MSSC Scheme: ಮಹಿಳೆಯರಿಗಾಗಿ ಮೋದಿ ಸರ್ಕಾರದಿಂದ ವಿಶೇಷ ಹೂಡಿಕೆ ಯೋಜನೆ! ಬಂಪರ್ ರಿಟರ್ನ್ಸ್ ಇರುವ ಯೋಜನೆಯನ್ನು ಬಿಡಬೇಡಿ.
ಈ ಯೋಜನೆಯಲ್ಲಿ ನಿಮಗೆ 7.50% ಬಡ್ಡಿದರ ಸಿಗಲಿದ್ದು,
MSSC Scheme: ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ ಆಗಬೇಕು, ಮಹಿಳೆಯರು ಸ್ವಾತಂತ್ರ್ಯವಾಗಿ ಹಣಕಾಸು ಸಂಪಾದನೆ ಮಾಡಬೇಕು, ಹೂಡಿಕೆ ಮಾಡಿ ಅವರ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದ ಹಾಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ವರ್ಷದ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿ ಇರುವ ಈ ಯೋಜನೆಯ ಬಗ್ಗೆ ತಿಳಿಸಿದರು..
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ:
ಕೇಂದ್ರ ಸರ್ಕಾರ ಮಹಿಳೆಯರು ಹೂಡಿಕೆ ಮಾಡುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ನೀಡಲು ಪರಿಚಯಿಸಿರುವ ಯೋಜನೆಯ ಹೆಸರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ. 2023ರ ಏಪ್ರಿಲ್ ನಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಬಂದ ಕೇವಲ 7 ತಿಂಗಳುಗಳ 18 ಲಕ್ಷ ಜನರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ..
ಬಡ್ಡಿದರ:
ಈ ಯೋಜನೆಯಲ್ಲಿ ನಿಮಗೆ 7.50% ಬಡ್ಡಿದರ ಸಿಗಲಿದ್ದು, ಇದು ಕಾಂಪೌಂಡಿಂಗ್ ಬಡ್ಡಿ ಆಗಿರಲಿದೆ. ಈ ಬಡ್ಡಿದರವನ್ನು ನೀವು ಪಾವತಿ ಮಾಡಿರುವ ಅಸಲಿನ ಜೊತೆಗೆ ಸೇರಿಸಲಾಗುತ್ತದೆ.
ಅಕಾಲಿಕ ಹಿಂಪಡೆಯುವಿಕೆ ಆಯ್ಕೆ:
ಒಂದು ವೇಳೆ ತುರ್ತು ಪರಿಸ್ಥಿತಿ ಇದ್ದರೆ, ಯೋಜನೆ ಶುರು ಮಾಡಿ 1 ವರ್ಷದ ನಂತರ ನೀವು ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಪಡೆಯಬಹುದು. ದಿಢೀರ್ ಎಂದು ಹೀಗೆ ಹಣ ಹಿಂಪಡೆಯಲು 5.5% ಬಡ್ಡಿ ಮಾತ್ರ ನೀಡಲಾಗುತ್ತದೆ.
ಖಾತೆ ತೆರೆಯಲು 2025ರ ಮಾರ್ಚ್ ಕೊನೆಯ ದಿನ:
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಖಾತೆ ತೆರೆಯಲು ಇನ್ನು ಒಂದು ವರ್ಷ ಸಮಯ ಇದೆ, 2025ರ ಮಾರ್ಚ್ ಒಳಗೆ ಆಸಕ್ತರು ಈ ಖಾತೆ ತೆರೆಯಬೇಕು. ಮಹಿಳೆಯರು ಹೂಡಿಕೆ ಮಾಡುವುದಕ್ಕೆ ಶುರು ಮಾಡಬೇಕು ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
2 ವರ್ಷಗಳ ಪೂರ್ತಿ ಅವಧಿ ಮುಗಿದ ನಂತರ ನೀವು ಹಣವನ್ನು ವಾಪಸ್ ಪಡೆದರೆ, ನಿಮ್ಮ ಅಕೌಂಟ್ ನಲ್ಲಿ ವಹಿವಾಟು ನಡೆಸಲು ಆಗುವುದಿಲ್ಲ. ಮತ್ತೆ ಅಲ್ಲಿ ಹಣ ಹೂಡಿಕೆ ಮಾಡಲು, ಬಡ್ಡಿ ಪಡೆಯಲು ಆಗುವುದಿಲ್ಲ. ಈ ಯೋಜನೆಯಲ್ಲಿ ಒಬ್ಬ ಮಹಿಳೆ ಒಂದು ಖಾತೆ ತೆರೆಯಲು ಅವಕಾಶವಿದೆ, ಹೂಡಿಕೆಯ ಮೊತ್ತದ ಬಗ್ಗೆ ಹೇಳುವುದಾದರೆ ಮಿನಿಮಮ್ ₹1000, ಮ್ಯಾಕ್ಸಿಮಮ್ ₹2,00,000 ಹೂಡಿಕೆ ಮಾಡಬಹುದು.
ಎಲ್ಲಾ ವಯಸ್ಸಿನ ಮಹಿಳೆಯರು ಖಾತೆ ಶುರು ಮಾಡಬಹುದು, ಅಕಸ್ಮಾತ್ ಖಾತೆ ತೆರೆದವರು ನಿಧನರಾದರೆ 6 ತಿಂಗಳ ಒಳಗೆ ಅಕೌಂಟ್ ಕ್ಲೋಸ್ ಮಾಡಬೇಕು. ನಿಮಗೆ ಹತ್ತಿರ ಇರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯಲ್ಲಿ ಹಣ ಉಳಿತಾಯ ಮಾಡುವುದಕ್ಕೆ ಶುರು ಮಾಡಬಹುದು..ಆನ್ಲೈನ್, ಕ್ಯಾಶ್, ಚೆಕ್ ಯಾವ ರೀತಿಯಲ್ಲಾದರು ಉಳಿತಾಯ ಪಾವತಿ ಮಾಡಬಹುದು.
Here are the necessary details about the Mahila Samman Savings Certificate.