡವರಿಂದ ಸೋಲನ್ನು ಅನುಭವಿಸಿರುತ್ತಾನೆ.

ಹೀಗಾಗಿ ದೀರ್ಘಕಾಲ ಶಿವನ ತಪಸ್ಸನ್ನು ಮಾಡಿ ಒಂದು ದಿನದ ಮಟ್ಟಿಗೆ ಅವರನ್ನು ಸೋಲಿಸುವಂತೆ ವರ ಪಡೆದಿರುತ್ತಾನೆ. ಆದ್ದರಿಂದ ಶ್ರೀಕೃಷ್ಣ ಚಕ್ರವ್ಯೂಹದೊಳಗೆ ಹೋಗದೆ ಹಾಗೂ ಅರ್ಜುನನನ್ನು ಬೇರೆ ಕಡೆ ಕಳುಹಿಸಿ ಜಯದ್ರತ ಗೆಲ್ಲುವಂತೆ ಮಾಡುವ ಮೂಲಕ ಶಿವನ ವರವನ್ನು ಪೂರ್ಣಗೊಳಿಸುತ್ತಾನೆ. ಇನ್ನು ಎರಡನೆಯದಾಗಿ ಅಭಿಮಾನ್ಯು ಚಂದ್ರದೇವನ ಮಗನಾಗಿದ್ದ ಕಾರಣ ಚಂದ್ರ ದೇವನಿಗೆ ಸಾಕಷ್ಟು ದಿನಗಳ ಕಾಲ ತನ್ನ ಪ್ರಿಯ ಮಗನನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಆತನನ್ನು ಬೇಗ ಕಳುಹಿಸುವಂತೆ ಕೃಷ್ಣನ ಬಳಿ ಚಂದ್ರದೇವನು ಬೇಡಿಕೊಂಡಾಗ ಶ್ರೀಕೃಷ್ಣ ಈ ರೀತಿಯಾದಂತಹ ಉಪಾಯ ಮಾಡಿದ್ದಾನೆ ಎಂದು ಪುರಾಣ ಶಾಸ್ತ್ರವು ತಿಳಿಸುತ್ತದೆ. ಇನ್ನು ಮೂರನೇದಾಗಿ ದಂತಕಥೆಯೊಂದು ಹೇಳುವಂತೆ ರಾಮಾಯಣದಲ್ಲಿ ಕಂಸನ ಸೇವಕನಾದ ಅಸುರನು ಅಭಿಮನ್ಯುವಾಗಿ ಜನ್ಮ
ವೆತ್ತಿರುತ್ತಾನೆ. ಆ ಸಂದರ್ಭದಲ್ಲಿ ಶ್ರೀಕೃಷ್ಣನನ್ನು ವಧೆ ಮಾಡುವ ಆವೇಶ ಅಭಿಮನ್ಯುವಿನಲ್ಲಿ ಉಕ್ಕಿ ಹರಿಯುತ್ತಿರುತ್ತದೆ.

ಹೀಗಾಗಿ ಅಭಿಮನ್ಯು ಮತ್ತು ಕೃಷ್ಣನ ನಡುವೆ ವೈರತ್ವ ಮೂಡಿದ ಕಾರಣ ಕೃಷ್ಣ ಅಸುರನನ್ನು ಹುಳುವಿನಂತೆ ವಸುಕಿ ಬಿಡುತ್ತಾನೆ. ಅನಂತರ ಮಹಾಭಾರತ ಕಾಲದಲ್ಲಿ ಸುಭದ್ರೆಯ ಉದರದೊಳಗೆ ಹೊಕ್ಕಿದ ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸುವುದು ಹೇಗೆ ಎಂಬ ವಿದ್ಯೆಯನ್ನು ಕಲಿಯುತ್ತಾನೆ. ಹೀಗಾಗಿ ಕೃಷ್ಣ ಅಭಿಮನ್ಯುವನ್ನು ರಕ್ಷಿಸಲಿಲ್ಲ.

Why Krishna did not save Abhimanyu in Chakravyuha

Get real time updates directly on you device, subscribe now.

Leave a comment