Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Good Lifestyle: ಬದುಕಲ್ಲಿ ನೆಮ್ಮದಿ ಮುಖ್ಯ ಅಂದ್ರೆ ಈ ಅಭ್ಯಾಸಗಳನ್ನ ಇಂದೇ ಬಿಟ್ಟುಬಿಡಿ, ನಿಮ್ಮ ಬದುಕು ಬಂಗಾರವಾಗುತ್ತದೆ.

ನಮ್ಮೊಡನೆ ಆತ್ಮೀಯರು, ಸ್ನೇಹಿತರು ಇರುತ್ತಾರೆ, ಅವರು ನಮ್ಮನ್ನು ಇಷ್ಟಪಡುತ್ತಾರೆ.

Good Lifestyle: ಬದುಕಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಶಾಂತಿ ಮತ್ತು ನೆಮ್ಮದಿ. ಆ ಎರಡು ಇದ್ದರೆ ಹಣ, ಅಂತಸ್ತು, ಕೀರ್ತಿ ಎಲ್ಲವೂ ತಾನಾಗಿಯೇ ಬರುತ್ತದೆ. ಹಲವಾರು ಜನರು ಏನು ಬೇಕು ಎಂದರೆ, ಹಣ ಅಂತಸ್ತು, ಕೀರ್ತಿ ಎನ್ನುತ್ತಾರೆ. ಆದರೆ ಅದೆಲ್ಲಕ್ಕಿಂತ ನೆಮ್ಮದಿ ನಮಗೆ ಸಂತೋಷ ನೀಡುವುದು, ನೆಮ್ಮದಿ ಇದ್ದರೆ ನಿಮ್ಮ ಕೆಲಸದಲ್ಲಿ ಶ್ರದ್ಧೆ ಶುರುವಾಗಿ, ಐಷಾರಾಮಿ ಜೀವನ, ಹಣ ಆಸ್ತಿ ಎಲ್ಲವೂ ಬರುತ್ತದೆ. ಒಂದು ವೇಳೆ ನೀವು ಕೂಡ ಬದುಕಲ್ಲಿ ನೆಮ್ಮದಿ ಬೇಕು ಎಂದುಕೊಂಡಿದ್ದರೆ ಈ ಕೆಲವು ಅಭ್ಯಾಸಗಳನ್ನು ಇಂದೇ ನಿಲ್ಲಿಸಿ..

ನೆಮ್ಮದಿ ಕಿತ್ತುಕೊಳ್ಳುವ 8 ಅಭ್ಯಾಸಗಳು.

1. ಇನ್ನೊಬ್ಬರ ಖುಷಿಗಾಗಿ ನಿಮ್ಮನ್ನು ಕೆಳಗೆ ಹಾಕಬೇಡಿ:

ಬದುಕಲ್ಲಿ ನಮ್ಮ ಜೊತೆಗಿರುವ ಎಲ್ಲರೂ ಸಂತೋಷವಾಗಿರಬೇಕು, ಅವರನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುವುದು ಸಹಜಗುಣ. ಆದರೆ ಇನ್ಯಾರನ್ನೋ ಸಂತೋಷ ಪಡಿಸಲು ನಿಮ್ಮನ್ನು ನೀವೇ ತೊಂದರೆ ಅನುಭವಿಸುವಂಥ ಪರಿಸ್ಥಿತಿಗೆ ಹೋಗಬೇಡಿ. ಅದರಿಂದ ನಿಮ್ಮ ನೆಮ್ಮದಿ ಹಾಳಾಗುತ್ತದೆ.

2. ಮತ್ತೊಬ್ಬರ ಮೇಲೆ ನಿಮ್ಮ ಅಭಿಪ್ರಾಯ ಹೇರಬೇಡಿ:

ನಮ್ಮೊಡನೆ ಆತ್ಮೀಯರು, ಸ್ನೇಹಿತರು ಇರುತ್ತಾರೆ, ಅವರು ನಮ್ಮನ್ನು ಇಷ್ಟಪಡುತ್ತಾರೆ. ಹಾಗೆಂದ ಮಾತ್ರಕ್ಕೆ ನಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರಬಾರದು. ನಮ್ಮ ಮಾತನ್ನು ಅವರು ಕೇಳಲೇಬೇಕು ಎಂದು ಕೂಡ ಅಂದುಕೊಳ್ಳಬಾರದು, ಅವರಿಗು ಒತ್ತಡ ಹಾಕಬಾರದು. ಅದರಿಂದ ನಿಮ್ಮ ಬದುಕು ಸ್ಥಿಮಿತ ಕಳೆದುಕೊಳ್ಳುತ್ತದೆ.

3. ಪಾಸ್ಟ್, ಫ್ಯುಚರ್ ಎರಡನ್ನು ಬಿಟ್ಟುಬಿಡಿ:

ನಾವು ಈಗ ನಮ್ಮ ಬದುಕಿನಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಮಾತ್ರ ಯೋಚಿಸಬೇಕು. ಅದನ್ನು ಬಿಟ್ಟು ಹಿಂದೆ ನಡೆದ ಘಟನೆಗಳು, ಮುಂದೆ ನಡೆಯಬಹುದಾದ ಘಟನೆಗಳು, ಇವುಗಳ ಬಗ್ಗೆ ಯೋಚಿಸಿ ಏನಾಗಬಹುದು ಎಂದು ತಲೆಕೆಡಿಸಿಕೊಂಡು ಇರುವ ಸಂತೋಷವನ್ನು ನೆಮ್ಮದಿಯನ್ನು ಕಳೆದುಕೊಳ್ಳುಬಾರದು.

4. ಅತಿಯಾದ ಯೋಚನೆಗೆ ಫುಲ್ ಸ್ಟಾಪ್ ಹಾಕಿ:

ಕೆಲವರ ಸ್ವಭಾವ ಏನು ಎಂದರೆ ಅವರು ಯಾವಾಗಲೂ ಕೂಡ ಒಂದಲ್ಲಾ ಒಂದು ವಿಷಯದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅದರಿಂದ ತಮ್ಮ ನೆಮ್ಮದಿಯನ್ನು ಕಳೆದುಕೊಂಡು, ಇತರರ ನೆಮ್ಮದಿಯನ್ನು ದೂರ ಮಾಡುತ್ತಾರೆ. ಹಾಗಾಗಿ ಬದುಕಲ್ಲಿ ಸಂತೋಷ ಇರಬೇಕು ಎಂದರೆ, ಅತಿಯಾಗಿ ಯೋಚಿಸುವುದನ್ನು ಬಿಡಬೇಕು.

5. ಅಲಸ್ಯತನ ಬಿಟ್ಟುಬಿಡಿ:

ಮನುಶ್ಯನ ದೊಡ್ಡ ಶತ್ರು ಇದು. ಒಬ್ಬ ಮನುಷ್ಯನಲ್ಲಿ ಅಲಸ್ಯತನ ಇದ್ದಷ್ಟು ಅವನು ಮಾಡಬೇಕಾದ ಕೆಲಸಗಳು ತಡವಾಗುತ್ತಾ ಹೋಗುತ್ತದೆ. ಇದರಿಂದ ಬದುಕು ಹಳಿ ತಪ್ಪುತ್ತದೆ. ಆಲಸ್ಯದಲ್ಲಿ ಇಂದು ಮಾಡಬೇಕಾದ ಕೆಲಸವನ್ನು ನಾಳೆ ಮಾಡ್ತೀನಿ, ನಾಳಿದ್ದು ಮಾಡ್ತೀನಿ ಎಂದು ಆಲಸ್ಯ ತೋರಿಸದೆ, ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಬೇಕು.

6. ಸೆಲ್ಫ್ ಕೇರ್ ತೆಗೆದುಕೊಳ್ಳದೆ ಇರುವುದು:

ಕೆಲವರು ಬೇರೊಬ್ಬದ ಯೋಚಿಸಿ, ಅವರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ ಹೊರತು ತಮ್ಮ ಬಗ್ಗೆ ತಾವು ಕೇರ್ ತೆಗೆದುಕೊಳ್ಳುವುದಿಲ್ಲ. ಆದರೆ ಅದು ತಪ್ಪು, ಮೊದಲಿಗೆ ನಿಮ್ಮ ಬಗ್ಗೆ ನೀವು ಕೇರ್ ತೆಗೆದುಕೊಳ್ಳಿ, ನೀವು ಚೆನ್ನಾಗಿದ್ದರೆ ಮಾತ್ರ ಇನ್ನೊಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ. ಹೊಸದಾಗಿ ಬುಕ್ ಓದುವುದು, ಅಡುಗೆ ಟ್ರೈ ಮಾಡುವುದು ಹೀಗೆ ಹೊಸ ಅಭ್ಯಾಸಗಳನ್ನು ಶುರು ಮಾಡಿಕೊಳ್ಳಿ.

7. ಇನ್ನೊಬ್ಬರನ್ನು ಕ್ಷಮಿಸದೇ ಇರುವುದು:

ನಿಮ್ಮ ಜೊತೆಗಿರುವ ವ್ಯಕ್ತಿ, ನಿಮಗೆ ಹತ್ತಿರದವರು ಅಥವಾ ಯಾರೇ ಆದರೂ ತಪ್ಪು ಮಾಡಿದರೆ ಅವರನ್ನು ಕ್ಷಮಿಸಿಬಿಡಿ. ದ್ವೇಷ ನಿಮ್ಮ ಮನಸ್ಸಲ್ಲಿ ಭಾರದ ಹಾಗೆ ಇರುತ್ತದೆ. ಹಾಗಾಗಿ ದ್ವೇಷ ಬಿಟ್ಟು, ಎಲ್ಲರನ್ನು ಕ್ಷಮಿಸಿ ಸಂತೋಷವಾಗಿರಿ.

8. ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳಬೇಡಿ:

ನಿಮ್ಮ ಬದುಕು ನಿಮ್ಮದು, ಅವರ ಬದುಕು ಅವರದ್ದು. ಹಾಗಾಗಿ ನಿಮ್ಮ ಬದುಕನ್ನು ಬೇರೆಯವರಿಗೆ ಹೋಲಿಸಿಕೊಂಡು ನೀವು ನೋವು ಪಡುವ ಅಗತ್ಯವಿಲ್ಲ. ನಿಮ್ಮ ಬದುಕಲ್ಲಿ, ನಿಮ್ಮ ಬಳಿ ಇರುವುದರಲ್ಲಿ ಸಂತೋಷವಾಗಿರಿ. ಆಗ ಎಲ್ಲವೂ ಚೆನ್ನಾಗಿರುತ್ತದೆ.

If you want to lead a good and healthy lifestyle, you must avoid these things.

Leave a comment